ಹೈದರಾಬಾದ್: ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವಾಗ ಬ್ಯಾಂಕ್‌ಗಳು ನಾನಾ ಆಫರ್ಗಳನ್ನು ನೀಡುತ್ತೇವೆ ಎಂದು ಹೇಳುತ್ತವೆ. ಇದೇ ವೇಳೆ ಅವು ಷರತ್ತುಗಳು ಅನ್ವಯ ಎಂಬುದನ್ನು ಹೇಳಿರುತ್ತವೆ. ಹೀಗಾಗಿ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವಾಗ ಷರತ್ತುಗಳ ಬಗ್ಗೆ ಹಾಗೂ ಕಾರ್ಡ್ನ ನೀತಿ - ನಿಯಮಗಳು ಹಾಗೂ ಇನ್ನಿತರ ವಿನಾಯಿತಿ ಹಾಗೂ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಅಗತ್ಯ ಹಾಗೂ ಎಚ್ಚರಿಕೆ ವಹಿಸಬೇಕಾಗಿರುವುದು ಇನ್ನೂ ಅಗತ್ಯವಾಗಿದೆ.
ಬ್ಯಾಂಕ್‌ಗಳು ಗ್ರಾಹಕರಿಂದ ವಾರ್ಷಿಕ ಮತ್ತು ಇತರ ಶುಲ್ಕವನ್ನು ತೆಗೆದುಕೊಳ್ಳುತ್ತವೆ. ಕಳೆದು ಹೋದ ಕಾರ್ಡ್ ಬದಲಿಗೆ ಹೊಸ ಕಾರ್ಡ್ ನೀಡಲು ಪ್ರತ್ಯೇಕ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ನಾವು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಅಂತಹ ಎಲ್ಲ ಶುಲ್ಕಗಳು ನಮಗೆ ದೊಡ್ಡ ಹೊರೆಯಾಗುತ್ತವೆ. ಕಾರ್ಡ್‌ಗಳನ್ನು ತೆಗೆದುಕೊಳ್ಳುವವರು ಶೂನ್ಯ ಅಥವಾ ಕಡಿಮೆ ಶುಲ್ಕದೊಂದಿಗೆ ಬರುವ ಕಾರ್ಡ್‌ಗಳನ್ನು ಆರಿಸಿಕೊಳ್ಳಬೇಕು.
ಸಕಾಲಕ್ಕೆ ಬಿಲ್ ಪಾವತಿಸಿ, ಇಲ್ಲದಿದ್ದರೆ ದಂಡ ಗ್ಯಾರಂಟಿ: ಕಾರ್ಡ್ ಹೊಂದಿರುವವರು ಹೆಚ್ಚಿನ ಬಡ್ಡಿಯನ್ನು ತಪ್ಪಿಸಲು, ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಕಾಲಕ್ಕೆ ಪಾವತಿಸಬೇಕು. ಈ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಸಾಮಾನ್ಯವಾಗಿ, ಬಡ್ಡಿ ರಹಿತ ಕ್ರೆಡಿಟ್ ಅನ್ನು 50 ದಿನಗಳವರೆಗೆ ನೀಡಲಾಗುತ್ತದೆ. ನಿಮ್ಮ ಕಾರ್ಡ್ ಬಿಲ್ಲಿಂಗ್ ಸೈಕಲ್ ಆಧರಿಸಿ ಇದನ್ನು ನಿರ್ಧರಿಸಲಾಗುತ್ತದೆ.
