ಮುಂಬೈ(ಮಹಾರಾಷ್ಟ್ರ): ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡ ತಿಮಿಂಗಲ ಆಕೃತಿಯ ಏರ್‌ಬಸ್ ಬೆಲುಗಾ ಸರಕು ಸಾಗಣೆ ವಿಮಾನವನ್ನು ಕಂಡು ಜನರು ಅಚ್ಚರಿಗೊಂಡಿದ್ದಾರೆ. ಇಂಧನ ತುಂಬಿಸಿಕೊಳ್ಳಲು ಇಲ್ಲಿ ಇಳಿದ ವಿಮಾನದ ಆಕೃತಿ ಪ್ರಯಾಣಿಕರನ್ನು ಅಚ್ಚರಿಗೆ ದೂಡಿತು.
-
Look who made a pitstop at @CSMIA_Official! The Airbus Beluga Super Transporter made its first appearance at #MumbaiAirport and left us all awestruck. Tell us what you think of its unique design.#GatewayToGoodness #Beluga #Aviation #PlaneSpotting #AviationDaily #Airbus pic.twitter.com/T4W1OCkduG
— CSMIA (@CSMIA_Official) November 22, 2022 " class="align-text-top noRightClick twitterSection" data="
">Look who made a pitstop at @CSMIA_Official! The Airbus Beluga Super Transporter made its first appearance at #MumbaiAirport and left us all awestruck. Tell us what you think of its unique design.#GatewayToGoodness #Beluga #Aviation #PlaneSpotting #AviationDaily #Airbus pic.twitter.com/T4W1OCkduG
— CSMIA (@CSMIA_Official) November 22, 2022Look who made a pitstop at @CSMIA_Official! The Airbus Beluga Super Transporter made its first appearance at #MumbaiAirport and left us all awestruck. Tell us what you think of its unique design.#GatewayToGoodness #Beluga #Aviation #PlaneSpotting #AviationDaily #Airbus pic.twitter.com/T4W1OCkduG
— CSMIA (@CSMIA_Official) November 22, 2022
A300 -600ST ಸೂಪರ್ ಟ್ರಾನ್ಸ್‌ಪೋರ್ಟರ್ ಎಂದು ಕರೆಯಲ್ಪಡುವ ಏರ್‌ಬಸ್ ಬೆಲುಗಾ ದೈತ್ಯ ಗಾತ್ರದ ಸರಕು ಸಾಗಣೆ ವಿಮಾನವಾಗಿದೆ. ಇದನ್ನು 1990 ರ ದಶಕದಿಂದ ಕೈಗಾರಿಕಾ ಏರ್ಲಿಫ್ಟ್ಗಾಗಿ ಇದನ್ನು ಬಳಸುತ್ತದೆ.
ಏರ್‌ಬಸ್ ಬೆಲುಗಾ ವಿಮಾನದ ಮುಂಭಾಗ ತಿಮಿಂಗಿಲದ(ವೇಲ್ಸ್) ಮೂಗಿನ ಆಕಾರ ಹೊಂದಿದೆ. ಇದು ವಿಶ್ವದ ಅತಿದೊಡ್ಡ ಸರಕು ವಿಮಾನಗಳಲ್ಲಿಯೂ ಒಂದಾಗಿದೆ. ಬಾಹ್ಯಾಕಾಶ, ಇಂಧನ, ಮಿಲಿಟರಿ, ಏರೋನಾಟಿಕ್ಸ್ ಒಳಗೊಂಡಂತೆ ವಿವಿಧ ವಲಯಗಳ ಸರಕು ಸಾಗಣೆ ಸೇವೆ ನೀಡುತ್ತದೆ. ಇದರ ಗಾತ್ರ 56 ಮೀಟರ್ ಉದ್ದ ಮತ್ತು 45 ಮೀಟರ್ ಅಗಲವಿದೆ.
ಇದಕ್ಕೂ ಮೊದಲು ಏರ್‌ಬಸ್ ಬೆಲುಗಾ ಸರಕು ವಿಮಾನ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಅಹಮದಾಬಾದ್ನಿಂದ 12.30 ಕ್ಕೆ ಬಂದು ಇಳಿದಿತ್ತು. ಬಳಿಕ ಅದು ಮುಂಬೈಗೆ ಬಂದು ಇಂಧನ ಮರುಪೂರಣಕ್ಕಾಗಿ ಮುಂಬೈ ಛತ್ರಪತಿ ಶಿವಾಜಿ ನಿಲ್ದಾಣಕ್ಕೆ ಆಗಮಿಸಿತ್ತು.
ದೈತ್ಯ ತಿಮಿಂಗಲಾಕಾರದ ವಿಮಾನದ ಚಿತ್ರಗಳನ್ನು ವಿಮಾನ ನಿಲ್ದಾಣದ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಏರ್‌ಬಸ್ ಬೆಲುಗಾ ಮೊದಲ ಬಾರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಇದು ನಮ್ಮೆಲ್ಲರನ್ನೂ ಬೆರಗುಗೊಳಿಸಿತು ಎಂದು ಬರೆಯಲಾಗಿದೆ.
ಓದಿ: ಲೀಟರ್ ನಂದಿನಿ ಹಾಲು, ಮೊಸರಿಗೆ 2 ರೂಪಾಯಿ ಹೆಚ್ಚಳ: ನಾಳೆಯಿಂದಲೇ ಹೊಸ ದರ ಜಾರಿ