ETV Bharat / business

ಸತ್ಯ ನಾದೆಲ್ಲಾ, ಮಸ್ಕ್​, ಪಿಚ್ಚೈ ದೈನಂದಿನ ಚಟುವಟಿಕೆ ಹೇಗಿದೆ ಗೊತ್ತಾ? ಅವರೇ ಹೇಳಿದ್ದಾರೆ ನೋಡಿ

author img

By

Published : Mar 9, 2023, 2:59 PM IST

ಟೆಕ್​ ಜಗತ್ತಿನ ಸೆಲಿಬ್ರಿಟಿಗಳು ಸಾಕಷ್ಟು ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ. ಇದರಿಂದ ಅವರ ಜೀವನ ಶೈಲಿ ಮೇಲೆ ಪರಿಣಾಮ ಬೀರುತ್ತದೆ. ಆದರೆ, ತಮ್ಮ ದಿನವನ್ನು ಸುಂದರವಾಗಿಸಿಕೊಳ್ಳಲು ಅವರು ಅನೇಕ ವ್ಯಾಯಾಮ, ಚಟುವಟಿಕೆ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

do-you-know-the-daily-activities-of-satya-nadella-musk-pichai-see-what-he-himself-said

ಬೆಂಗಳೂರು​: ಆರೋಗ್ಯಕರ ಜೀವನ ಶೈಲಿಗೆ ವ್ಯಾಯಮ ಅತ್ಯಗತ್ಯ ಎಂದರೆ ತಪ್ಪಾಗಲಾರದು. ಅದರಲ್ಲೂ ಬೆಳಗ್ಗಿನ ಹೊತ್ತಿನ ವ್ಯಾಯಮಗಳು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಸಾಕಷ್ಟು ಲಾಭವನ್ನು ಹೊಂದಿರುತ್ತದೆ. ಇದಕ್ಕಾಗಿ ಪ್ರತಿಭೆಯೊಬ್ಬರು ತಮ್ಮದೇ ಆತ ವಿಧದ ಅಂದರೆ, ವಾಕಿಂಗ್​, ಕ್ರೀಡೆ, ಯೋಗದಂತಹ ಚಟುವಟಿಕೆಗಳಿಗೆ ಮೊರೆ ಹೋಗಿ, ಅದನ್ನು ರೂಢಿಸಿಕೊಳ್ಳುತ್ತಾರೆ. ಜನಸಾಮಾನ್ಯರ ಚಟುವಟಿಕೆಗೆ ಹೆಚ್ಚಿನ ಗಮನ ನೀಡದ ನಾವು ಸೆಲಿಬ್ರಿಟಿಗಳ ಆರೋಗ್ಯಕರ ಶೈಲಿ ತಿಳಿಯಲು ಹೆಚ್ಚಿನ ಕುತೂಹಲವನ್ನು ಹೊಂದಿರುತ್ತೇವೆ. ಜಗತ್ತಿನ ಬಿಲಿನಿಯರ್​ ಪಟ್ಟಿಯಲ್ಲಿರುವ ಸತ್ಯ ನಾದೆಲ್ಲಾ, ಸುಂದರ್​ ಪಿಚ್ಚೈ, ಬಿಲ್​​ ಗೇಟ್ಸ್​, ಟಿಮ್​ ಕುಕ್​ ಮತ್ತು ಎಲಾನ್​ ಮಸ್ಕ್​ ಜೀವನ ಶೈಲಿಯ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ.

ಧ್ಯಾನ ಅವಶ್ಯ ಎನ್ನುತ್ತಾರೆ ಸತ್ಯ ನಾದೆಲ್ಲಾ: ಭಾರತೀಯ ಮೂಲದವರಾಗಿರುವ ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ, ತಾವು ಎಲ್ಲೇ ಇದ್ದರೂ, ಎಷ್ಟು ತಡವಾಗಿ ಮಲಗಿದರೂ, ಕೆಲಸ ಒತ್ತಡ ನೀಡುತ್ತಿದ್ದರೂ ಬೆಳಗ್ಗೆ ಒಂದೂವರೆ ಗಂಟೆ ಓಟದ ಅಭ್ಯಾಸವನ್ನು ರೂಢಿಸಿಕೊಂಡಿದ್ದರಂತೆ. ಅದೇ ರೀತಿ, ಬೆಳಗ್ಗೆ ಎದ್ದಾಕ್ಷಣ ಎಲ್ಲಾ ನಕರಾತ್ಮಕ ಆಲೋಚನೆ ತೊಡೆದು ಹಾಕಲು 10 ನಿಮಿಷ ಧ್ಯಾನ ಮಾಡುತ್ತೇನೆ. ಪ್ರತಿ ನಿತ್ಯ ನನ್ನ ಎಲ್ಲಿಂದ ಬಂದೆ ಎಂಬ ಮೂಲವನ್ನು ನೆನಪಿಸಿಕೊಳ್ಳುತ್ತೇನೆ. ಇದರಿಂದ ನನ್ನ ದಿನ ಸುಗಮವಾಗುತ್ತದೆ. ಇದೇ ಕಾರಣಕ್ಕೆ ಇದನ್ನು ಪ್ರತಿ ನಿತ್ಯ ರೂಢಿಮಾಡಿಕೊಂಡಿದ್ದೇನೆ.

