ETV Bharat / business

ಅಸ್ಸೋಂ ಟೀ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​: 1 ವರ್ಷದಲ್ಲಿ 165 ಮಿಲಿಯನ್ ಕೆಜಿ ಚಹಾ ಪುಡಿ ಮಾರಾಟ - ಟೀ ಖರೀದಿದಾರರ ಸಂಘದ ಕಾರ್ಯದರ್ಶಿ ದಿನೇಶ್ ಬಿಹಾನಿ

ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ 2022 - 23ರ ಹಣಕಾಸು ವರ್ಷದಲ್ಲಿ 165 ಮಿಲಿಯನ್ ಕೆಜಿ ಚಹಾ ಪುಡಿ ಮಾರಾಟವಾಗಿದೆ.

tea
ಅಸ್ಸೋಂ ಟೀ
author img

By

Published : May 16, 2023, 8:41 AM IST

ಗುವಾಹಟಿ (ಅಸ್ಸೋಂ): ಅಸ್ಸೋಂ ತನ್ನ ವಿಶಿಷ್ಟ ರುಚಿಕರವಾದ ಟೀಗೆ ಪ್ರಸಿದ್ದ. ಇಲ್ಲಿನ ಟೀಗೆ ಮನಸೋಲದ ಚಹಾ ಪ್ರಿಯರಿಲ್ಲ. ಈ ಬಾರಿ ಇದೇ ರಾಜ್ಯ ತನ್ನ ಟೀ ಪುಡಿ ಮಾರಾಟದಲ್ಲಿ ಮತ್ತೆ ದಾಖಲೆ ಬರೆದಿದೆ. ಹೌದು ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ 2022-2023ರ ಹಣಕಾಸು ವರ್ಷದಲ್ಲಿ ರೂ 3,300 ಕೋಟಿಗೂ ಹೆಚ್ಚು ಮೌಲ್ಯದ ಅಸ್ಸೋಂ ಚಹಾ ಪುಡಿ (ಟೀ) ಮಾರಾಟವಾಗಿದೆ ಎಂದು ಗುವಾಹಟಿ ಟೀ ಹರಾಜು ಕೇಂದ್ರದ ಅಧಿಕೃತ ಮಾಹಿತಿ ನೀಡಿದೆ.

ಗುವಾಹಟಿ ಟೀ ಹರಾಜು ಕೇಂದ್ರದ ಅಧಿಕೃತ ಮಾಹಿತಿಯ ಪ್ರಕಾರ, 2022-23ರ ಅವಧಿಯ ಚಹಾ ಹರಾಜು ಕೇಂದ್ರದಲ್ಲಿ ಪ್ರತಿ ಕೆಜಿ ಪುಡಿಗೆ 191.26 ರೂವಿನಂತೆ ಸುಮಾರು 165 ಮಿಲಿಯನ್ ಕೆಜಿ ಚಹಾ ಪುಡಿ ಮಾರಾಟ ಮಾಡಲಾಗಿದೆ.

ಗುವಾಹಟಿ ಟೀ ಹರಾಜು ಖರೀದಿದಾರರ ಸಂಘದ (ಜಿಟಿಎಬಿಎ) ಕಾರ್ಯದರ್ಶಿ ದಿನೇಶ್ ಬಿಹಾನಿ ಈ ಕುರಿತು ಮಾಹಿತಿ ನೀಡಿದ್ದಾರೆ. 2022-23 ರ ವರ್ಷದಲ್ಲಿ 3,300 ಕೋಟಿ ಮೌಲ್ಯದ ಸುಮಾರು 165 ಮಿಲಿಯನ್ ಕೆಜಿ ಚಹಾ ಪುಡಿಯನ್ನು ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ ಮಾರಾಟ ಮಾಡಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹರಾಜಿನ ಸರಾಸರಿ ಬೆಲೆ ಪ್ರತಿ ಕೆಜಿಗೆ 8.10 ರೂ.ವರೆಗೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ವಿಶೇಷ ಟೀ ಮನೋಹರಿ ಗೋಲ್ಡನ್ ಟೀ ಕೆಜಿಗೆ 99,999 ರೂ.ಗೆ ಹರಾಜಾಗಿತ್ತು. ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ ಸಾಂಪ್ರದಾಯಿಕ ಚಹಾ ಪುಡಿ ಸುಮಾರು 5,100 ರೂ.ಗೆ ಹರಾಜು ಮಾಡಲಾಗಿದೆ. ಹಾಗೆ ಜಾಗತಿಕ ಮಟ್ಟದಲ್ಲಿ ಅಸ್ಸೋಂ ಚಹಾಕ್ಕೆ ಬೇಡಿಕೆ ಹೆಚ್ಚುತ್ತಿದೆ. ಕಳೆದ ಎರಡು-ಮೂರು ವರ್ಷಗಳಲ್ಲಿ, ರಫ್ತುದಾರರ ಬೇಡಿಕೆಗಳು ಕೂಡ ಹೆಚ್ಚಾಗಿವೆ.