ಸಂಪೂರ್ಣ ಬಿಲ್ ಪಾವತಿಸಬೇಕು. ಯಾವುದೇ ವಿಳಂಬವು ಬಡ್ಡಿ ಹಾಗೂ ದಂಡವನ್ನು ಹೊಂದಿರುತ್ತದೆ. ಪ್ರತಿ ಕ್ರೆಡಿಟ್ ಕಾರ್ಡ್ ಗರಿಷ್ಠ ಕ್ರೆಡಿಟ್ ಮಿತಿಯನ್ನು ಹೊಂದಿದೆ. ನಿರ್ದಿಷ್ಟ ಬಿಲ್ಲಿಂಗ್ ಅವಧಿಯೊಳಗೆ ನೀವು ಬಿಲ್ ಪಾವತಿ ಮಾಡಬೇಕು ಹಾಗೂ ಖರೀದಿ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಪಾವತಿ ಇತಿಹಾಸ, ಆದಾಯ, ಕ್ರೆಡಿಟ್ ಬಳಕೆಯ ಅನುಪಾತ, ಇತ್ಯಾದಿಗಳ ಆಧಾರದ ಮೇಲೆ ನಿಮ್ಮ ಕ್ರೆಡಿಟ್ ಸ್ಕೋರ್ ನಿರ್ಧಾರವಾಗುತ್ತದೆ. ಹೊಸ ಕಾರ್ಡ್ ಹೊಂದಿರುವವರು ಸಾಮಾನ್ಯವಾಗಿ ಕಡಿಮೆ ಮಿತಿಯನ್ನು ಹೊಂದಿರುತ್ತಾರೆ. ಅವರು ನಿಯಮಿತವಾಗಿ ಬಿಲ್‌ಗಳನ್ನು ಪಾವತಿಸುವುದರಿಂದ, ಗರಿಷ್ಠ ಕ್ರೆಡಿಟ್ ಮಿತಿಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತದೆ.
ಕನಿಷ್ಠ ಬಿಲ್ ಮಾತ್ರ ಪಾವತಿ ಮಾಡದಿರಿ ಏಕೆಂದರೆ?: ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವ ಕೆಲವರು ಒಟ್ಟು ಬಿಲ್ ಅನ್ನು ಪಾವತಿಸದೇ ಕನಿಷ್ಠ ಬಿಲ್ ಪಾವತಿಸುತ್ತಾರೆ. ಹೀಗೆ ಮಾಡುವುದು ತಪ್ಪು. ನೀವು ಕನಿಷ್ಠ ಬಿಲ್ ಪಾವತಿ ಮಾಡಿದರೆ, ಅದು ನಿಮ್ಮ ಕಾರ್ಡ್ ವ್ಯವಹಾರವನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಲು ಮಾತ್ರವೇ ಸಹಾಯ ಮಾಡುತ್ತದೆ. ಆದರೆ ಉಳಿದ ಬಿಲ್ಗೆ ನೀವು ಶೇ 5 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ಹೀಗಾಗಿ ಭಾರಿ ಪ್ರಮಾಣದ ಬಡ್ಡಿಯಿಂದ ಮುಕ್ತರಾಗಬೇಕಾದರೆ, ನೀವು ಬಿಲ್ನ ಒಟ್ಟಾರೆ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಒಂದೊಮ್ಮೆ ನೀವು ದೊಡ್ಡ ಖರೀದಿ ಮಾಡಿದ್ದರೆ, ಭಾರೀ ದಂಡ ಮತ್ತು ಬಡ್ಡಿಯಿಂದ ತಪ್ಪಿಸಿಕೊಳ್ಳಲು ಇಎಂಐ ಆಗಿ ಪರಿವರ್ತಿಸಿಕೊಂಡು ಭಾರಿ ಬಡ್ಡಿ ಹೊರೆಯಿಂದ ಬಚಾವ್ ಆಗಬಹುದು.
ಪ್ರತಿ ಬಾರಿ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪರಿಶೀಲಿಸಿ: ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸ್ವೀಕರಿಸಿದ ನಂತರ, ನೀವು ಅದನ್ನು ಸೂಕ್ಷ್ಮವಾಗಿ ಗಮನಿಸಬೇಕು. ನಿಮ್ಮ ಎಲ್ಲ ಖರೀದಿಗಳು ಕಾರ್ಡ್ ಸ್ಟೇಟ್‌ಮೆಂಟ್‌ನಲ್ಲಿ ಸರಿಯಾಗಿ ಪ್ರತಿಫಲಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ದಂಡ ಅಥವಾ ಬಡ್ಡಿ ಸಂಗ್ರಹವಿದೆಯೇ ಎಂದು ನೋಡಿಕೊಳ್ಳಬೇಕು. ಬಂದಿರುವ ಬಿಲ್ನಲ್ಲಿ ಯಾವುದೇ ಲೋಪ ಕಂಡು ಬಂದರೆ ಕ್ರೆಡಿಟ್ ಕಾರ್ಡ್ ಕಂಪನಿಯ ಗಮನಕ್ಕೆ ತರಬೇಕು. ಮೇಲೆ ವ್ಯವಹಾರ ಇಲ್ಲವೇ ದೂರವಾಣಿ ಕರೆ ಮಾಡಿ ಗಮನಕ್ಕೆ ತರಬೇಕು. ಕಾರ್ಡ್ ಬಿಲ್ಲಿಂಗ್ ದಿನಾಂಕಗಳನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು.