ಬೈಸಿಕಲ್​ನಲ್ಲಿದೆ ಶಕ್ತಿ ಎಂದ ಸುಂದರ್​ ಪಿಚ್ಚೈ: ಬಾಲ್ಯದಿಂದಲೂ ಕ್ರಿಕೆಟ್​ ಮತ್ತು ಫುಟ್ಬಾಲ್​ ನನಗೆ ಇಷ್ಟ. ಇದೇ ಕಾರಣಕ್ಕೆ ನಾನು ವ್ಯಾಯಾಮಕ್ಕಾಗಿ ಆಟವನ್ನು ಆರಿಸಿಕೊಂಡೆ. ವಾರದಲ್ಲಿ ಎರಡು ಅಥವಾ ಮೂರು ಸಲ ಆಟವಾಡುತ್ತೇನೆ. ಈ ಮೂಲಕ ದಿನದ ಮೂಡ್​ ಚೆನ್ನಾಗಿಸಿಕೊಳ್ಳುತ್ತೇನೆ. ಇದರಿಂದ ದೇಹ ಕೂಡ ಉತ್ತೇಜನವಾಗಿದೆ. ಮತ್ತೊಂದೆಡೆ, ನಾನು ಸೈಕಲ್​ ಓಡಿಸುತ್ತೇವೆ. ಇದರಿಂದ ಸ್ನಾಯುಗಳು ಆರೋಗ್ಯದ ಜೊತೆಗೆ ಶಕ್ತಿ ಕೂಡ ಸಿಗಲಿದೆ. ಇದೇ ಕಾರಣದಿಂದ ನಾನು ಸುಲಭವಾಗಿ ದೂರವನ್ನು ನಡೆಯಲು, ಮೆಟ್ಟಿಲು ಇಳಿಯಲು ಸಹಾಯಕವಾಗುತ್ತದೆ.

ಟ್ರೇಡ್​ಮಿಲ್​ನಲ್ಲಿ ಓಡುತ್ತೇನೆ ಎನ್ನುತ್ತಾರೆ ಬಿಲ್​​ ಗೇಟ್ಸ್: ಬೆಳಗ್ಗಿನ ವ್ಯಾಯಾಮಗಳು ನಿಮ್ಮ ಏಕಾಗ್ರತೆ ಮತ್ತು ​​ಅರಿವು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು 2019ರಲ್ಲಿ ಬ್ರಿಟಿಷ್​ ಜರ್ನಲ್​ ಆಫ್​ ಸ್ಪೋರ್ಟ್​ ಮೆಡಿಸಿನ್​ ನಲ್ಲಿ ಓದಿದ್ದೆ. ಅಂದಿನಿಂದಲೇ, ಬೆಳಗ್ಗಿನ ಎದ್ದ ಬಳಿಕ ಟ್ರೇಡ್​ ಮಿಲ್​ನಲ್ಲಿ ಒಂದು ಗಂಟೆ ಓಡುತ್ತೇನೆ. ಇದರ ಹೊರತಾಗಿ ಯಾವುದೇ ವ್ಯಾಯಾಮವನ್ನು ನಾನು ಮಾಡುವುದಿಲ್ಲ. ಯಾವ ದಿನ ನಾನು ಓಡುವುದಿಲ್ಲವೋ ಆ ದಿನ ದಿನವೇ ಅನ್ನಿಸುವುದಿಲ್ಲ. ಯಾವುದೋ ರೀತಿ ಅತೃಪ್ತಿ ಇಡೀ ದಿನ ಕಾಡುತ್ತದೆ. ಇದೇ ಕಾರಣಕ್ಕೆ ರಜೆ ಹೋಗಲಿ ಅಥವಾ ಎಲ್ಲಿಗೆ ಹೋಗಲಿ ಟ್ರೇಡ್​ಮಿಲ್​ನಲ್ಲಿ ಒಂದು ಗಂಟೆ ಓಡುವುದನ್ನು ತಪ್ಪಿಸುವುದಿಲ್ಲ ಎನ್ನುತ್ತಾರೆ.

