ETV Bharat / business

Closing Bell: ಸೆನ್ಸೆಕ್ಸ್​ 393 & ನಿಫ್ಟಿ 121 ಪಾಯಿಂಟ್ ಏರಿಕೆ

ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ ಮತ್ತು ನಿಫ್ಟಿ ಏರಿಕೆಯಲ್ಲಿ ಕೊನೆಗೊಂಡಿವೆ.

Sensex up 393 points Nifty up 121 points

author img

By ETV Bharat Karnataka Team

Published : Oct 11, 2023, 7:24 PM IST

ಮುಂಬೈ : ಬುಧವಾರ ಭಾರತದ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ಕೊನೆಗೊಂಡಿವೆ. ಮಿಶ್ರ ಜಾಗತಿಕ ಸೂಚನೆಗಳು ಮತ್ತು ಹಣದುಬ್ಬರದ ಆತಂಕಗಳ ನಡುವೆ ಇಂಧನ, ಎಫ್ ಎಂಸಿಜಿ ಮತ್ತು ಬಂಡವಾಳ ಸರಕುಗಳ ಷೇರುಗಳ ಖರೀದಿಯಿಂದಾಗಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ 393 ಪಾಯಿಂಟ್​ಗಳ ಏರಿಕೆ ಕಂಡರೆ, ನಿಫ್ಟಿ ಬುಧವಾರ 19,800 ಮಟ್ಟಕ್ಕಿಂತ ಹೆಚ್ಚಾಗಿದೆ. 30 ಷೇರುಗಳ ಸೆನ್ಸೆಕ್ಸ್ 393.69 ಪಾಯಿಂಟ್ ಅಥವಾ ಶೇಕಡಾ 0.6 ರಷ್ಟು ಏರಿಕೆ ಕಂಡು 66,473.05 ಕ್ಕೆ ತಲುಪಿದೆ. ಸೆನ್ಸೆಕ್ಸ್​ನಲ್ಲಿ ಆರು ಷೇರುಗಳು ಕುಸಿದವು.

ಎನ್ಎಸ್ಇಯ ವಿಶಾಲ ನಿಫ್ಟಿ 121.50 ಪಾಯಿಂಟ್ ಅಥವಾ ಶೇಕಡಾ 0.62 ರಷ್ಟು ಏರಿಕೆ ಕಂಡು 19,811.35 ಕ್ಕೆ ತಲುಪಿದೆ. 37 ಸೂಚ್ಯಂಕ ಷೇರುಗಳು ಲಾಭ ಗಳಿಸಿದರೆ, 12 ಷೇರುಗಳು ಕುಸಿದವು. ಒಂದು ಷೇರು ಬದಲಾಗದೆ ಕೊನೆಗೊಂಡಿತು. ಎಫ್ ಎಂಸಿಜಿ, ಇಂಧನ, ಲೋಹ, ಫಾರ್ಮಾ ಮತ್ತು ಖಾಸಗಿ ಬ್ಯಾಂಕ್ ಷೇರುಗಳಲ್ಲಿ ಖರೀದಿ ಕಂಡುಬಂದರೆ, ತ್ರೈಮಾಸಿಕ ಹಣಕಾಸು ಫಲಿತಾಂಶಗಳ ಪ್ರಕಟಣೆಗೆ ಮುಂಚಿತವಾಗಿ ಹೆಚ್ಚಿನ ಐಟಿ ಷೇರುಗಳು ಕುಸಿದವು.

ಸೆನ್ಸೆಕ್ಸ್ ಷೇರುಗಳ ಪೈಕಿ ವಿಪ್ರೋ ಶೇ 3.29ರಷ್ಟು ಏರಿಕೆ ಕಂಡಿದೆ. ಅಲ್ಟ್ರಾಟೆಕ್ ಸಿಮೆಂಟ್, ರಿಲಯನ್ಸ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯೂನಿಲಿವರ್, ನೆಸ್ಲೆ, ಎನ್​ಟಿಪಿಸಿ, ಎಂ & ಎಂ, ಎಚ್​ಡಿಎಫ್​ಸಿ ಬ್ಯಾಂಕ್, ಐಟಿಸಿ, ಕೋಟಕ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಏರಿಕೆಯಾದವು. ಮತ್ತೊಂದೆಡೆ ಎಚ್​ಸಿಎಲ್​ ಟೆಕ್ ಶೇಕಡಾ 1.24 ರಷ್ಟು ಕುಸಿದಿದೆ. ಎಸ್​ಬಿಐ, ಟಿಸಿಎಸ್, ಇನ್ಫೋಸಿಸ್, ಇಂಡಸ್ಇಂಡ್ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಕುಸಿದವು.

ವಿಶಾಲ ಮಾರುಕಟ್ಟೆಯಲ್ಲಿ, ಬಿಎಸ್ಇ ಮಿಡ್​ಕ್ಯಾಪ್ ಶೇಕಡಾ 0.55 ರಷ್ಟು ಏರಿಕೆ ಕಂಡರೆ, ಸ್ಮಾಲ್ ಕ್ಯಾಪ್ ಶೇಕಡಾ 0.77 ರಷ್ಟು ಏರಿಕೆಯಾಗಿದೆ. ಬಿಎಸ್ಇಯಲ್ಲಿ 2,353 ಷೇರುಗಳು ಲಾಭದೊಂದಿಗೆ ಕೊನೆಗೊಂಡರೆ, 1,334 ಷೇರುಗಳು ಇಳಿಕೆಯಲ್ಲಿ ಕೊನೆಗೊಂಡವು ಮತ್ತು 135 ಷೇರುಗಳು ಬದಲಾಗದೆ ಸ್ಥಿರವಾದವು.

ಹಾಂಗ್ ಕಾಂಗ್ ನ ಹಾಂಗ್ ಸೆಂಗ್ ಸೂಚ್ಯಂಕ ಶೇ 1.4, ದಕ್ಷಿಣ ಕೊರಿಯಾದ ಕೊಸ್ಪಿ ಶೇ 2 ಮತ್ತು ಟೋಕಿಯೊದ ನಿಕೈ 225 ಶೇ 0.6ರಷ್ಟು ಏರಿಕೆ ಕಂಡಿವೆ. ಶಾಂಘೈ ಕಾಂಪೊಸಿಟ್ ಸೂಚ್ಯಂಕವು ಶೇಕಡಾ 0.1 ರಷ್ಟು ಇಳಿಕೆಯಾಗಿದೆ. ಯುರೋಪಿಯನ್ ಷೇರು ಮಾರುಕಟ್ಟೆಗಳು ಹೆಚ್ಚಾಗಿ ಸಮತಟ್ಟಾಗಿ ವಹಿವಾಟು ನಡೆಸುತ್ತಿದ್ದವು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಮಂಗಳವಾರ 1,005.49 ಕೋಟಿ ರೂ.ಗಳ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಅವರು ನಿವ್ವಳ ಮಾರಾಟಗಾರರಾಗಿ ಮುಂದುವರಿದಿದ್ದಾರೆ ಎಂದು ಬಿಎಸ್ಇ ಅಂಕಿ ಅಂಶಗಳು ತಿಳಿಸಿವೆ.

ಇದನ್ನೂ ಓದಿ : ಸಿರಿವಂತರ ಪಟ್ಟಿ: ಅಗ್ರಸ್ಥಾನದಲ್ಲಿ ಅಂಬಾನಿ, 2ನೇ ಸ್ಥಾನದಲ್ಲಿ ಅದಾನಿ; ರತನ್ ಟಾಟಾಗೆ 12.6 ಮಿಲಿಯನ್ X ಫಾಲೋವರ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.