ಈ ಹಣಕಾಸು ವರ್ಷದಲ್ಲಿ ಸಹ ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ ಹೆಚ್ಚಿನ ಚಹಾ ಪುಡಿ ಮಾರಾಟವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ದಿನೇಶ್ ಬಿಹಾನಿ ಹೇಳಿದ್ದಾರೆ. "ಗುವಾಹಟಿ ಟೀ ಹರಾಜು ಕೇಂದ್ರದ ಮಾಹಿತಿ ಪ್ರಕಾರ, 2019-20 ರಲ್ಲಿ ಪ್ರತಿ ಕೆಜಿಗೆ ಸರಾಸರಿ 139.65 ರೂವಿನಂತೆ ಒಟ್ಟು 204.94 ಮಿಲಿಯನ್ ಕೆಜಿ ಚಹಾ ಪುಡಿ ಮಾರಾಟ ಮಾಡಲಾಗಿತ್ತು.

1.15 ಲಕ್ಷ ಕೊಟ್ಟು 1 ಕೆ.ಜಿ. ಟೀ ಪುಡಿ ಖರೀದಿಸಿದ ಉದ್ಯಮಿ: ಕಳೆದ ಡಿಸೆಂಬರ್​ನಲ್ಲಿ ಗುಹಾವಟಿ ಟೀ ಹರಾಜು ಕೇಂದ್ರ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಮನೋಹರಿಯೆಂಬ ಗೋಲ್ಡ್​ ಚಹಾ ಪುಡಿ ಬರೋಬ್ಬರಿ 1.15 ಲಕ್ಷ ರೂಗೆ ಮಾರಾಟವಾಗಿದೆ. ಈ ಪುಡಿಯನ್ನು ಖರೀದಿಸಿದವ ಒಬ್ಬ ಹೋಟೆಲ್ ಉದ್ಯಮಿ.

ತನ್ನದೇ ಬ್ರ್ಯಾಂಡ್​ನ್ನು ಹೊಂದಿರುವ ದಿಬ್ರುಗಢ್ ಜಿಲ್ಲೆಯ ಮನೋಹರಿ ಟೀ ಎಸ್ಟೇಟ್‌ನಲ್ಲಿ ಈ ಚಹಾ ಪುಡಿ ತಯಾರಿಸಲಾಗುತ್ತದೆ. ಅಸ್ಸೋಂನ ಈ ಪ್ರಸಿದ್ಧ ಟೀ ಪುಡಿಯನ್ನು ಹೈದರಾಬಾದ್‌ನ ಹೋಟೆಲ್ ಉದ್ಯಮಿ ಕೆ ಬಾಬುರಾವ್ ಜಿಟಿಎಸಿ ನಡೆಸಿದ ಹರಾಜಿನಲ್ಲಿ 1.15 ಲಕ್ಷ ರೂಪಾಯಿಗಳ ದಾಖಲೆ ಬೆಲೆಗೆ ಖರೀದಿಸಿದ್ದಾರೆ.

ಇದನ್ನೂ ಓದಿ: ನೀಲಕಂಠ ಪರ್ವತದಲ್ಲಿ ಹಿಮಪಾತ.. ಹಿಮರಾಶಿಯ ದೃಶ್ಯ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.