ನವದೆಹಲಿ: ಜಗತ್ತಿನ ನಂ.1 ಧನಿಕ ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಅದರ ಸಿಇಒ ಆಗಿರುವ ಭಾರತ ಮೂಲದ ಪರಾಗ್ ಅಗರ್ವಾಲ್ ಅವರನ್ನು ಬದಲಾಯಿಸುವ ಸುಳಿವು ನೀಡಿದ್ದಾರೆ. ಈ ಬಗ್ಗೆ ಪರಾಗ್ ಅವರಿಗೆ ಟ್ವಿಟ್ಟರ್ನಲ್ಲಿ ತಮ್ಮ ಹುದ್ದೆಯ ಕುರಿತು ಕೇಳಿ ಬಂದ ಪ್ರಶ್ನೆಗೆ, 'ನೀವು ಚಿಂತಿಸಬೇಕಾಗಿರುವುದು ನನ್ನ ಹುದ್ದೆಗಾಗಿ ಅಲ್ಲ, ಟ್ವಿಟ್ಟರ್ನ ಭವಿಷ್ಯಕ್ಕಾಗಿ' ಎಂದು ಹೇಳಿದ್ದಾರೆ.
ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಇನ್ನಷ್ಟು ಮಜಾ ಮಾಡಲು ಬಳಸೋಣ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಟ್ವಿಟ್ಟರ್ ಖರೀದಿಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಸ್ಥೆಗೆ ಹೊಸ ಸಿಇಒ ಮತ್ತು ತಂಡದ ನಿಯೋಜನೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.
ಟ್ವಿಟರ್ ಸಿಇಒ ಪರಾಗ್ ಅಕರ್ವಾಲ್ ಮತ್ತು ಅವರ ತಂಡ ಈಗ ಅನಿಶ್ಚಿತತೆಯನ್ನು ಹೊಂದಿದೆ ಎಂದು ಬಳಕೆದಾರರೊಬ್ಬರು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪರಾಗ್, ಧನ್ಯವಾದಗಳು. ಆದರೆ ನನ್ನ ಹುದ್ದೆಯ ಬಗ್ಗೆ ಚಿಂತೆ ಬೇಡ. ಜನರ ಸೇವೆ ಮತ್ತು ಮಾಧ್ಯಮವನ್ನು ಜನರು ಬಳಸುವುದನ್ನು ಹೆಚ್ಚಿಸುವುದೇ ನಮ್ಮ ಗುರಿ ಎಂದಿದ್ದಾರೆ. ನಿಮ್ಮನ್ನು ಸಿಇಒ ಸ್ಥಾನದಿಂದ ಕಿತ್ತು ಹಾಕಲಾಗಿದೆಯೇ ಎಂಬ ಇನ್ನೊಬ್ಬರ ಪ್ರಶ್ನೆಗೆ, ಇಲ್ಲ. ನಾವು ಇನ್ನೂ ಇಲ್ಲಿಯೇ ಇದ್ದೇವೆ ಎಂದು ಉತ್ತರಿಸಿದ್ದಾರೆ.
ಓದಿ: ಉತ್ತರ ಪ್ರದೇಶದಲ್ಲಿ ಗುಜರಾತ್ ಎಟಿಎಸ್ನಿಂದ 775 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