ETV Bharat / business

ಷೇರುಗಳ ಏರಿಳಿತ, ಅದಾನಿ ಎಫ್​ಪಿಒ ರದ್ದು: ಹೂಡಿಕೆದಾರರಿಗೆ ₹20 ಸಾವಿರ ಕೋಟಿ ವಾಪಸ್​ - Follow on Public Offer scheme Cancellation

ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಎಫ್​ಪಿಒ ರದ್ದು- ಷೇರುಗಳ ಇಳಿಕೆಯಿಂದಾಗಿ ಯೋಜನೆ ವಾಪಸ್​- ಹೂಡಿಕೆದಾರರ ಹಣ ವಾಪಸ್​- ಅದಾನಿ ಗ್ರೂಪ್​ ಮೇಲೆ ನಕಾರಾತ್ಮಕ ವರದಿ- ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡೆನ್​ಬರ್ಗ್​ ರಿಸರ್ಚ್​ ವರದಿ

adani-enterprises-limited-fpo
ಅದಾನಿ ಎಫ್​ಪಿಒ ರದ್ದು
author img

By

Published : Feb 2, 2023, 6:39 AM IST

Updated : Feb 2, 2023, 1:53 PM IST

ಅಹಮದಾಬಾದ್ (ಗುಜರಾತ್): ಶ್ರೀಮಂತ ಉದ್ಯಮಿ ಗೌತಮ್​ ಅದಾನಿ ಒಡೆತನದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಬಿಡುಗಡೆ ಮಾಡಿದ್ದ ಫಾಲೋಆನ್​ ಪಬ್ಲಿಕ್​ ಆಫರ್​(ಎಫ್​ಪಿಒ) ಷೇರನ್ನು ಕಂಪನಿ ವಾಪಸ್​ ಪಡೆದಿದೆ. "ಮಾರುಕಟ್ಟೆಯಲ್ಲಿ ತನ್ನ ಷೇರುಗಳು ಏರಿಳಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ವಾಪಸ್​ ಪಡೆಯಲಾಗಿದೆ. ಹೂಡಿಕೆ ಮಾಡಿದ ಹಣವನ್ನು ಮರಳಿ ನೀಡಲಾಗುವುದು ಎಂದು ಉದ್ಯಮಿ ಗೌತಮ್​ ಅದಾನಿ ತಿಳಿಸಿದ್ದಾರೆ.

ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡೆನ್​ಬರ್ಗ್​ ರಿಸರ್ಚ್​ ಸಂಸ್ಥೆ ಅದಾನಿ ಗ್ರೂಪ್​ ಮೇಲೆ ನಕಾರಾತ್ಮಕ ವರದಿ ಭಿತ್ತರಿಸಿತ್ತು. ಇದರಿಂದ ಕಂಪನಿಯ ಷೇರುಗಳು ದಿಢೀರ್​ ಕುಸಿತಗೊಂಡು ನಷ್ಟಕ್ಕೀಡಾಗಿವೆ. ಎಫ್​ಪಿಒ ಖರೀದಿಗೆ ಹೂಡಿಕೆದಾರರು ಉತ್ತಮ ಪ್ರತಿಕ್ರಿಯೆ ತೋರಿದ್ದರು. ಆದರೆ, ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗಾಗಿ ಕುಸಿಯುತ್ತಿರುವ ಷೇರುಗಳ ಮಾರಾಟವನ್ನು ಕಂಪನಿ ತಡೆಹಿಡಿದಿದೆ.

"ಕಂಪನಿಯ ಷೇರುಗಳಲ್ಲಿ ಹೂಡಿಕೆದಾರರು ಮಾಡಿರುವ 20 ಸಾವಿರ ಕೋಟಿ ರೂ.ಯನ್ನು ವಾಪಸ್​ ಮಾಡಲಾಗುವುದು. ಷೇರುಗಳ ಏರುಪೇರಿನ ಸ್ಥಿತಿಯಲ್ಲಿ ಎಫ್​ಪಿಒ ಬಿಡುಗಡೆ ಮಾಡುವುದು ನೈತಿಕವಾಗಿ ಸರಿಯಲ್ಲ. ಹೀಗಾಗಿ ಯೋಜನೆಯನ್ನು ರದ್ದು ಮಾಡಲಾಗಿದೆ. ಇದು ಭವಿಷ್ಯದ ಯಾವುದೇ ನಿರ್ಧಾರಗಳ ಮೇಲೆ ಪರಿಣಾಮ ಬೀರುವುದಿಲ್ಲ. ಯೋಜನೆ ಸಕಾಲಿಕತೆಯ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು. ಕಂಪನಿಯ ಮೂಲಭೂತ ಅಂಶಗಳು ಬಲಿಷ್ಠವಾಗಿವೆ" ಎಂದು ಅದಾನಿ ಹೇಳಿದರು.

