ETV Bharat / business

ಫೆಸ್ಟಿವಲ್ ಸೇಲ್ ಆರಂಭಿಸಿದ ಅಮೆಜಾನ್, ಫ್ಲಿಪ್​ಕಾರ್ಟ್; 90 ಸಾವಿರ ಕೋಟಿ ರೂ. ಇ-ಕಾಮರ್ಸ್​ ವಹಿವಾಟು ನಿರೀಕ್ಷೆ

author img

By ETV Bharat Karnataka Team

Published : Oct 8, 2023, 7:24 PM IST

ಇ-ಕಾಮರ್ಸ್​ ಕಂಪನಿಗಳಾದ ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್ ಭಾರತದಲ್ಲಿ ಹಬ್ಬದ ಸೀಸನ್​ನ ಮಾರಾಟ ಆರಂಭಿಸಿವೆ.

Amazon, Flipkart begin festive season war as India looks at Rs 90K cr worth sales

ನವದೆಹಲಿ : ಇ-ಕಾಮರ್ಸ್ ದೈತ್ಯ ಕಂಪನಿಗಳಾದ ಅಮೆಜಾನ್, ಫ್ಲಿಪ್​ಕಾರ್ಟ್, ಮಿಂತ್ರಾ ಮತ್ತು ಇತರ ಕಂಪನಿಗಳು ಭಾನುವಾರದಿಂದ ಭಾರತದಲ್ಲಿ ಹಬ್ಬದ ಋತುವಿನ ಮಾರಾಟ ಪ್ರಾರಂಭಿಸಿವೆ. ಈ ಹಬ್ಬದ ಸೀಸನ್​​ನಲ್ಲಿ ಇವು ಒಟ್ಟಾರೆಯಾಗಿ 90 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುವ ನಿರೀಕ್ಷೆಯಿದೆ. ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ರೆಡ್ ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ಪ್ರಕಾರ, ಸುಮಾರು 140 ಮಿಲಿಯನ್​ನಷ್ಟಿರುವ ಆನ್ ಲೈನ್ ಮಾರಾಟಗಾರರು, ಅದರಲ್ಲೂ ವಿಶೇಷವಾಗಿ ಸಣ್ಣ ವ್ಯಾಪಾರಿಗಳು, ವರ್ಷದಿಂದ ವರ್ಷಕ್ಕೆ ಹಬ್ಬದ ಮಾರಾಟದಲ್ಲಿ ಕನಿಷ್ಠ 15 ಪ್ರತಿಶತದಷ್ಟು ಏರಿಕೆಯಾಗಬಹುದು ಎಂದು ನಿರೀಕ್ಷಿಸಿದ್ದಾರೆ. ಸರಾಸರಿ ಮಾರಾಟ ಬೆಳವಣಿಗೆ ಶೇಕಡಾ 26 ರಷ್ಟಾಗಬಹುದು ಎಂದು ವರದಿಗಳು ತಿಳಿಸಿವೆ.

ಅಮೆಜಾನ್ ಇಂಡಿಯಾ ಹಬ್ಬದ ಋತುವಿನಲ್ಲಿ ತನ್ನ ಜಾಲದಲ್ಲಿ 1,00,000 ಕ್ಕೂ ಹೆಚ್ಚು ಸೀಸನಲ್ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಮುಂಬೈ, ದೆಹಲಿ, ಪುಣೆ, ಬೆಂಗಳೂರು, ಹೈದರಾಬಾದ್, ಕೋಲ್ಕತಾ, ಲಕ್ನೋ ಮತ್ತು ಚೆನ್ನೈನಂತಹ ನಗರಗಳಲ್ಲಿ ನೇಮಕ ಮಾಡಿಕೊಳ್ಳಲಾದ ನೇರ ಮತ್ತು ಪರೋಕ್ಷ ಉದ್ಯೋಗಗಳು ಇದರಲ್ಲಿ ಸೇರಿವೆ. ಮಿಂತ್ರಾದ ಬಿಗ್ ಫ್ಯಾಷನ್ ಫೆಸ್ಟಿವಲ್ ಈಗ 6,000 ಕ್ಕೂ ಹೆಚ್ಚು ಪ್ರಮುಖ ಅಂತರರಾಷ್ಟ್ರೀಯ, ದೇಶೀಯ ಮತ್ತು ಡಿ 2 ಸಿ ಬ್ರಾಂಡ್ ಗಳ 23 ಲಕ್ಷಕ್ಕೂ ಹೆಚ್ಚು ಫ್ಯಾಷನ್, ಸೌಂದರ್ಯ ಮತ್ತು ಲೈಫ್​ ಸ್ಟೈಲ್ ಉತ್ಪನ್ನಗಳೊಂದಿಗೆ ಲೈವ್ ಆಗಿದೆ.

