ETV Bharat / business

ಹಬ್ಬಗಳ ಸೀಸನ್‌: ರಾಜ್ಯವಾರು ಬ್ಯಾಂಕ್‌ ರಜಾ ದಿನಗಳ ಮಾಹಿತಿ

author img

By ETV Bharat Karnataka Team

Published : Nov 10, 2023, 11:47 AM IST

Updated : Nov 10, 2023, 12:23 PM IST

ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳು ಬರುತ್ತಿವೆ. ಭಾನುವಾರ, ಎರಡನೇ ಶನಿವಾರ, ನಾಲ್ಕನೇ ಶನಿವಾರ, ರಾಜ್ಯೋತ್ಸವಗಳು ಸೇರಿದಂತೆ ನವೆಂಬರ್​ ತಿಂಗಳಿನಲ್ಲಿ ರಜೆಗಳ ಸರಮಾಲೆಯೇ ಇದೆ. ಹೀಗಾಗಿ ಬ್ಯಾಂಕ್​ಗಳು ಯಾವ ದಿನದಂದು ಯಾವ ರಾಜ್ಯದಲ್ಲಿ ಬಂದ್​ ಆಗಿರುತ್ತವೆ ಎಂಬುದನ್ನು ತಿಳಿಯಿರಿ.

Banks will be closed for 6 days  check state wise bank holiday list  Diwali and Dhanteras Bank Holidays  ದೀಪಾವಳಿ ಸೇರಿದಂತೆ ಹಬ್ಬಗಳ ಸರಮಾಲೆ  ಯಾವ್ಯಾವ ರಾಜ್ಯದಲ್ಲಿ ಬ್ಯಾಂಕ್​ಗಳಿಗೆ ರಜೆ  ದೇಶದಲ್ಲಿ ಈಗ ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳು ಚಾಲ್ತಿ  ಬ್ಯಾಂಕ್​ಗಳು ಯಾವ ದಿನದಂದು ಯಾವ ರಾಜ್ಯದಲ್ಲಿ ಬಂದ್​ vಭಾರತದಲ್ಲಿ ಪ್ರಸ್ತುತ ಹಬ್ಬದ ಸೀಸನ್  ನವೆಂಬರ್ 10 ರಿಂದ ಸತತ 6 ದಿನಗಳ ಕಾಲ ಬ್ಯಾಂಕ್‌ಗಳು ರಜೆ
ದೀಪಾವಳಿ ಸೇರಿದಂತೆ ಹಬ್ಬಗಳ ಸರಮಾಲೆ.

ಹೈದರಾಬಾದ್​(ತೆಲಂಗಾಣ): ಭಾರತದಲ್ಲಿ ಪ್ರಸ್ತುತ ಹಬ್ಬದ ಸೀಸನ್ ನಡೆಯುತ್ತಿದೆ. ದೀಪಾವಳಿ, ಭಯ್ಯಾ ದೂಜ್ ಮತ್ತು ಛತ್‌ನಂತಹ ಹಬ್ಬಗಳು ಮುಂದಿನ ವಾರ ಬರಲಿವೆ. ನವೆಂಬರ್ 10ರಿಂದ ಸತತ 6 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಿರುತ್ತವೆ.

ದೀಪಾವಳಿಯ ಜೊತೆಗೆ ಗೋವರ್ಧನ ಪೂಜೆ, ಬಲಿ ಪ್ರತಿಪದ ಮತ್ತು ಭಾಯಿ ದೂಜ್ ಸಂದರ್ಭದಲ್ಲಿ ದೇಶದ ಅನೇಕ ನಗರಗಳಲ್ಲಿ ನವೆಂಬರ್ 10ರಿಂದ 15ರವರೆಗೆ ಬ್ಯಾಂಕುಗಳಿಗೆ ರಜೆ ಇರಲಿದೆ. ನವೆಂಬರ್ ತಿಂಗಳಲ್ಲಿ ಒಟ್ಟು 15 ದಿನಗಳವರೆಗೆ ಬ್ಯಾಂಕುಗಳು ಮುಚ್ಚಿರುತ್ತವೆ. ಈ ತಿಂಗಳಲ್ಲಿ ಬ್ಯಾಂಕ್‌ ಸಂಬಂಧಿಸಿದ ಪ್ರಮುಖ ಕೆಲಸವನ್ನು ಪೂರ್ಣಗೊಳಿಸಲು ನೀವು ಬಯಸಿದರೆ ರಜಾದಿನಗಳ ಬಗ್ಗೆ ಪರಿಶೀಲಿಸುವುದು ಸೂಕ್ತ.

