ಪುಣೆ( ಮಹಾರಾಷ್ಟ್ರ): ನಿಶ್ಚಿತ ಠೇವಣಿ ಸುರಕ್ಷಿತ ಹೂಡಿಕೆಯ ಮಾರ್ಗವಾಗಿದೆ. ಇವು ನಿಗದಿತ ಅವಧಿಗೆ ಮಾಡಿದ ಹೂಡಿಕೆಗಳಾಗಿವೆ. ಬ್ಯಾಂಕ್ಗಳು ನೀಡುವ ಬಡ್ಡಿದರದ ಆಧಾರದ ಮೇಲೆ ನೀಡುವ ಮೊತ್ತವನ್ನು ನೀವು ನಿಮ್ಮ ಆದಾಯವಾಗಿ ಗಳಿಕೆ ಮಾಡುತ್ತೀರಿ. ಹೂಡಿಕೆಯ ಮೇಲಿನ ನಿಮ್ಮ ಆದಾಯವನ್ನು ನಿರ್ಧರಿಸುವಲ್ಲಿ FD ದರಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ನೀವು ಆಯ್ಕೆಮಾಡುವ ಸ್ಥಿರ ಠೇವಣಿ ಪ್ರಕಾರ, ಹೂಡಿಕೆಯ ಅವಧಿ ಮತ್ತು ನಿಮ್ಮ ಪಾವತಿಯ ಆಯ್ಕೆಗಳು ಸಹ ನಿಮ್ಮ ಗಳಿಕೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
ಬಜಾಜ್ ಫೈನಾನ್ಸ್ ಸೇರಿ ಬಹುತೇಕ ಬ್ಯಾಂಕ್ಗಳು ಸ್ಥಿರ ಠೇವಣಿಗಳ ಬಡ್ಡಿದರದಲ್ಲಿ ಏರಿಕೆ ಮಾಡಿದೆ. ಹೀಗಾಗಿ ಠೇವಣಿದಾರರಿಗೆ ಶುಭ ಸುದ್ದಿ ಬಂದಂತಾಗಿದೆ. ಇತ್ತೀಚಿನವರೆಗೂ ಬಡ್ಡಿದರ ತೀರಾ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಠೇವಣಿ ಇಡುವುದು ಜನಪ್ರಿಯವಾಗಿರಲಿಲ್ಲ. ಏಕೆಂದರೆ ಡೆಪಾಸಿಟ್ ಮಾಡುವುದು ಒಂದೇ ಇಡದೇ ಇರುವುದು ಒಂದೇ ಎಂಬಂತಾಗಿತ್ತು. ಆದರೀಗ ಅದು ಬದಲಾಗಿದೆ.
ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ನ ವೈಶಿಷ್ಟ್ಯಗಳು ಇಂತಿವೆ: ನೀವು ಮಾಡುವ ನಿಗದಿತ ಅವಧಿಯ ಠೇವಣಿ ಮೇಲೆ ಬ್ಯಾಂಕ್ಗಳು ನೀಡುವ ಬಡ್ಡಿ ದರ ಆಯಾ ಬ್ಯಾಂಕ್ಗಳ ನೀತಿ ನಿರ್ಧಾರಗಳ ಮೇಲೆ ನಿಂತಿರುತ್ತದೆ. FD ದರಗಳು ನೀವು ಹಣ ಇಡುವ ಸಮಯ- ಅವಧಿ ಮೇಲೆ ನಿಗದಿಯಾಗುತ್ತದೆ.
