ETV Bharat / business

ಅದಾನಿ ಗ್ರೂಪ್‌ನ ಸಾಲದ ವಿವರ ಬಹಿರಂಗಕ್ಕೆ ಕೇಂದ್ರದ ನಿರಾಕರಣೆ - ETV Bharath Kannada news

ಅದಾನಿ ಗೂಪ್​ನ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಾಲ ಮತ್ತು ಸಾಲದ ಮಾನ್ಯತೆ ಬಗ್ಗೆ ಪ್ರಶ್ನೆಗೆ ಕ್ರೇಂದ್ರ ಹಣಕಾಸು ಸಚಿವರು ಲಿಖಿತ ಉತ್ತರ ನೀಡಿದ್ದು, ಆರ್​ಬಿಐ ಕಾಯ್ದೆ ಅಡಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

Centre refuses to disclose details of credit exposure of PSU banks to Adani Group citing RBI Act
ಅದಾನಿ ಗ್ರೂಪ್‌ನ ಸಾಲದ ವಿವರ ಬಹಿರಂಗಕ್ಕೆ ಕೇಂದ್ರ ನಿರಾಕರಣೆ
author img

By

Published : Mar 13, 2023, 6:59 PM IST

ನವದೆಹಲಿ: ಬಜೆಟ್​ ಅಧಿವೇಶನ ಮೊದಲ ಚರಣ ಅದಾನಿ ಅವರ ಷೇರುಗಳ ಕುರಿತಾದ ಚರ್ಚೆಯಲ್ಲಿ ಅಂತ್ಯವಾಗಿತ್ತು, ಎರಡನೇ ಚರಣ ಆರಂಭದಲ್ಲಿ ಅದಾನಿ ಗ್ರೂಪ್‌ಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಾಲ ಮತ್ತು ಸಾಲದ ಮಾನ್ಯತೆಯ ವಿವರಗಳನ್ನು ಬಹಿರಂಗಪಡಿಸಲು ಕೇಳಲಾಗಿದ್ದ ಪ್ರಶ್ನಗೆ ಹಣಕಾಸು ಸಚಿವಾಲಯ ಸೋಮವಾರ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ 1934 ಅಡಿ ವಿವರ ನೀಡಲು ನಿರಾಕರಿಸಿದೆ.

ಈ ವಿಷಯದ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್​, ಲಿಖಿತ ಉತ್ತರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆಕ್ಟ್, 1934 ರ ಸೆಕ್ಷನ್ 45 ಇ ಪ್ರಕಾರ, ಆರ್‌ಬಿಐ ಕ್ರೆಡಿಟ್ ಮಾಹಿತಿ ಬಹಿರಂಗಪಡಿಸುವುದನ್ನು ನಿಷೇಧಿಸಲಾಗಿದೆ. "ಸೆಕ್ಷನ್ 45 ಇ ಬ್ಯಾಂಕ್ ಸಲ್ಲಿಸಿದ ಕ್ರೆಡಿಟ್ ಮಾಹಿತಿಯನ್ನು ಗೌಪ್ಯವೆಂದು ಪರಿಗಣಿಸಬೇಕು ಮತ್ತು ಪ್ರಕಟಿಸಬಾರದು ಅಥವಾ ಬಹಿರಂಗಪಡಿಸಬಾರದು" ಎಂದು ತಿಳಿದ್ದಾರೆ.

ಅದಾನಿ ಗ್ರೂಪ್‌ಗೆ ಸಾರ್ವಜನಿಕ ವಲಯದ ವಿಮಾ ಕಂಪನಿಗಳ ಸಾಲ/ಕ್ರೆಡಿಟ್ ಮಾನ್ಯತೆಗೆ ಸಂಬಂಧಿಸಿದಂತೆ, ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪ್ರಕಾರ ಅದಾನಿ ಗ್ರೂಪ್ ಆಫ್ ಕಂಪನಿಗಳಿಗೆ ಅದರ ಸಾಲದ ಮಾನ್ಯತೆ 6,347.32 ಕೋಟಿ ಮತ್ತು 6,182.64 ಕೋಟಿ ಕ್ರಮವಾಗಿ ಡಿಸೆಂಬರ್ 31, 2022 ಮತ್ತು ಮಾರ್ಚ್ 5, 2023 ಕ್ಕೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. "ಐದು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು ಅದಾನಿ ಗ್ರೂಪ್ ಆಫ್ ಕಂಪನಿಗಳಿಗೆ ಸಾಲ/ಕ್ರೆಡಿಟ್ ಮಾನ್ಯತೆ ಹೊಂದಿಲ್ಲ ಎಂದು ತಿಳಿಸಿವೆ" ಎಂದು ಅವರು ಹೇಳಿದರು.