ಬ್ಯಾಂಕ್ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು/ಆ ರಾಜ್ಯಗಳಲ್ಲಿ ನಡೆಯುವ ಇತರ ಘಟನೆಗಳ ಮೇಲೆ ಅವಲಂಬಿತವಾಗಿರುತ್ತದೆ. ರಜಾದಿನಗಳು ರಾಜ್ಯಗಳು ಮತ್ತು ನಗರಗಳಲ್ಲಿ ಬದಲಾಗುತ್ತವೆ. ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ ಸಹ ನೀವು ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಅನೇಕ ಬ್ಯಾಂಕಿಂಗ್ ಸಂಬಂಧಿತ ಕಾರ್ಯಗಳನ್ನು ಪೂರ್ಣಗೊಳಿಸಬಹುದು.

ರಜಾದಿನಗಳ ಮಾಹಿತಿ:

  1. ನವೆಂಬರ್ 10 - ಗೋವರ್ಧನ ಪೂಜೆ/ಲಕ್ಷ್ಮಿ ಪೂಜೆ/ದೀಪಾವಳಿ/ದೀಪಾವಳಿ: ಮೇಘಾಲಯದಲ್ಲಿ ಬ್ಯಾಂಕ್‌ಗಳು ಬಂದ್.
  2. ನವೆಂಬರ್ 11 - ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕುಗಳಿಗೆ ರಜೆ.
  3. ನವೆಂಬರ್ 12 - ಭಾನುವಾರ ರಜೆ.
  4. ನವೆಂಬರ್ 13 - ಗೋವರ್ಧನ ಪೂಜೆ/ಲಕ್ಷ್ಮಿ ಪೂಜೆ/ದೀಪಾವಳಿ/ದೀಪಾವಳಿ: ತ್ರಿಪುರ, ಉತ್ತರಾಖಂಡ, ಸಿಕ್ಕಿಂ, ಮಣಿಪುರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬ್ಯಾಂಕುಗಳು ಬಂದ್.
  5. ನವೆಂಬರ್ 14 - ದೀಪಾವಳಿ (ಬಲಿ ಪ್ರತಿಪದ)/ವಿಕ್ರಮ ಸಂವತ್ ಹೊಸ ವರ್ಷ/ಲಕ್ಷ್ಮಿ ಪೂಜೆ/ಮಕ್ಕಳ ದಿನಾಚರಣೆ: ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಸಿಕ್ಕಿಂನಲ್ಲಿ ಬ್ಯಾಂಕ್‌ಗಳಲ್ಲಿ ರಜೆ.
  6. ನವೆಂಬರ್ 15 - ಭಾಯಿ ದೂಜ್/ಚಿತ್ರಗುಪ್ತ ಜಯಂತಿ/ಲಕ್ಷ್ಮಿ ಪೂಜೆ/ನಿಂಗಲ್ ಚಕ್ಕುಬಾ/ಭ್ರಾತ್ರಿ ದ್ವಿತೀಯ: ಸಿಕ್ಕಿಂ, ಮಣಿಪುರ, ಉತ್ತರ ಪ್ರದೇಶ, ಬಂಗಾಳ, ಹಿಮಾಚಲ ಪ್ರದೇಶದ ಬ್ಯಾಂಕ್‌ಗಳಲ್ಲಿ ಯಾವುದೇ ಕಾರ್ಯನಿರ್ವಹಣೆ ಇಲ್ಲ.
  7. ನವೆಂಬರ್ 19 - ಭಾನುವಾರ ರಜೆ.
  8. ನವೆಂಬರ್ 20 - ಛತ್‌ನಿಂದಾಗಿ ಬಿಹಾರ ಮತ್ತು ರಾಜಸ್ಥಾನದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.
  9. ನವೆಂಬರ್ 23 - ಸೆಂಗ್ ಕುಟ್ ಸ್ನೆಮ್/ಇಗಾಸ್ ಬಾಗ್ವಾಲ್: ಉತ್ತರಾಖಂಡ ಮತ್ತು ಸಿಕ್ಕಿಂನ ಬ್ಯಾಂಕುಗಳಿಗೆ ರಜೆ.
  10. ನವೆಂಬರ್ 25 - ನಾಲ್ಕನೇ ಶನಿವಾರದ ಕಾರಣ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ.
  11. ನವೆಂಬರ್ 26 - ಭಾನುವಾರ
  12. ನವೆಂಬರ್ 27 - ಗುರುನಾನಕ್ ಜಯಂತಿ/ಕಾರ್ತಿಕ್ ಪೂರ್ಣಿಮಾ: ಗುಜರಾತ್​, ಕರ್ನಾಟಕ, ತಮಿಳುನಾಡು, ಸಿಕ್ಕಿಂ, ಅಸ್ಸಾಂ, ತೆಲಂಗಾಣ, ಮಣಿಪುರ, ಕೇರಳ, ಗೋವಾ, ಬಿಹಾರ, ಮೇಘಾಲಯ ಹೊರತುಪಡಿಸಿ ಇಡೀ ದೇಶದಲ್ಲಿ ಬ್ಯಾಂಕುಗಳಿಗೆ ರಜೆ.
  13. ನವೆಂಬರ್ 30 - ಕನಕದಾಸರ ಜಯಂತಿ: ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜೆ.

Last Updated : Nov 10, 2023, 12:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.