ಸ್ನ್ಯಾಪ್ ಡೀಲ್ ಕೂಡ ಅಕ್ಟೋಬರ್ 8 ರಿಂದ 15 ರವರೆಗೆ 'ತೂಫಾನಿ ಸೇಲ್-ಫೆಸ್ಟಿವ್ ಧಮಾಕಾ' ಎಂಬ ಹಬ್ಬದ ಋತುವಿನ ಮೊದಲ ಮಾರಾಟವನ್ನು ಪ್ರಾರಂಭಿಸಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಸ್ಯಾಮ್​ಸಂಗ್​ ಬಹುನಿರೀಕ್ಷಿತ ಹಬ್ಬದ ಋತುವಿನಲ್ಲಿ ತನ್ನ ವ್ಯಾಪಕ ಶ್ರೇಣಿಯ ಟೆಲಿವಿಷನ್​ಗಳ ಭಾರಿ ಡಿಸ್ಕೌಂಟ್​ ಆಫರ್​ ನೀಡುತ್ತಿದೆ.

ಫ್ಲಿಪ್ ಕಾರ್ಟ್ ನ 'ಬಿಗ್ ಬಿಲಿಯನ್ ಡೇಸ್' ಸಂದರ್ಭದಲ್ಲಿ ಜರ್ಮನಿಯ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಬ್ಲೌಪಂಕ್ಟ್ ತನ್ನ ಎಲ್ಲಾ ಶ್ರೇಣಿಯ ಟಿವಿಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಬ್ಲಾಪಂಕ್ಟ್ ಸ್ಮಾರ್ಟ್ ಟಿವಿಗಳು ಮತ್ತು ಉಪಕರಣಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ನೀಡುತ್ತಿದೆ. ಹೊಸ ಟಿವಿಗಳು 6,299 ರೂ.ಗಳ ಆಕರ್ಷಕ ಬೆಲೆಯಲ್ಲಿ ಪ್ರಾರಂಭವಾಗಲಿದ್ದು, ಹೊಸದಾಗಿ ಬಿಡುಗಡೆಯಾದ 43 ಇಂಚಿನ ಕ್ಯೂಎಲ್ಇಡಿ 28,999 ರೂ.ಗೆ ಲಭ್ಯವಿದೆ.

ಸ್ಯಾಮ್​ಸಂಗ್​, ಆಪಲ್ ಮತ್ತು ಒನ್​ ಪ್ಲಸ್​ ಈ ಹಬ್ಬದ ಋತುವಿನಲ್ಲಿ ಹೆಚ್ಚು ಆದ್ಯತೆಯ ಬ್ರಾಂಡ್​ಗಳಾಗಿವೆ. ಅಕ್ಟೋಬರ್ 7 ರಿಂದ ಹಬ್ಬದ ಸೀಸನ್​ ಮಾರಾಟ ಲೈವ್ ಆಗಿವೆ. ಅಮೆಜಾನ್ ತನ್ನ 'ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023' ಸಂದರ್ಭದಲ್ಲಿ ಎಕೋ, ಫೈರ್ ಟಿವಿ ಮತ್ತು ಕಿಂಡಲ್ ಸಾಧನಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಘೋಷಿಸಿದೆ.

ಇದನ್ನೂ ಓದಿ : ನೆಟ್​ಫ್ಲಿಕ್ಸ್​ನ ವ್ಯವಹಾರ ವಿಸ್ತರಣೆಗೆ ಅಡ್ಡಿಯಾದ ಲೋಕಲ್ ಕಂಟೆಂಟ್​ ಕೊರತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.