ವಿವಿಧ ಬ್ಯಾಂಕ್‌ಗಳು ಅದಾನಿ ಗ್ರೂಪ್‌ನ ಕಂಪನಿಗಳಿಗೆ ಸಾಲ ವಸೂಲಾತಿ/ಕ್ರೆಡಿಟ್ ಮಾನ್ಯತೆಯಲ್ಲಿ ಒಳಗೊಂಡಿರುವ ಅಪಾಯಗಳನ್ನು ನಿರ್ಣಯಿಸಿದೆಯೇ ಎಂದು ಕೇಳಿದಾಗ, ಯೋಜನೆಗಳ ಕಾರ್ಯಸಾಧ್ಯತೆ, ನಿರೀಕ್ಷಿತ ನಗದು ಹರಿವು, ಅಪಾಯದ ಅಂಶಗಳನ್ನು ಮೌಲ್ಯಮಾಪನ ಮಾಡಿದ ನಂತರ ಸಾಲವನ್ನು ಮಂಜೂರು ಮಾಡಲಾಗುತ್ತದೆ ಎಂದು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ತಿಳಿಸಿವೆ ಎಂದು ಹಣಕಾಸು ಸಚಿವರು ಹೇಳಿದರು. ಸಾಕಷ್ಟು ಭದ್ರತೆಯ ಲಭ್ಯತೆ ಮತ್ತು ಸಾಲಗಳ ಮರುಪಾವತಿ ಯೋಜನೆಯಿಂದ ಉತ್ಪತ್ತಿಯಾಗುವ ಆದಾಯವನ್ನು ಖಚಿತಪಡಿಸಿದ ನಂತರ ಸಾಲ ನೀಡಲಾಗಿದೆ. ಕಂಪನಿಯ ಮಾರುಕಟ್ಟೆ ಬಂಡವಾಳೀಕರಣದಿಂದ ಅಲ್ಲ ಎಂದು ವಿವಿಧ ಬ್ಯಾಂಕ್‌ಗಳು ತಿಳಿಸಿವೆ ಎಂದಿದ್ದಾರೆ.

"ಆರ್‌ಬಿಐನ ದಾಖಲೆಗಳ ಪ್ರಕಾರ, 20 ಪ್ರತಿಶತಕ್ಕೆದಷ್ಟು ಸಾಲವನ್ನು ಬ್ಯಾಂಕ್​ಗಳು ಆರ್​ಬಿಐ ನಿಯಮದ ಅಡಿಯಲ್ಲೇ ನೀಡಬೇಕಾರುತ್ತದೆ. ಅದಾನಿ ಗ್ರೂಪ್​ಗೂ ಬ್ಯಾಂಕ್​ಗಳು ಇದೇ ಆಧಾರದಲ್ಲಿ ಸಾಲ ನೀಡಿವೆ. (ಕೆಲ ಸಂದರ್ಭಗಳಲ್ಲಿ ಬ್ಯಾಂಕಿನ ಮಂಡಳಿಯಿಂದ 25 ಪ್ರತಿಶತಕ್ಕೆ ವಿಸ್ತರಿಸಬಹುದು) ಕೆಲ ಬ್ಯಾಂಕ್​ಗಳು ಸ್ವಂತ ರಿಸ್ಕ್​ ತೆಗೆದುಕೊಂಡು 25 ಪ್ರತಿಶತ ಸಾಲ ನೀಡಿದೆ" ಎಂದು ಸೀತಾರಾಮನ್ ತಿಳಿಸಿದ್ದಾರೆ.

ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಪ್ರವರ್ತಕರು ಬ್ಯಾಂಕ್ ಫೈನಾನ್ಸ್‌ಗೆ ಅನುಗುಣವಾಗಿ ಈಕ್ವಿಟಿ ಫಂಡ್‌ಗಳನ್ನು ತರುವುದನ್ನು ಖಚಿತಪಡಿಸಿಕೊಳ್ಳಲು ಯೋಜನಾ ಹಣಕಾಸುಗಾಗಿ ಸಾಲ-ಇಕ್ವಿಟಿ ಅನುಪಾತದ ಬಗ್ಗೆ ಬ್ಯಾಂಕ್‌ಗಳು ಸ್ಪಷ್ಟ ನೀತಿಯನ್ನು ಹೊಂದಿರಬೇಕು ಎಂದು ಅವರು ಸೂಚಿಸಿದರು.

ಇದನ್ನೂ ಓದಿ: ದೆಹಲಿ ಶಾಸಕ, ಸಚಿವರ ಸಂಬಳ ಶೇ.66 ರಷ್ಟು ಹೆಚ್ಚಳ.. ಪ್ರಸ್ತಾವನೆಗೆ ರಾಷ್ಟ್ರಪತಿಗಳ ಅಂಗೀಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.