ETV Bharat / business

ಅಮೆಜಾನ್​ನಲ್ಲಿ ಉದ್ಯೋಗ ಕಡಿತದ ಪರ್ವ ಆರಂಭ: ಸಾಫ್ಟವೇರ್​ ಎಂಜಿನಿಯರ್​ಗಳಿಗೆ ಗೇಟ್​ಪಾಸ್

author img

By

Published : Nov 17, 2022, 1:22 PM IST

ಕೆಲ ಹುದ್ದೆಗಳು ಕಂಪನಿಗೆ ಇನ್ಮುಂದೆ ಅಗತ್ಯವಿಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಡಿವೈಸಸ್ ಮತ್ತು ಸರ್ವಿಸ್ ವಿಭಾಗದ ಹಿರಿಯ ಉಪಾಧ್ಯಕ್ಷ ಡೇವ್ ಲಿಂಪ್ ಬ್ಲಾಗ್ ಪೋಸ್ಟ್‌ನಲ್ಲಿ ನವೆಂಬರ್​ 16 ರಂದು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಮೆಜಾನ್​ನಲ್ಲಿ ಉದ್ಯೋಗ ಕಡಿತದ ಪರ್ವ ಆರಂಭ: ಸಾಫ್ಟವೇರ್​ ಎಂಜಿನಿಯರ್​ಗಳಿಗೆ ಗೇಟ್​ಪಾಸ್
Amazon job cuts begin: Gatepass for software engineers

ಸ್ಯಾನ್​ ಫ್ರಾನ್ಸಿಸ್ಕೊ: ಅಮೆಜಾನ್ ಡಾಟ್ ಕಾಂ ಈ ವಾರ ಕಂಪನಿಯಲ್ಲಿರುವ ಉದ್ಯೋಗಗಳನ್ನು ಕಡಿತಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಂಪನಿಯು ತನ್ನ ಡಿವೈಸ್​​ ವಿಭಾಗ, ರಿಟೇಲ್ ವಿಭಾಗ ಮತ್ತು ಮಾನವ ಸಂಪನ್ಮೂಲ ಸೇರಿದಂತೆ ಇನ್ನು ಕೆಲ ವಿಭಾಗಗಳಲ್ಲಿ ಕೆಲ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ದತ್ತಾಂಶ ವಿಜ್ಞಾನಿಗಳು, ಸಾಫ್ಟ್‌ವೇರ್ ಎಂಜಿನಿಯರ್‌ಗಳು ಮತ್ತು ಇತರ ಕಾರ್ಪೊರೇಟ್ ಉದ್ಯೋಗಿಗಳು ಕೆಲಸ ಮಾಡುವ ವಿವಿಧ ಸೌಲಭ್ಯಗಳಲ್ಲಿನ ಸುಮಾರು 260 ಕಾರ್ಮಿಕರನ್ನು ವಜಾಗೊಳಿಸುವುದಾಗಿ ತಿಳಿಸಿತ್ತು. ಈ ಉದ್ಯೋಗ ಕಡಿತಗಳು ಜನವರಿ 17 ರಿಂದ ಜಾರಿಗೆ ಬರಲಿವೆ ಎಂದು ತಿಳಿದು ಬಂದಿದೆ.

ಆಳವಾದ ವಿಮರ್ಶೆಗಳ ನಂತರ, ನಾವು ಇತ್ತೀಚೆಗೆ ಕೆಲವು ಟೀಂಗಳನ್ನು ಹಾಗೂ ಈಗಾಗಲೇ ಇರುವ ಪ್ಲಾನ್​​​ನಂತೆ ಒಟ್ಟುಗೂಡಿಸಲು ನಿರ್ಧರಿಸಿದ್ದೇವೆ. ಕೆಲ ಹುದ್ದೆಗಳು ಕಂಪನಿಗೆ ಇನ್ಮುಂದೆ ಅಗತ್ಯವಿಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಡಿವೈಸಸ್ ಮತ್ತು ಸರ್ವಿಸ್ ವಿಭಾಗದ ಹಿರಿಯ ಉಪಾಧ್ಯಕ್ಷ ಡೇವ್ ಲಿಂಪ್ ಬ್ಲಾಗ್ ಪೋಸ್ಟ್‌ನಲ್ಲಿ ನವೆಂಬರ್​ 16 ರಂದು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದರಿಂದಾಗಿ ಡಿವೈಸಸ್ ಮತ್ತು ಸರ್ವಿಸ್ ವಿಭಾಗದಲ್ಲಿ ನಾವು ಪ್ರತಿಭಾವಂತ ಅಮೆಜೋನಿಯನ್ನರನ್ನು ಕಳೆದುಕೊಳ್ಳುತ್ತೇವೆ ಎಂದು ನಮಗೆ ತಿಳಿದಿರುವ ಕಾರಣ ಈ ಸುದ್ದಿಯನ್ನು ಹೇಳಲು ನನಗೆ ನೋವುಂಟು ಕೂಡಾ ಮಾಡುತ್ತದೆ ಎಂದು ಅವರು ಇದೇ ವೇಳೆ ವಿಷಾದ ವ್ಯಕ್ತಪಡಿಸಿದ್ದಾರೆ.

ವಜಾ ಮಾಡಲ್ಪಟ್ಟವರಿಗೆ ಈ ಬಗ್ಗೆ ಮಂಗಳವಾರ ತಿಳಿಸಲಾಗಿದೆ ಮತ್ತು ಅವರಿಗೆ ಕಂಪನಿಯೊಳಗೆ ಹೊಸ ನೌಕರಿ ನೀಡುವಲ್ಲಿ ಕಂಪನಿಯು ಅವರಿಗೆ ನೆರವು ನೀಡಲಿದೆ ಎಂದು ಅವರು ಹೇಳಿದರು. ಒಂದು ವೇಳೆ ಉದ್ಯೋಗಿಗೆ ಕಂಪನಿಯೊಳಗೆ ಹೊಸ ನೌಕರಿ ನೀಡಲಾಗದಿದ್ದರೆ, ಅಮೆಜಾನ್ ಬೇರ್ಪಡಿಕೆ ಪಾವತಿ, ಬಾಹ್ಯ ಉದ್ಯೋಗ ನಿಯೋಜನೆಗೆ ಬೆಂಬಲ ಮತ್ತು ಪರಿವರ್ತನೆಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಲಿಂಪ್ ಸ್ಪಷ್ಟನೆ ಕೂಡಾ ನೀಡಿದ್ದಾರೆ.

ಇದನ್ನೂ ಓದಿ: ಅಲೆಕ್ಸಾ ಮೂಲಕ ಜೋರು ಸಂಗೀತ ಕೇಳಿದ್ದಕ್ಕೆ ಕೇಸ್​.. ಇದನ್ನು ಒಪ್ಪಲಾಗದು ಎಂದ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.