ಹೂಡಿಕೆ ಅವಧಿ: ಬ್ಯಾಂಕ್ಗಳು ನಿಗದಿತ ಅವಧಿಗೆ ನೀವು ಹಣ ಠೇವಣಿ ಇಟ್ಟರೆ ನೀಡುವ ಬಡ್ಡಿದರಕ್ಕೆ ಸ್ಥಿರ ಠೇವಣಿ ಎನ್ನಲಾಗುತ್ತದೆ. ಇವುಗಳು ಒಂದು ವರ್ಷದಷ್ಟು ಅತಿ ಚಿಕ್ಕ ಅವಧಿಯದ್ದಾಗಿರಬಹುದು. ಅಥವಾ ಐದು ಹಾಗೂ ಅದಕ್ಕಿಂತ ಹೆಚ್ಚಿನ ವರ್ಷಗಳನ್ನ ನಿಗದಿ ಮಾಡಿರಬಹುದು. ಇದಕ್ಕೆ ದೀರ್ಘಾವಧಿ ಠೇವಣಿ ಎಂದು ಕರೆಯಲಾಗುತ್ತದೆ. ನಿಮ್ಮ ಹೂಡಿಕೆಯು ದೀರ್ಘವಾದಷ್ಟೂ ನಿಮ್ಮ ಮೆಚ್ಯೂರಿಟಿ ಮೊತ್ತ ಹೆಚ್ಚಾಗಿರುತ್ತದೆ ಎಂಬುದನ್ನ ನಾವು- ನೀವೆಲ್ಲ ನೆನಪಿನಲ್ಲಿಡಬೇಕಾಗುತ್ತದೆ. ಆದಾಗ್ಯೂ, ಎಫ್‌ಡಿ ದರಗಳು ಕಾಲಾನಂತರದಲ್ಲಿ ಬದಲಾಗುವುದರಿಂದ ಬಹಳ ದೀರ್ಘವಾದ ಹೂಡಿಕೆಗೆ ಹೋಗುವುದು ಜಾಣತನದ ಲಕ್ಷಣವಲ್ಲ.
ಹೂಡಿಕೆಯ ಮೊತ್ತ: ಇದು ನಿಮ್ಮ ನಿಶ್ಚಿತ ಠೇವಣಿ ಅಡಿ ಎಷ್ಟು ವರ್ಷದ ಅವಧಿಗೆ ಹಣವನ್ನು ಬ್ಯಾಂಕಿನಲ್ಲಿಟ್ಟಿರುತ್ತೀರಿ ಎಂಬುದನ್ನು ಅವಲಂಭಿಸಿದೆ. ನೀವು ಕೇವಲ 100ಗಳಿಂದಲೂ ನಿಮ್ಮ ಹೂಡಿಕೆಯನ್ನು ಪ್ರಾರಂಭಿಸಬಹುದು. ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ನಲ್ಲಿ 15,000 ಸಾವಿರದಿಂದ ಫಿಕ್ಸೆಡ್ ಡಿಪಾಸಿಟ್ ಮಾಡಬಹುದು.
ಪಾವತಿ ಆಯ್ಕೆಗಳು: ಸ್ಥಿರ ಠೇವಣಿ ಹೂಡಿಕೆಯಲ್ಲಿ ನೀವು ನಿಮ್ಮ ಆದಾಯವನ್ನು ಯಾವಾಗ ಪಡೆಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ನಿಮಗೆ ಅವಕಾಶವಿದೆ. ನೆನಪಿಡಿ ನೀವು ಕಡಿಮೆ ಹೂಡಿಕೆ ಮಾಡಿದರೆ ನಿಮ್ಮ ಗಳಿಕೆಯೂ ಕಡಿಮೆ ಇರುತ್ತದೆ. ಬಜಾಜ್ ಫೈನಾನ್ಸ್ ಹಿರಿಯ ನಾಗರಿಕರಲ್ಲದ ಗ್ರಾಹಕರಿಗೆ ನೀಡುವ ವಿವಿಧ ಎಫ್‌ಡಿ ದರಗಳಲ್ಲಿ ನೀವು ಹಣ ತೊಗಿಸಿದರೆ ಎಷ್ಟು ಗಳಿಕೆ ಮಾಡಬಹುದು ಎಂಬುದನ್ನು ಈ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.
