ಸ್ಯಾನ್ ಪ್ರಾನ್ಸಿಸ್ಕೊ: ಐಷಾರಾಮಿ ಕಾರುಗಳ ಉತ್ಪಾದಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯೂ ಸುಮಾರು 14 ಸಾವಿರ ಎಲೆಕ್ಟ್ರಿಕ್ ವಾಹನಗಳನ್ನು ಹಿಂಪಡೆದಿದೆ. ವಾಹನದಲ್ಲಿನ ಸಾಫ್ಟ್ವೇರ್ ತೊಂದರೆಯಿಂದಾಗಿ ಪವರ್ ಕಡಿತ ಸಮಸ್ಯೆಗೆ ಕಾರಣವಾಗಿದ್ದು, ಇದು ಅಪಘಾತದ ಅಪಾಯ ಹೆಚ್ಚಿಸಿದ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ. ಐಎಕ್ಸ್ ಎಸ್ಯುವಿ ಮತ್ತು ಐ-4 ಮತ್ತು ಐ-7 ಸೆಡನ್ ಕಾರುಗಳನ್ನು ಹಿಂಪಡೆಯಲಾಗಿದೆ. 14 ಅಕ್ಟೋಬರ್ 2021 ರಿಂದ 28 ಅಕ್ಟೋಬರ್ 2022ರಲ್ಲಿ ತಯಾರಾದ ಕಾರುಗಳು ಇವಾಗಿವೆ.
ಹೈ ವೋಲ್ಟೆಜ್ ಬ್ಯಾಟರಿ ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ನಲ್ಲಿನ ಸಾಫ್ಟ್ವೇರ್ ಸಂಬಂಧಿಸಿದ ಸಮಸ್ಯೆಯಿಂದ ಎಲೆಕ್ಟ್ರಿಕ್ ಪವರ್ ಸಮಸ್ಯೆಗೆ ಅಡಚಣೆಯಾಗುತ್ತಿರುವ ಹಿನ್ನೆಲೆ ಕಾರನ್ನು ಹಿಂಪಡೆಯುತ್ತಿರುವುದಾಗಿ ಬಿಎಂಡಬ್ಲ್ಯೂ ತಿಳಿಸಿದೆ. ವಿಶೇಷವಾಗಿ ಬ್ಯಾಟರಿ ನಿರ್ವಹಣಾ ಎಲೆಕ್ಟ್ರಾನಿಕ್ಸ್‌ನಲ್ಲಿ ತಪ್ಪಾದ ನಿರ್ಣಯದಿಂದ ಕ್ರಾಸ್ ಕೂಡ ಸಂಭವಿಸಬಹುದು, ಇದು ಎಲೆಕ್ಟ್ರಾನಿಕ್ ನಿಯಂತ್ರಣ ಘಟಕವನ್ನು ಮರು ಹೊಂದಿಸಲು ಕಾರಣವಾಗಬಹುದು.
ಇದನ್ನು ಮರು ಹೊಂದಿಸದಿದ್ದರೆ, ಇದು ಎಲೆಕ್ಟ್ರಿಕಲ್ ಪವರ್ ತೊಂದರೆಗೆ ಕಾರಣವಾಗಲಿದೆ. ಕಾರುಗಳ ಮಾಲೀಕರು ಈ ಸಮಸ್ಯೆ ನಿವಾರಣೆ ಆಗುವವರೆಗೆ ಕಾಯಬೇಕಿದೆ ಎಂದು ಸಂಸ್ಥೆ ಮನವಿ ಮಾಡಿದೆ. ಕಳೆದ ವರ್ಷ ಕೂಡ ಬಿಎಂಡಬ್ಲ್ಯೂ ಸಣ್ಣ ಪ್ರಮಾಣದಲ್ಲಿ ಕಾರುಗಳನ್ನು ಹಿಂಪಡೆದಿತ್ತು. ಬ್ಯಾಟರಿಯಲ್ಲಿನ ಬೆಂಕಿ ಸಮಸ್ಯೆ ಅಪಾಯದಿಂದ ಐ- 4 ಸೆಡನ್ ಮತ್ತು ಐಎಕ್ಸ್ ಎಸ್ಯುವಿಯನ್ನು ಹಿಂದೆ ಪಡೆದಿತ್ತು.
ಅಮೆರಿಕದ ರಾಷ್ಟ್ರೀಯ ಹೆದ್ದಾರಿ ಸಂಚಾರಿ ಸುರಕ್ಷಾ ಆಡಳಿತ ಅನುಸಾರ, ಹೈ ವೋಲ್ಟೆಜ್ ಬ್ಯಾಟರಿಗಳಲ್ಲಿನ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತುಕೊಳ್ಳುವ ಅಪಾಯ ಇದೆ. ಬಿಎಂಡಬ್ಲ್ಯೂಯಿಂದ ಕಾರಿನ ಹಿಂಪಡೆದ ಎಚ್ಚರಿಕೆಯಾಗಿದೆ ಎಂದು ತಿಳಿಸಿತ್ತು.