ನಿಮ್ಮ ಕಾರ್ಡ್ ಬಿಲ್ಲಿಂಗ್ ಸೈಕಲ್ ಒಂದು ತಿಂಗಳಲ್ಲಿ 10 ನೇ ದಿನಕ್ಕೆ ಕೊನೆಗೊಂಡರೆ, ಹೊಸ ಬಿಲ್ಲಿಂಗ್ ಸೈಕಲ್ ಮರುದಿನ 11 ರಂದು ಪ್ರಾರಂಭವಾಗುತ್ತದೆ. 50 ದಿನಗಳ ಬಡ್ಡಿ- ಮುಕ್ತ ಅವಧಿಯು ಬಿಲ್ಲಿಂಗ್ ಚಕ್ರದ ಆರಂಭದಲ್ಲಿ ಮಾಡಿದ ಖರೀದಿಗಳಿಗೆ ಮಾತ್ರ ಸಹಾಯಕವಾಗಿರುತ್ತದೆ. ಬಿಲ್ಲಿಂಗ್ ಚಕ್ರದ ಅಂತ್ಯವು ಸಮೀಪಿಸುತ್ತಿದ್ದಂತೆ ಈ ಅವಧಿಯು ಕಡಿಮೆಯಾಗುತ್ತದೆ. ಇದನ್ನು ಕ್ರೆಡಿಟ್ ಕಾರ್ಡ್ ಪಾವತಿದಾರರು ಗಮನದಲ್ಲಿ ಇಟ್ಟುಕೊಳ್ಳಬೇಕು.
ಕ್ಯಾಶ್ಬ್ಯಾಕ್ ಆಫರ್ಗಳ ಬಗ್ಗೆ ನಿಗಾ ಇರಲಿ: ಕ್ರೆಡಿಟ್ ಕಾರ್ಡ್ ಹೊಂದಿರುವವರು ರಿವಾರ್ಡ್‌ಗಳು, ಕ್ಯಾಶ್ ಬ್ಯಾಕ್ ಆಫರ್‌ಗಳು ಇತ್ಯಾದಿಗಳ ಮೇಲೆ ನಿಗಾ ಇಡಬೇಕು. ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿಕೊಂಡು ಖರೀದಿಸಿದ ಕೆಲವು ವಸ್ತುಗಳಿಗೆ ರಿಯಾಯಿತಿಗಳು ಲಭ್ಯವಿರುತ್ತವೆ. ಪ್ರಯಾಣ ಮತ್ತು ಹೋಟೆಲ್ ಬುಕಿಂಗ್‌ಗಳಿಗೂ ಇಂತಹ ರಿಯಾಯಿತಿಗಳನ್ನು ನೀಡಲಾಗುತ್ತದೆ.
ಕ್ಯಾಶ್ ಬ್ಯಾಕ್ ಆಫರ್‌ಗಳಲ್ಲಿ ಹಲವು ಪ್ರಯೋಜನಗಳನ್ನು ಪಡೆಯಬಹುದು. ಕಾರ್ಡ್ ಖರೀದಿ ಮಾಡುವಾಗ, ಈ ಎಲ್ಲಾ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಎಟಿಎಂನಿಂದ ಹಣವನ್ನು ಡ್ರಾ ಮಾಡಬಹುದು ಆದರೆ ಇದು 3.5 ಪ್ರತಿಶತದಷ್ಟು ಮಾಸಿಕ ಬಡ್ಡಿಯನ್ನು ಕೇಳುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಇದನ್ನು ಓದಿ:ನಿಮ್ಮ ಹಣ ಯಾರು ಕದಿಯಬಾರದೇ?.. ಈ ನಿಯಮಗಳನ್ನು ತಪ್ಪದೇ ಪಾಲಿಸಿ