ETV Bharat / business

ವಾಣಿಜ್ಯ ಸಿಲಿಂಡರ್​ ದರದಲ್ಲಿ 91 ರೂಪಾಯಿ ಇಳಿಕೆ: ಐದು ತಿಂಗಳ ಬಳಿಕ ಇದೇ ಮೊದಲು ಬೆಲೆ ಕಡಿತ

author img

By

Published : Apr 1, 2023, 9:07 AM IST

ಕಳೆದ ತಿಂಗಳು ಭರ್ಜರಿ ಏರಿಕೆ ಕಂಡಿದ್ದ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ಗಳ ದರದಲ್ಲಿ ಈ ತಿಂಗಳು 91 ರೂಪಾಯಿ ಇಳಿಕೆ ಮಾಡಲಾಗಿದೆ.

ವಾಣಿಜ್ಯ ಸಿಲಿಂಡರ್​ ದರ
ವಾಣಿಜ್ಯ ಸಿಲಿಂಡರ್​ ದರ

ನವದೆಹಲಿ: ಸತತ ಏರಿಕೆ ಕಾಣುತ್ತಿದ್ದ ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ದರವನ್ನು ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಶನಿವಾರದಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಪ್ರತಿ 19 ಕೆಜಿ ಸಿಲಿಂಡರ್​ ಮೇಲೆ 91.50 ರೂ.ನಷ್ಟು ಕಡಿತ ಮಾಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಈಗ ವಾಣಿಜ್ಯ ಎಲ್​ಪಿಸಿ ಸಿಲಿಂಡರ್ ಬೆಲೆ 2,028 ರೂ. ಆಗಿದೆ. ಆದರೆ, ಸಾರ್ವಜನಿಕ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಮಾರ್ಚ್ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ 350.50 ರೂ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ 50 ರೂ. ಏರಿಕೆ ಮಾಡಿದ್ದವು. ಇದದಿಂದ ಬಳಕೆದಾರರಿಗೆ ಹೆಚ್ಚಿನ ಹೊರೆ ಬಿದ್ದಿತ್ತು. ಇದೀಗ 91 ರೂಪಾಯಿ ಇಳಿಕೆ ಮಾಡಿದ್ದು, ತುಸು ನೆಮ್ಮದಿ ತಂದಿದೆ. ಇದಕ್ಕೂ ಮುನ್ನ ಜನವರಿ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ಯೂನಿಟ್‌ಗೆ 25 ರೂ. ಏರಿಸಲಾಗಿತ್ತು.

ಸೆಪ್ಟೆಂಬರ್​ ಬಳಿಕ ಇಳಿಕೆ: ವಾಣಿಜ್ಯ ಸಿಲಿಂಡರ್​ಗಳ ಬೆಲೆಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್ 1 ರಂದು 91.50 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿತ್ತು. ಇದಾದ ಐದು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ದರ ತಗ್ಗಿಸಲಾಗಿದೆ. ಇದಲ್ಲದೇ, 2022 ರ ಆಗಸ್ಟ್ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 36 ರೂ.ಗಳಷ್ಟು ಕಡಿಮೆ ಮಾಡಿದ್ದರೆ, ಜುಲೈ 6 ರಂದು 19 ಕೆಜಿ ಸಿಲಿಂಡರ್‌ನ ದರವನ್ನು ಪ್ರತಿ ಯೂನಿಟ್‌ಗೆ 8.5 ರೂ. ಕಡಿತ ಮಾಡಲಾಗಿತ್ತು.

ಕಳೆದ ತಿಂಗಳ ಏರಿಕೆಯ ಭರ್ಜರಿ ಶಾಕ್​: ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಕಳೆದ ತಿಂಗಳು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಭರ್ಜರಿ ಶಾಕ್ ನೀಡಿದ್ದವು. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 350.50 ರೂಪಾಯಿಗೆ ಏರಿಸಲಾಗಿತ್ತು. ಇದು ವಾಣಿಜ್ಯೋದ್ದೇಶದ ಗ್ರಾಹಕರ ಕೈ ಸುಟ್ಟಿತ್ತು. ಇನ್ನು, ಗೃಹಬಳಕೆಯ ಸಿಲಿಂಡರ್‌ ದರದಲ್ಲಿ 50 ರೂಪಾಯಿ ಏರಿಸಿದ್ದವು.

ಕರ್ಮಷಿಯಲ್​ ಗ್ಯಾಸ್‌ ದರ ಪ್ರತಿ ಸಿಲಿಂಡರ್‌ಗೆ 350.50 ರೂ.ಯಷ್ಟು ಏರಿಕೆಯಾದ ಬಳಿಕ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 2,119.50 ರೂ. ಗೆ ಆಗಿತ್ತು. ಡೊಮೆಸ್ಟಿಕ್​ ಗ್ಯಾಸ್‌ ದರ 50 ರೂ.ಯಷ್ಟು ಏರಿಕೆಯಾಗಿ 14 ಕೆ.ಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,103 ರೂ. ಗೆ ಏರಿಕೆ ಕಂಡಿತ್ತು.

ಪುದುಚೇರಿಯಲ್ಲಿ ಸಬ್ಸಿಡಿ: ಪುದುಚೇರಿ ಸರ್ಕಾರ ಜನರಿಗೆ ಸಿಹಿಸುದ್ದಿ ನೀಡಿದೆ. ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಮೇಲೆ 300 ರೂ. ಸಬ್ಸಿಡಿ ನೀಡುವುದಾಗಿ ಘೋಷಿಸಿದೆ. 2023-24ನೇ ಸಾಲಿನ ಬಜೆಟ್​ನಲ್ಲಿ ಸರ್ಕಾರ ಈ ಘೋಷಣೆ ಮಾಡಿದೆ. ಬಜೆಟ್​ ಮಂಡಿಸಿದ ಮುಖ್ಯಮಂತ್ರಿ ಎನ್.ರಂಗಸ್ವಾಮಿ ಅವರು ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ಮೇಲೆ 300 ರೂ. ಸಬ್ಸಿಡಿ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಈ ಯೋಜನೆಗಾಗಿ ಬಜೆಟ್​ನಲ್ಲಿ 126 ಕೋಟಿ ರೂ. ಮೀಸಲಿಟ್ಟಿದ್ದಾಗಿ ತಿಳಿಸಿದ್ದರು.

ಓದಿ: ಜನತೆಗೆ ಮತ್ತೆ ಬಿಗ್​ ಶಾಕ್​, ಎಲ್​ಪಿಜಿ​ ದರ ಗಗನಕ್ಕೆ: ವಾಣಿಜ್ಯ ಸಿಲಿಂಡರ್​ ₹ 350 ಹೆಚ್ಚಳ, ಗೃಹ ಬಳಕೆ ಸಿಲಿಂಡರ್ ಬೆಲೆಯೂ​ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.