ಹೂಡಿಕೆದಾರರ ಹಿತಾಸಕ್ತಿ ಮುಖ್ಯ: ಎಫ್​ಪಿಒ ಬಿಡುಗಡೆ ರದ್ದು ಮಾಡಿದ್ದರ ಬಗ್ಗೆ ಸ್ಪಷ್ಟನೆ ನೀಡಿರುವ ಅದಾನಿ, "ಕಳೆದ ಕೆಲ ದಿನಗಳಿಂದ ಕಂಪನಿಯ ಷೇರುಗಳಲ್ಲಿನ ಏರಿಳಿತದಿಂದಾಗಿ ನಷ್ಟ ಉಂಟಾಗಿದೆ. ಆದಾಗ್ಯೂ ಹೂಡಿಕೆದಾರರು ನಂಬಿಕೆಯ ಆಧಾರದ ಮೇಲೆ ಷೇರುಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಆದರೆ, ಹೂಡಿಕೆದಾರರ ಹಿತಾಸಕ್ತಿಯ ಇಲ್ಲಿ ಅತಿಮುಖ್ಯವಾಗಿದೆ. ಸಂಭಾವ್ಯ ನಷ್ಟದಿಂದ ಅವರನ್ನು ರಕ್ಷಿಸಲು ಮಂಡಳಿಯು ಎಫ್​ಪಿಒ ಯೋಜನೆಯನ್ನು ಮುಂದುವರಿಸದಿರಲು ನಿರ್ಧರಿಸಲಾಗಿದೆ" ಎಂದರು.

  • #WATCH | After a fully subscribed FPO, yday’s decision of its withdrawal would've surprised many. But considering volatility of market seen yday, board strongly felt that it wouldn't be morally correct to proceed with FPO:Gautam Adani, Chairman, Adani Group

    (Source: Adani Group) pic.twitter.com/wCfTSJTbbA

    — ANI (@ANI) February 2, 2023 " class="align-text-top noRightClick twitterSection" data=" ">

"ಎಫ್​ಪಿಒದಲ್ಲಿ ಹೂಡಿಕೆ ಮಾಡಿದ್ದಕ್ಕಾಗಿ ಎಲ್ಲಾ ಹೂಡಿಕೆದಾರರಿಗೆ ಧನ್ಯವಾದ ಸಲ್ಲಿಸಿರುವ ಕಂಪನಿ, ನಮ್ಮ ಮೇಲಿರುವ ನಿಮ್ಮ ನಂಬಿಕೆ ಅಮೂಲ್ಯವಾದುದು. ಅದನ್ನು ಉಳಿಸಿಕೊಳ್ಳು ಪ್ರಯತ್ನಿಸಲಾಗುವುದು. ನಿಮ್ಮ ಹೂಡಿಕೆಗೆ ನಷ್ಟವಾಗಬಾರದು ಎಂಬ ಕಾರಣಕ್ಕಾಗಿ ಸದ್ಯದ ಪರಿಸ್ಥಿತಿಯಲ್ಲಿ ಎಫ್​ಪಿಒ ಬಿಡುಗಡೆ ರದ್ದು ಮಾಡಲಾಗಿದೆ" ಎಂದು ತಿಳಿಸಿದರು.

ಹೂಡಿಕೆಯ 20 ಸಾವಿರ ಕೋಟಿ ರೂ. ವಾಪಸ್​: ಇನ್ನು, ಎಫ್​ಪಿಒ ಬಿಡುಗಡೆ ಘೋಷಣೆಯಾದ ಬಳಿಕ ಈವರೆಗೂ 20 ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗಿದೆ. ಕಂಪನಿಯ ಷೇರುಗಳಲ್ಲಿ ಹೂಡಿಕೆಯಾದ ಅಷ್ಟೂ ಹಣವನ್ನು ಮೂಲ ಹೂಡಿಕೆದಾರರಿಗೆ ವಾಪಸ್​ ನೀಡಲಾಗುವುದು. ಈ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕಂಪನಿ ಹೇಳಿದೆ. FPO ಖರೀದಿಗೆ ಜನವರಿ 30 ಕೊನೆಯ ದಿನವಾಗಿತ್ತು.

