ETV Bharat / business

ಕ್ರೆಡಿಟ್​ ಕಾರ್ಡ್​ ಪಯೋಜನಗಳೇನು? ಮಿತಿಗಳೇನು?: ಹೇಗೆಲ್ಲ ಬಳಸಿದರೆ ಉತ್ತಮ! - ಸುಲಭ ಸಾಲ ಸೌಲಭ್ಯ

ಕ್ರೆಡಿಟ್ ಕಂಪನಿಗಳು ಉತ್ತಮ ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ನೀವು ಕಾರ್ಡ್ ಅನ್ನು ಬಳಸುವ ವಿಧಾನವನ್ನು ಆಧರಿಸಿ, ಕಂಪನಿಗಳು ಈ ಸಾಲವನ್ನು ಅನುಮೋದಿಸುತ್ತವೆ. ಅವರು ಈ ಸಾಲದ ಕೊಡುಗೆಗಳ ಬಗ್ಗೆ ಗ್ರಾಹಕರಿಗೆ ತಿಳಿಸುತ್ತಾರೆ. ಅಗತ್ಯವಿದ್ದಾಗ ನೀವು ಒಂದೇ ಕ್ಲಿಕ್‌ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

Credit card benefits come at a cost? Pay heed
http://10.10.50.80:6060//finalout3/odisha-nle/thumbnail/16-December-2022/17219707_799_17219707_1671158026268.png
author img

By

Published : Dec 16, 2022, 9:18 AM IST

ಹೈದರಾಬಾದ್: ಕ್ರೆಡಿಟ್ ಕಾರ್ಡ್‌ಗಳು ನಮ್ಮ ಜೀವನವನ್ನು ಸುಲಭ ಮತ್ತು ಸರಳಗೊಳಿಸಿವೆ ಹಾಗೂ ಗೊಳಿಸುತ್ತಿವೆ. ಬ್ಯಾಂಕ್​ಗಳು ಕ್ರೆಡಿಟ್​ ಕಾರ್ಡ್​ಗಳ ಮೂಲಕ ಬಹುವಿಧದ ಪ್ರಯೋಜನಗಳನ್ನು ನೀಡುತ್ತಿವೆ. ಕ್ರೆಡಿಟ್ ಕಾರ್ಡ್​ಗಳಿಂದ ಖರೀದಿಗಳನ್ನು ಮಾಡುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು. ಎಟಿಎಂ ನಿಂದ ನಗದು ಪಡೆಯಬಹುದು, ವೈಯಕ್ತಿಕ ಸಾಲಗಳನ್ನು ತೀರಿಸಬಹುದು ಹಾಗೂ ಪಡೆಯಬಹುದು.

ಆದರೆ, ಇದೆಲ್ಲವೂ ವೆಚ್ಚದ ರೂಪದಲ್ಲೇ ಇರುತ್ತೆ ಹಾಗೂ ಸರಿಯಾಗಿ ಕಾರ್ಡ್​ ಬಳಸುವವರೆಗೆ ಮಾತ್ರವೇ ನೀವು ಪ್ರಯೋಜನಗಳನ್ನು ಆನಂದಿಸಬಹುದು. ನಿಮ್ಮ ಕಡೆಯಿಂದ ಯಾವುದೇ ಲೋಪ ಕಂಡು ಬಂದರೆ ಹಣಕಾಸಿನ ನಷ್ಟ ಖಂಡಿತಾ ಆಗುತ್ತದೆ. ಗೊತ್ತು ಗುರಿ ಇಲ್ಲದೇ ಹಾಗೂ ಕ್ರೆಡಿಟ್ ಕಾರ್ಡ್​ನ ಕೆಟ್ಟ ನಿರ್ವಹಣೆ ಮಾಡಿದರೆ ಹೆಚ್ಚಿನ ಸಾಲದ ಹೊರೆ ಕಟ್ಟಿಟ್ಟ ಬುತ್ತಿ.

ತುರ್ತು ಸಂದರ್ಭದಲ್ಲಿ ಕ್ರೆಡಿಟ್​ ಕಾರ್ಡ್​​​​​ ಅತ್ಯುತ್ತಮ: ತುರ್ತಾಗಿ ನಮಗೆ ನಗದು ಬೇಕು ಎಂಬ ಪರಿಸ್ಥಿತಿ ಸೃಷ್ಟಿಯಾದಾಗ ನಾವು ಲಭ್ಯವಿರುವ ಎಲ್ಲ ಮಾರ್ಗಗಳನ್ನು ನಾವು ಅನ್ವೇಷಿಸುತ್ತೇವೆ. ಖರೀದಿಗಳನ್ನು ಮಾಡಲು ನಾವು ಕ್ರೆಡಿಟ್ ಕಾರ್ಡ್ ಅನ್ನು ಹೆಚ್ಚು ಬಳಸುತ್ತೇವೆ. ಏಕೆಂದರೆ ಇದಕ್ಕೆ ತಕ್ಷಣವೇ ಹಾರ್ಡ್ ಕ್ಯಾಶ್ ಅಗತ್ಯವಿಲ್ಲ. ಅನೇಕರು ವೈಯಕ್ತಿಕ ಸಾಲ ತೆಗೆದುಕೊಳ್ಳಲು ಬಯಸುತ್ತಾರೆ. ಕೆಲವರು ತಮ್ಮ ಕ್ರೆಡಿಟ್ ಕಾರ್ಡ್‌ನಿಂದ ಎರವಲು ಪಡೆಯುತ್ತಾರೆ. ಅದೂ ಯಾವುದೇ ದಾಖಲೆಗಳ ಅಗತ್ಯವಿಲ್ಲದೇ ಸಾಲವನ್ನು ನೀಡುತ್ತದೆ.

