ETV Bharat / business

ಶೀಘ್ರವೇ ಟ್ವಿಟರ್​ನಲ್ಲಿ ಬರಲಿದೆ ವಾಯ್ಸ್ ಹಾಗೂ ವಿಡಿಯೋ ಚಾಟ್ ಹೊಸ ಫೀಚರ್​: ಎಲೋನ್ ಮಸ್ಕ್ - ವಿಡಿಯೋ ಚಾಟ್ ಸೌಲಭ್ಯ

ಟಿಟ್ಟರ್​ನಲ್ಲಿ ದೀರ್ಘಾವಧಿ ವಿಡಿಯೋಗಳ ಅಪ್‌ಲೋಡ್ ಮಾಡುವಂತಹ ಫೀಚರ್​ ಅನ್ನು ಈಗಾಗಲೇ ಪರಿಚಯಿಸಲಾಗಿದೆ. ಇದರ ಬೆನ್ನಲ್ಲೆಯಲ್ಲಿ ಸಾಮಾಜಿಕ ಜಾಲತಾಣವಾದ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ವಾಯ್ಸ್ ಮತ್ತು ವಿಡಿಯೋ ಚಾಟ್ ಸೌಲಭ್ಯ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಎಲೋನ್ ಮಸ್ಕ್ ಘೋಷಣೆ ಮಾಡಿದ್ದಾರೆ.

Twitter
ಶೀಘ್ರವೇ ಟ್ವಿಟ್ಟರ್​ನಲ್ಲಿ ಬರಲಿದೆ ವಾಯ್ಸ್ ಹಾಗೂ ವಿಡಿಯೋ ಚಾಟ್ ಹೊಸ ಫೀಚರ್​: ಎಲೋನ್ ಮಸ್ಕ್
author img

By

Published : May 19, 2023, 6:31 PM IST

ನವದೆಹಲಿ: ಪಾವತಿಸಿದ ಬ್ಲೂಟಿಕ್​ ಚಂದಾದಾರರಿಗೆ ದೀರ್ಘಾವಧಿಯ ವಿಡಿಯೋಗಳನ್ನು ಪ್ರಾರಂಭಿಸಿದ ನಂತರ, ಟ್ವಿಟರ್ ಈಗ WeChat ನಂತಹ ಎಲ್ಲದಕ್ಕೂ ಆ್ಯಪ್ ಮಾಡಲು ಯೋಜಿಸಿದ್ದಾರೆ ಎಲೋನ್ ಮಸ್ಕ್. ಟ್ವಿಟರ್​ ಪ್ಲಾಟ್‌ಫಾರ್ಮ್‌ನಲ್ಲಿ ವಾಯ್ಸ್​ ಮತ್ತು ವಿಡಿಯೋ ಚಾಟ್ ಸೌಲಭ್ಯವನ್ನು ಶೀಘ್ರದಲ್ಲೇ ಬರಲಿದೆ ಎಂದು ಅವರು ಶುಕ್ರವಾರ ಘೋಷಿಸಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳ ಪ್ರಕಟಣೆಯ ನಂತರ, "ಈ ವೇದಿಕೆಯು ನಿಮಗೆ ಹೆಚ್ಚು ಸಂತೋಷ ಮತ್ತು ವಿವರಣೆ ಲಭಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

  • I hope this platform increasingly brings you joy & elucidation

    — Elon Musk (@elonmusk) May 18, 2023 " class="align-text-top noRightClick twitterSection" data=" ">

ಟ್ವೀಟ್ ಮಾಡಿ ಹೊಸ ಫೀಚರ್​ ಘೋಷಿಸಿದ ಮಸ್ಕ್: ಟೆಕ್ ಬಿಲಿಯನೇರ್ ಈ ತಿಂಗಳ ಆರಂಭದಲ್ಲಿ ಎನ್‌ಕ್ರಿಪ್ಟ್ ಮಾಡಿದ ಡಿಎಂಗಳಂತಹ ಇತರ ವೈಶಿಷ್ಟ್ಯಗಳೊಂದಿಗೆ ವಾಯ್ಸ್ ಮತ್ತು ವಿಡಿಯೋ ಚಾಟ್ ವೈಶಿಷ್ಟ್ಯವನ್ನು ಘೋಷಿಸಿದ್ದರು. "ಶೀಘ್ರದಲ್ಲೇ ಟಿಟ್ಟರ್ ಪ್ಲಾಟ್‌ಫಾರ್ಮ್‌ನಲ್ಲಿರುವ ನಿಮ್ಮ ಖಾತೆಯಿಂದ ಯಾರಿಗಾದರೂ ವಾಯ್ಸ್​ ಮತ್ತು ವಿಡಿಯೋ ಚಾಟ್ ಮಾಡಬಹುದು. ಆದ್ದರಿಂದ ನೀವು ನಿಮ್ಮ ಫೋನ್ ಸಂಖ್ಯೆಯನ್ನು ನೀಡದೆಯೇ ಜಗತ್ತಿನಲ್ಲಿರುವ ಜನರೊಂದಿಗೆ ಮಾತನಾಡಬಹುದು" ಎಂದು ಮಸ್ಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಗೂಗಲ್ ಸಿಇಒ ಸುಂದರ್ ಪಿಚೈ ಪೂರ್ವಿಕರ ಮನೆ ಮಾರಾಟ: ತಮಿಳು ನಟನಿಂದ ಖರೀದಿ