ಆಲಸ್ಯ ಓಡಿಸಲು ಬೇಕು ವ್ಯಾಯಾಮ ಎಂದ ಟಿಮ್​ ಕುಕ್​: ಬಾಲ್ಯದಿಂದಲೂ ನಾನು 3.45ಕ್ಕೆ ನಾನು ಏಳುತ್ತೇನೆ. ಈ ಸಮಯದಲ್ಲಿ ಎದ್ದಾಗ ಆಲಸ್ಯ ಓಡಿಸಿ, ಮಿದುಳು ಕ್ರಿಯಾಶೀಲವಾಗಿರುತ್ತದೆ. ಮನೆಯಲ್ಲೇ ಜಿಮ್​ ಇದ್ದರೂ, ನಾನು ಜಿಮ್​ ಮತ್ತು ವ್ಯಾಯಾಮಕ್ಕಾಗಿ ಪಾರ್ಕ್​ಗೆ ಹೋಗುತ್ತೇನೆ. ಇದರ ಜೊತೆಗೆ ಹೊಸ ಟ್ರೆಂಡ್​ ಕೂಡ ನಾನು ಗಮನಿಸುತ್ತೇನೆ. ಸಾಮಾನ್ಯ ಜನರ ಅವಶ್ಯಕತೆಯಿಂದ ಉತ್ತಮ ಬ್ಯುಸಿನೆಸ್​ ಐಡಿಯಾ ಬರುತ್ತದೆ ಎಂದು ನಾನು ನಂಬಿದ್ದೇನೆ. ಇದೇ ಕಾರಣಕ್ಕೆ ನಾನು ಪಾರ್ಕ್​ಗಳಿಗೆ ವಾಕ್​ ಮಾಡಲು ಹೋಗುತ್ತೇನೆ. ಜೊತೆಗೆ ಜಿಮ್​ನಲ್ಲಿ ತೂಕದ ತರಬೇತಿಯನ್ನು ಪಡೆಯುತ್ತೇನೆ.

ಮಾರ್ಷಲ್​ ಆರ್ಟ್ಸ್​ ಅಂದ್ರೆ ಇಷ್ಟ ಎಂದ ಮಸ್ಕ್​: ಓಟ, ನಡಿಗೆ ನನಗೆ ಇಷ್ಟವಿಲ್ಲ. ತಜ್ಞರ ಮಾರ್ಗದರ್ಶನದಲ್ಲಿ ನಾನು ದೂಕದ ತರಬೇತಿ ಪಡೆಯುತ್ತೇನೆ. ಬಾಲ್ಯದಿಂದಲೂ ಮಾರ್ಷಲ್​ ಆರ್ಟ್ಸ್​​ ಅಂದ್ರೆ ನನಗೆ ಇಷ್ಟ. ಅದರ ಮೇಲಿನ ಪ್ರೇಮದಿಂದಲೇ ನಾವು ಥೇಕ್ವೊಂಡೊ, ಕರಾಟೆ ಮತ್ತು ಜೂಡೊವನ್ನು ನಾನು ಪ್ರತಿನಿತ್ಯ ಕೆಲವು ಸಮಯ ಮಾಡುತ್ತೇವೆ. ನಮ್ಮ ಮಕ್ಕಳು ಕೂಡ ಆರನೇ ವಯಸ್ಸಿನಿಂದಲೇ ಇದರ ತರಬೇತಿ ಆರಂಭಿಸಿದ್ದಾರೆ. ಮಾರ್ಷಲ್​ ಆರ್ಟ್ಸ್​​ಗಳು ಆತ್ಮ ವಿಶ್ವಾಸ ಮತ್ತು ಸ್ನಾಯುಗಳ ಶಕ್ತಿಯನ್ನು ಬೆಳೆಸುತ್ತದೆ.

ಇದನ್ನೂ ಓದಿ: ನಕಾರಾತ್ಮಕ ಭಾವನೆಯಿಂದಲೂ ಯಶಸ್ಸು ಸಾಧ್ಯ; ಆದರೆ, ಆರೋಗ್ಯದ ಮೇಲೆ ಪರಿಣಾಮ ಹೆಚ್ಚು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.