ಕ್ರೆಡಿಟ್ ಕಂಪನಿಗಳು ಉತ್ತಮ ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ನೀವು ಕಾರ್ಡ್ ಅನ್ನು ಬಳಸುವ ವಿಧಾನವನ್ನು ಆಧರಿಸಿ, ಕಂಪನಿಗಳು ಈ ಸಾಲವನ್ನು ಅನುಮೋದಿಸುತ್ತವೆ. ಅವರು ಈ ಸಾಲದ ಕೊಡುಗೆಗಳ ಬಗ್ಗೆ ಗ್ರಾಹಕರಿಗೆ ತಿಳಿಸುತ್ತಾರೆ. ಅಗತ್ಯವಿದ್ದಾಗ ನೀವು ಒಂದೇ ಕ್ಲಿಕ್‌ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಇದಕ್ಕೆ ಯಾವುದೇ ಗ್ಯಾರಂಟಿ ಅಗತ್ಯವಿಲ್ಲ. ಇದನ್ನು ನಿಗದಿತ ಬಡ್ಡಿಯೊಂದಿಗೆ ನಿಗದಿತ ಅವಧಿಗೆ ತೆಗೆದುಕೊಳ್ಳಬಹುದು. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದ ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ, ಕ್ರೆಡಿಟ್ ಕಾರ್ಡ್ ಸಾಲಗಳ ಮೇಲಿನ ಬಡ್ಡಿ ಸ್ವಲ್ಪ ಹೆಚ್ಚೇ ಇರುತ್ತದೆ.

ಕೆಲವರಿಗೆ ಕ್ರೆಡಿಟ್​ ಕಾರ್ಡ್​ ಬಳಕೆ ಬಗ್ಗೆ ಗೊತ್ತಿಲ್ಲ: ಕೆಲವರು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಮೊದಲು ಪ್ರಮುಖ ಅಂಶಗಳನ್ನು ಪರಿಶೀಲಿಸುತ್ತಿಲ್ಲ. ನಗದು ತೆಗೆದುಕೊಳ್ಳುವುದು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಸಾಲವನ್ನು ಪಡೆಯುವುದು ವಿಭಿನ್ನವಾಗಿದೆ. ನಗದು ಹಿಂಪಡೆಯುವಿಕೆ ನಿಮ್ಮ ಕ್ರೆಡಿಟ್ ಮಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದರ ಮೇಲೆ, ಕ್ರೆಡಿಟ್ ಕಾರ್ಡ್ ಹಿಂಪಡೆಯುವಿಕೆಗೆ ಶೇ36 - 48 ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. ಸಂಪೂರ್ಣ ಬಾಕಿಯನ್ನು ಕೊನೆಯ ಪಾವತಿ ದಿನದೊಳಗೆ ಪಾವತಿಸಬೇಕು.

ಇದನ್ನು ಓದಿ:ಕ್ರೆಡಿಟ್ ಸ್ಕೋರ್​ ಮೇಲೆ ಪರಿಣಾಮ ಬೀರುವ ಅಂಶಗಳಾವುವು? ಕ್ರೆಡಿಟ್​ ರಿಪೋರ್ಟ್​ನ ತಪ್ಪು ಸರಿಪಡಿಸಲು ಹೀಗೆ ಮಾಡಿ..

ಸುಲಭ ಸಾಲ ಸೌಲಭ್ಯ: ಕ್ರೆಡಿಟ್ ಕಾರ್ಡ್ ಸಾಲಗಳು 36 ತಿಂಗಳವರೆಗಿನ ಅವಧಿಯೊಂದಿಗೆ EMI ಸೌಲಭ್ಯ ನೀಡುತ್ತವೆ. ಬಡ್ಡಿ ದರ ಶೇ.16-18ರಷ್ಟಿರುವ ಸಾಧ್ಯತೆ ಇದೆ. ಮೇಲಾಗಿ ಕಾರ್ಡ್ ಮಿತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವಾಗ ನೀವು ಸಲ್ಲಿಸಿದ ದಾಖಲೆಗಳು ಮತ್ತು ಇತರ ಪುರಾವೆಗಳ ಆಧಾರದ ಮೇಲೆ ಕಾರ್ಡ್‌ನಲ್ಲಿ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ. ಆದ್ದರಿಂದ, ಹೆಚ್ಚುವರಿ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲ. ಹಾಗಾಗಿ, ಸುಲಭವಾಗಿ ಸಾಲ ಪಡೆಯುವ ವಿಧಾನಗಳಲ್ಲಿ ಇದೂ ಒಂದು ಎಂದು ಹೇಳಬಹುದು.