ಪಾವತಿ ಆಯ್ಕೆ | FD ದರಗಳು (p.a.) | ಬಡ್ಡಿ ಆದಾಯ ರೂ- ಅವಧಿ | ಒಟ್ಟು ಗಳಿಕೆಗಳು ರೂ. |
3 ಲಕ್ಷ ಹೂಡಿಕೆ | 7.35% | 89,101 (44 ತಿಂಗಳು | 3,89,101 |
ಮಾಸಿಕ | 7.11% | 78,210 | 3,78,210 |
ತ್ರೈಮಾಸಿಕ | 7.16% | 78,760 | 3,78,210 |
ಅರ್ಧ-ವಾರ್ಷಿಕ | 7.22% | 79,420 | 3,79,420 |
ವಾರ್ಷಿಕ | 7.35% | 80,850 | 3,80,850 |
( ಬಜಾಜ್ ಫೈನಾನ್ಸ್ FD ಕ್ಯಾಲ್ಕುಲೇಟರ್ ಬಳಸಿ ಫಲಿತಾಂಶಗಳನ್ನು ಲೆಕ್ಕಹಾಕಲಾಗಿದೆ. ಇದು ನಮ್ಮ ಸಲಹೆ ಅಲ್ಲ ಹೂಡಿಕೆ ಮುನ್ನ ಎಲ್ಲ ತಿಳಿದುಕೊಂಡು ಮುಂದುವರೆಯಿರಿ_
ಸುರಕ್ಷಿತ ಹೂಡಿಕೆ: ಒಮ್ಮೆ ಹೂಡಿಕೆ ಮಾಡಿದರೆ, ನಿಮ್ಮ FD ದರಗಳು ಮಾರುಕಟ್ಟೆಯ ಪರಿಸ್ಥಿತಿಗಳು ಅಥವಾ ಏರಿಳಿತಗಳಿಂದ ಪ್ರಭಾವಿತವಾಗುವುದಿಲ್ಲ. ಇದು ನಿಮ್ಮ ಹೂಡಿಕೆಯನ್ನು ಸುರಕ್ಷಿತವಾಗಿರಿಸುತ್ತದೆ. ಇದಲ್ಲದೇ ನೀವು ಕ್ರಿಸಿಲ್, ಐಸಿಆರ್‌ಎ ಮತ್ತು ಇತರ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳನ್ನು ನೀವು ಆಯ್ಕೆಮಾಡುವ ಎಫ್‌ಡಿಗಾಗಿ ನೋಡಬಹುದು ಮತ್ತು ನಿಮ್ಮ ಹೂಡಿಕೆ ಮಾಡಿದ ಕಾರ್ಪಸ್ ಮತ್ತು ಪಾವತಿಗಳನ್ನು ನೀವು ತಪ್ಪದೇ ಮತ್ತು ಸಮಯಕ್ಕೆ ಪಡೆಯುತ್ತೀರಿ ಎಂದು ಖಚಿತಪಡಿಸಿಕೊಳ್ಳಬಹುದು.
ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ನ ಪ್ರಯೋಜನಗಳು: ನಿಮ್ಮ ಹೂಡಿಕೆಯನ್ನು ಆನ್‌ಲೈನ್‌ನಲ್ಲಿ ಪ್ರಾರಂಭಿಸುವುದು ಸುಲಭ. ಡಿಜಿಟಲ್ ನಿಬಂಧನೆಗಳೊಂದಿಗೆ ನೀವು ಕೆಲವೇ ನಿಮಿಷಗಳಲ್ಲಿ ನಿಮ್ಮ ಆಯ್ಕೆಯ FD ಯಲ್ಲಿ ಕಾಗದರಹಿತ ಹೂಡಿಕೆಯನ್ನು ಮಾಡಬಹುದು. ನೀವು ಸುಲಭವಾಗಿ ಕೆಲವು ಕ್ಲಿಕ್‌ಗಳಲ್ಲಿ ನಿಮ್ಮ FD ಗಳನ್ನು ನಿಮ್ಮ ಮೊಬೈಲ್ ಮೂಲಕವೇ ನಿರ್ವಹಿಸಬಹುದು.
FDಗಳು ಮಾರುಕಟ್ಟೆಯ ಪರಿಸ್ಥಿತಿಗಳನ್ನು ಲೆಕ್ಕಿಸದೆ ಆದಾಯ ನೀಡುತ್ತದೆ: ನೀವು ಎಫ್‌ಡಿಗಳಲ್ಲಿ ಹೂಡಿಕೆ ಮಾಡಿದಾಗ, ಎಫ್‌ಡಿ ದರಗಳು ಲಾಕ್ ಆಗಿರುತ್ತವೆ ಮತ್ತು ಈಕ್ವಿಟಿ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಗಳಿಗಿಂತ ಭಿನ್ನವಾಗಿ ಮಾರುಕಟ್ಟೆಯ ಚಂಚಲತೆಯಿಂದ ಪ್ರಭಾವಿತವಾಗುವುದಿಲ್ಲ. ಇದು ಅಪಾಯವನ್ನು ಕಡಿಮೆ ಮಾಡುತ್ತದೆ. ನಿಮ್ಮ ಪೋರ್ಟ್‌ಪೋಲಿಯೊವನ್ನು ಹೆಚ್ಚು ಸ್ಥಿರ ಮತ್ತು ಸಮತೋಲಿತವಾಗಿಸುತ್ತದೆ.