ಷೇರು ಮೌಲ್ಯ ತೀವ್ರ ಕುಸಿತ: ಅದಾನಿ ಎಂಟರ್‌ಪ್ರೈಸಸ್‌ನ ಎಫ್​ಪಿಒ ಬಿಡುಗಡೆ ರದ್ದು ಮಾಡಿದ ಬಳಿಕ ಮತ್ತೆ ಅದರ ಷೇರುಗಳ ಮೌಲ್ಯ ತೀವ್ರ ಕುಸಿತ ಕಂಡಿದೆ. ಅದಾನಿ ಸಮೂಹದ ಪ್ರಮುಖ ಕಂಪನಿಯ ಷೇರುಗಳು ಬುಧವಾರ ಶೇ.26.70 ರಷ್ಟು ಕುಸಿತದೊಂದಿಗೆ 2,179.75 ರೂ.ಗ ವಹಿವಾಟು ಮುಗಿಸಿತ್ತು. ಇದಕ್ಕಿಂತಲೂ ಮೊದಲು ಅಂದರೆ ಮಂಗಳವಾರ ಶೇ.30 ರಷ್ಟು ಕುಸಿದು 1,941.2 ರೂ. ತಲುಪಿತ್ತು.

ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಹೇಳಿದ್ದೇನು?: ಕೈಗಾರಿಕೋದ್ಯಮಿ ಗೌತಮ್ ಅದಾನಿ ನೇತೃತ್ವದ ಗ್ರೂಪ್​​ ತನ್ನ ಷೇರುಗಳ ಬೆಲೆಯಲ್ಲಿ ಉದ್ದೇಶ ಪೂರ್ವಕವಾಗಿ ಏರಿಳಿತ ಮತ್ತು ಕೃತಕ ವ್ಯವಹಾರ ನಡೆಸಿತ್ತು ಎಂದು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್​ ತನ್ನ ವರದಿಯಲ್ಲಿ ಆರೋಪಿಸಿತ್ತು. ಈ ಆರೋಪದ ವರದಿಯ ನಂತರ, ಅದಾನಿ ಸಮೂಹದ ಕಂಪನಿಗಳ ಷೇರುಗಳಲ್ಲಿ ದೊಡ್ಡ ಮಟ್ಟದಲ್ಲಿ ಕುಸಿತ ಉಂಟಾಗಿದೆ.

ಅದಾನಿ ಸಂಸ್ಥೆಯ ತೀಕ್ಷ್ಣ ಉತ್ತರ: ಹಿಂಡನ್​ಬರ್ಗ್​ ವರದಿಗೆ ತೀಕ್ಷ್ಣವಾಗಿ ಉತ್ತರಿಸಿರುವ ಏಷ್ಯಾದ ಶ್ರೀಮಂತ ವ್ಯಕ್ತಿ ಗೌತಮ್‌ ಆದಾನಿ ಮಾಲಿಕತ್ವದ ಅದಾನಿ ಸಮೂಹ, "ಇದು ಕೇವಲ ಕಂಪನಿಯೊಂದರ ಮೇಲಿನ ದಾಳಿಯಲ್ಲ, ದೇಶದ ಮೇಲಿನ ಯೋಜಿತ ದಾಳಿʼʼ ಎಂದಿದೆ. 88 ಪ್ರಶ್ನೆಗಳಲ್ಲಿ 62 ಪ್ರಶ್ನೆಗಳಿಗೆ ಉತ್ತರ ನೀಡಲು ಅದಾನಿ ಗ್ರೂಪ್‌ ವಿಫಲವಾಗಿದೆ ಎಂದು ಹಿಂಡೆನ್‌ಬರ್ಗ್‌ ತಿಳಿಸಿತ್ತು. ಇದಕ್ಕೆ ಉತ್ತರ ರೂಪವಾಗಿ 413 ಪುಟಗಳ ದಾಖಲೆಯನ್ನು ಅದಾನಿ ಗ್ರೂಪ್‌ ಬಿಡುಗಡೆ ಮಾಡಿದೆ.

ಓದಿ: ವಿಶ್ವದ ಟಾಪ್ 10 ಸಿರಿವಂತರ ಪಟ್ಟಿಯಲ್ಲಿನ ಸ್ಥಾನ ಕಳೆದುಕೊಂಡ ಗೌತಮ್ ಅದಾನಿ

Last Updated : Feb 2, 2023, 1:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.