ಎರಡು ಗಂಟೆಗಳ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಅವಕಾಶ: ಈಗ ಪಾವತಿಸಿದ ಬಳಕೆದಾರರಿಗಾಗಿ ಟ್ವಿಟರ್ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಿತಿಯನ್ನು 60 ನಿಮಿಷಗಳಿಂದ ಎರಡು ಗಂಟೆಗಳವರೆಗೆ ವಿಸ್ತರಿಸಿದೆ. ಟ್ವಿಟರ್ ಬ್ಲೂಟಿಕ್​ ಚಂದಾದಾರರು ಈಗ ಎರಡು ಗಂಟೆಗಳ ವಿಡಿಯೋಗಳನ್ನು (8GB) ಅಪ್ಲೋಡ್​ ಮಾಡಬಹುದು ಎಂದು ಮಸ್ಕ್ ಗುರುವಾರ ಟ್ವೀಟ್ ಮಾಡಿದ್ದಾರೆ.

  • Twitter Blue Verified subscribers can now upload 2 hour videos (8GB)!

ಈ ಹಿಂದೆ, ದೀರ್ಘಾವಧಿಯ ವಿಡಿಯೋ ಅಪ್ಲೋಡ್​ ಮಾಡುವುದು ವೆಬ್ ಮೂಲಕ ಮಾತ್ರ ಸಾಧ್ಯವಿತ್ತು. ಆದರೆ, ಬಳಕೆದಾರರು ಈಗ ಐಒಎಸ್​ ಅಪ್ಲಿಕೇಶನ್ ಮೂಲಕವೂ ಅಪ್ಲೋಡ್​ ಮಾಡಬಹುದು. ಗರಿಷ್ಠ ಅಪ್ಲೋಡ್​ ಗುಣಮಟ್ಟವು 1080p ಇದೆ. ಇದಲ್ಲದೇ ಟ್ವಿಟರ್​​ ಪ್ರಕಾರ, ಗರಿಷ್ಠ ದೀರ್ಘಾವಧಿಯ ಎಲ್ಲ ವಿಡಿಯೋಗಳು ಸಹ ಬಳಕೆದಾರರು ಅಪ್ಲೋಡ್​ ಮಾಡಬಹುದು. ವಿಡಿಯೋಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ಟ್ವಿಟರ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ದೀರ್ಘಾವಧಿ ವಿಡಿಯೋ ಅಪ್ಲೋಡ್​ ಮಾಡುವ ಫೀಚರ್​ ಅನ್ನು ಪರಿಚಯಿಸಿತ್ತು. ಇದು ಇತ್ತೀಚೆಗೆ ವೆಬ್‌ಗೆ ಹೊಸ ಪ್ಲೇಬ್ಯಾಕ್ ವೇಗದ ನಿಯಂತ್ರಣಗಳನ್ನು ಸೇರಿಸಿತ್ತು.

ಇದನ್ನೂ ಓದಿ: 'ನಿಯಂತ್ರಕ ವೈಫಲ್ಯ ಆಗಿಲ್ಲ' ಅದಾನಿ-ಹಿಂಡೆನ್​ಬರ್ಗ್ ವಿವಾದದ ಬಗ್ಗೆ ಸಮಿತಿ ವರದಿ

ಟ್ವಿಟರ್‌ನ ಹೊಸ ಸಿಇಒ ಆಗಲಿದ್ದಾರೆ ಲಿಂಡಾ ಯಾಕರಿನೊ: ಎನ್​ಬಿಸಿ ಯುನಿವರ್ಸಲ್‌ನ ಗ್ಲೋಬಲ್ ಅಡ್ವರ್ಟೈಸಿಂಗ್ ಮತ್ತು ಪಾಲುದಾರಿಕೆಗಳ ಅಧ್ಯಕ್ಷರಾದ ಲಿಂಡಾ ಯಾಕರಿನೊ ಅವರು ಟ್ವಿಟರ್‌ನ ಹೊಸ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮಸ್ಕ್ ದೃಢಪಡಿಸಿದ್ದಾರೆ. ಅವರ ಪಾತ್ರವು ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಟಿಒ ಆಗಿ ಪರಿವರ್ತನೆಯಾಗುತ್ತದೆ. ಉತ್ಪನ್ನ, ಸಾಫ್ಟ್‌ವೇರ್ ಮತ್ತು ಸಿಸ್ಟಮ್ ಕಾರ್ಯಾಚರಣೆಗಳ ಮೇಲ್ವಿಚಾರಣೆ ವಹಿಸಿಕೊಳ್ಳುವರು.

ಇದನ್ನೂ ಓದಿ: ಮೈಕ್ರೋಸಾಫ್ಟ್ ಕಂಪನಿಯಿಂದ ನಮ್ಮ ಡೇಟಾ ದುರುಪಯೋಗ: ಟ್ವಿಟರ್​ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.