ಟೆಸ್ಲಾದಿಂದಲೂ ಕಾರು ಹಿಂಪಡೆತ: ಬಿಎಂಡಬ್ಲ್ಯೂ ಮಾತ್ರ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಹಿಂಪಡೆದ ಸಂಸ್ಥೆಯಲ್ಲ. ಕಳೆದ ವರ್ಷ ಟೆಸ್ಲಾ ಕೂಡ ತನ್ನ ಕೆಲವು ನಿರ್ದಿಷ್ಟ ಮಾದರಿಗಳನ್ನು ಹಿಂಪಡೆದಿತ್ತು. ಸಾಫ್ಟ್ವೇರ್ ಬಗ್ ಸಮಸ್ಯೆಯಿಂದ ಲೈಟ್ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಸಂಸ್ಥೆ ತಿಳಿಸಿತ್ತು. ಟೆಸ್ಲಾ ವಾಹನಗಳು 2020 ರಿಂದ 2023 ಮಾಡೆಲ್ ವೈ ಎಸ್‌ಯುವಿಗಳು ಮತ್ತು 2023 ಮಾಡೆಲ್ 3 ಸೆಡಾನ್‌ಗಳನ್ನು ಹಿಂಪಡೆಯಲಾಗಿತ್ತು. ಒಟ್ಟು 3,21,628 ವಾಹನಗಳನ್ನು ಮಾಲೀಕರಿಂದ ವಾಪಸ್ ಪಡೆದುಕೊಳ್ಳಲಾಗಿತ್ತು. ವಾಹನದ ಟೈಲ್ ಲ್ಯಾಂಪ್‌ಗಳು ಪ್ರಕಾಶಿಸುತ್ತಿಲ್ಲ ಎಂದು ಅಮೆರಿಕದ ಹೊರಗಿನ ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಿದ ನಂತರ ಕಳೆದ ತಿಂಗಳು ತಾಂತ್ರಿಕ ದೋಷದ ಬಗ್ಗೆ ತಿಳಿದುಕೊಂಡರು. ಟೆಸ್ಲಾ ಈ ತಿಂಗಳ ಆರಂಭದಲ್ಲಿ ಈ ವಿಷಯದ ಬಗ್ಗೆ ತನಿಖೆ ಪೂರ್ಣಗೊಳಿಸಿದರು.
ಫೋರ್ಡ್ನಲ್ಲೂ ಕಾಣಿಸಿಕೊಂಡಿದ್ದ ಸಮಸ್ಯೆ: ಅಮೆರಿಕದ ಫೋರ್ಡ್ ಸಂಸ್ಥೆ ಕೂಡ 49 ಸಾವಿರ ಮಸ್ತಗನ್ ಮ್ಯಾಚ್ ಇ ಎಲೆಕ್ಟ್ರಿಕಲ್ ಕ್ರಾಸ್ ಒವರ್ಗಳನ್ನು ಕಳೆದ ಜೂನ್ನಲ್ಲಿ ಹಿಂಪಡೆದಿತ್ತು. ಬ್ಯಾಟರಿ ಸುರಕ್ಷತೆಯ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿತ್ತು. 2020-2023 ಮಾದರಿಯ ವರ್ಷದ ಬ್ರಾಂಕೊ ಸ್ಪೋರ್ಟ್ ಮತ್ತು ಎಸ್‌ಕೇಪ್ ಎಸ್‌ಯುವಿಗಳನ್ನು ಹಿಂಪಡೆಯಲಾಗಿತ್ತು. ತೈಲ ವಿಭಜಕ ಹೌಸಿಂಗ್ನಲ್ಲಿ ಕಂಡು ಬಂದ ಬಿರುಕು ಮತ್ತು ಸೋರಿಕೆ ಹಿನ್ನೆಲೆಯಲ್ಲಿ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು. ಈ ಹಿನ್ನೆಲೆಯಲ್ಲಿ ವಾಹನಗಳ ಮರು ಪರಿಶೀಲನೆ ಅವಶ್ಯಕವಾಗಿದೆ ಎಂದು ಸಂಸ್ಥೆ ತಿಳಿಸಿತ್ತು.
ಇದನ್ನೂ ಓದಿ: ಇಂದು ಮಾರುಕಟ್ಟೆಗೆ ಅಗ್ಗದ ಮಹೀಂದ್ರಾ ಥಾರ್ ಲಗ್ಗೆ! ಬೆಲೆ, ವಿಶೇಷತೆ ಹೀಗಿದೆ..