ಹಿರಿಯ ನಾಗರಿಕರಿಗೆ ಸಿಗುತ್ತೆ ಹೆಚ್ಚಿನ ಬಡ್ಡಿ: FD ವಿತರಕರು ಸಾಮಾನ್ಯವಾಗಿ ಹಿರಿಯ ನಾಗರಿಕರಿಗೆ ಹೆಚ್ಚಿನ FD ದರಗಳನ್ನು ನೀಡುತ್ತಾರೆ. ಬಜಾಜ್ ಫೈನಾನ್ಸ್ ಹಿರಿಯ ನಾಗರಿಕರ ಎಫ್‌ಡಿ ದರಗಳ ಆಧಾರದ ಮೇಲೆ ಅದೇ ಹೂಡಿಕೆ ಮೊತ್ತಕ್ಕೆ ಅಂತಹ ಎಫ್‌ಡಿ ದರಗಳ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಕೆಳಗಿನ ಕೋಷ್ಟಕವನ್ನು ಒಮ್ಮೆ ಗಮನಿಸಿ
ಹೂಡಿಕೆದಾರ ಹೂಡಿಕೆ ಮೊತ್ತ ರೂ | FD ದರಗಳು (p.a. ನಲ್ಲಿ) | ಅವಧಿ (ತಿಂಗಳಲ್ಲಿ) | ಹೂಡಿಕೆಯ ಮೇಲಿನ ಒಟ್ಟು ಆದಾಯ ರೂ |
3,00,000(ಸಾಮಾನ್ಯ) | 7.35% | 44 | 3,89,101 |
3,00,000 (ಹಿರಿಯ ನಾಗರಿಕ) | 7.60% | 44 | 3,92,434 |
( ಬಜಾಜ್ ಫೈನಾನ್ಸ್ FD ಕ್ಯಾಲ್ಕುಲೇಟರ್ ಬಳಸಿ ಫಲಿತಾಂಶಗಳನ್ನು ಲೆಕ್ಕಹಾಕಲಾಗಿದೆ - ಇದು ನಮ್ಮ ಸಲಹೆ ಅಲ್ಲ ಹೂಡಿಕೆ ಮುನ್ನ ಎಲ್ಲ ತಿಳಿದುಕೊಂಡು ಮುಂದುವರೆಯಿರಿ)
ನಿಮ್ಮ FD ಮೇಲೆ ಕ್ರೆಡಿಟ್ ಲಭ್ಯತೆ: ನಿಮಗೆ ಒಂದು ವೇಳೆ ನಗದು ಕೊರತೆ ಸಮಯದಲ್ಲಿ,ನೀವು ಎಫ್‌ಡಿ ಮಾಡಿದ ಬ್ಯಾಂಕ್ನಿಂದಲೇ ನಿಮಗೆ ಅಗತ್ಯ ಇರುವ ಹಣವನ್ನು ಪಡೆದು ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಲು ನಿಮ್ಮ FD ಯ ಆಧಾರದ ಮೇಲೆ ಸಾಲ ತೆಗೆದುಕೊಳ್ಳಬಹುದು.
ನೀವು ಗಳಿಸಿದ ಹಣವನ್ನು ಉಳಿಸಿ ಬೆಳೆಸಲು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನಿಮಗೆ ಉತ್ತಮ ಹಾಗೂ ಸುರಕ್ಷಿತ ಮತ್ತು ಜಾಣತನದ ಹಣಕಾಸಿನ ಯೋಜನೆ ಅತ್ಯಗತ್ಯ. ನಿಶ್ಚಿತ ಠೇವಣಿಗಳೊಂದಿಗೆ ಅಪಾಯ ಅಥವಾ ಸುರಕ್ಷತೆಯ ಬಗ್ಗೆ ಚಿಂತಿಸದೆ ನಿಮ್ಮ ಉಳಿತಾಯವನ್ನು ಹೆಚ್ಚಿಸಬಹುದು.
ಇದನ್ನು ಓದಿ:ನೌಟಂಕಿ' ಕಂಪನಿಗೆ 'ತಮಾಶಾ' ಗ್ಯಾರಂಟಿ: ₹141 ಕೋಟಿ ಸಾಲ ಕೊಟ್ಟು ಬ್ಯಾಂಕುಗಳಿಗೆ ಫಜೀತಿ!