ಮೊದಲೇ ಹೇಳಿದಂತೆ, ಕಂಪನಿಗಳು ಪೂರ್ವ ಅನುಮೋದಿತ ಸಾಲಗಳನ್ನು ನೀಡುತ್ತವೆ. ಕ್ರೆಡಿಟ್ ಕಾರ್ಡ್ ಬಳಕೆ ಮತ್ತು ಬಿಲ್ ಪಾವತಿಯನ್ನು ಅವಲಂಬಿಸಿ, ಸಾಲವನ್ನು ಮುಂಚಿತವಾಗಿ ಅನುಮೋದಿಸಲಾಗುತ್ತದೆ. ನೀವು ಕ್ರೆಡಿಟ್ ಕಾರ್ಡ್ ಖಾತೆಯ ವಿವರಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿದರೆ ಇದು ನಿಮಗೆ ತಿಳಿಯುತ್ತದೆ.

ಅವರು sms ಮತ್ತು ಇಮೇಲ್ ಸಂದೇಶಗಳನ್ನು ನಿಮಗೆ ಸಹ ಕಳುಹಿಸುತ್ತಾರೆ. ನಿಮಗೆ ಅಗತ್ಯವಿರುವಾಗ ನೀವು ಆ ಸಾಲವನ್ನು ಕ್ಷಣ ಮಾತ್ರದಲ್ಲೇ ಪಡೆಯಬಹುದು. ಅವರು ಬಡ್ಡಿ, ಅವಧಿ ಮತ್ತು EMI ಮೊತ್ತದ ವಿವರಗಳನ್ನು ಒದಗಿಸುತ್ತಾರೆ. ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಜೊತೆಗೆ ಈ ಕಂತುಗಳನ್ನು ಸಹ ಪಾವತಿಸಬೇಕಾಗುತ್ತದೆ.

ಆನ್​​​ಲೈನಲ್ಲಿ ಈಗ ಎಲ್ಲವೂ ಸುಲಭ: ಆನ್‌ಲೈನ್ ಬಳಕೆಯು ಅದನ್ನು ಸರಳಗೊಳಿಸುತ್ತದೆ. ಸಾಲ ಮರುಪಾವತಿಯ ಅವಧಿಯನ್ನು ಕಾರ್ಡ್ ಬಳಕೆದಾರರೇ ನಿರ್ಧರಿಸಬಹುದು. ಸಾಲದ ಅವಧಿ 6 ತಿಂಗಳಿಂದ 36 ತಿಂಗಳವರೆಗೆ ಇರುತ್ತದೆ. ಕೆಲವು ಕಾರ್ಡ್ ಕಂಪನಿಗಳು ಐದು ವರ್ಷಗಳವರೆಗೆ ಅವಧಿಯನ್ನು ಅನುಮತಿಸುತ್ತವೆ.

ಕ್ರೆಡಿಟ್ ಕಾರ್ಡ್ ಸಾಲಗಳಿಗೆ ಹೋಗುವುದು ಒಳ್ಳೆಯದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಂಪೂರ್ಣವಾಗಿ ಅಗತ್ಯವಿದ್ದಾಗ ಮಾತ್ರ ಅದನ್ನು ಬಳಸಿ. ಕ್ರೆಡಿಟ್ ಕಾರ್ಡ್ ಸಾಲಗಳು ಹೆಚ್ಚಿನ ಬಡ್ಡಿಯನ್ನು ವಿಧಿಸುತ್ತವೆ. ಒಟ್ಟು EMI ಗಳು ನಮ್ಮ ಆದಾಯದ 40 ಪ್ರತಿಶತವನ್ನು ಮೀರಬಾರದು. ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಪಾವತಿಸದಿದ್ದರೆ ಹೆಚ್ಚಿನ ಬಡ್ಡಿಯನ್ನ ತೆರಬೇಕಾಗುತ್ತದೆ. ಅಸಲು ಹಾಗೇ ಉಳಿದು ಬಡ್ಡಿ ಬೆಳೆಯುವ ಸಾಧ್ಯತೆಗಳು ಹೆಚ್ಚು ಈ ಬಗ್ಗೆ ಗಮನ ಇರಲಿ.

ಇದನ್ನು ಓದಿ:ಆರೋಗ್ಯ ವಿಮೆ... ಸಣ್ಣ ತಪ್ಪುಗಳು ದುಬಾರಿಯಾಗಬಹುದು: ಎಚ್ಚರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.