ಮುಂಬೈ, ಮಹಾರಾಷ್ಟ್ರ: ಹೊಸ ಆವೃತಿಯ ಕಾಂಪ್ಯಾಕ್ಟ್ SUVಗಳು ರೆಡಿ, ಕಾರು ಪ್ರಿಯರಿಗೆ ಇದು ಒಳ್ಳೆಯ ಸುದ್ದಿ. ಕೆಲವೇ ತಿಂಗಳುಗಳಲ್ಲಿ, ಪ್ರಮುಖ ಆಟೋಮೊಬೈಲ್ ಕಂಪನಿಗಳಾದ ಟಾಟಾ, ಮಹೀಂದ್ರಾ, ಕಿಯಾ ಮತ್ತು ಟೊಯೊಟಾದ ಹೊಸ ಕಾರುಗಳು ಮಾರುಕಟ್ಟೆಗೆ ಬರಲಿವೆ. ಆಧುನಿಕ ತಂತ್ರದಿಂದ ವಿನ್ಯಾಸಗೊಂಡಿರುವ ಈ ಕಾರುಗಳು ಇನ್ನು ಆರರಿಂದ ಒಂಬತ್ತು ತಿಂಗಳಲ್ಲಿ ಬಿಡುಗಡೆಯಾಗಲಿವೆ.
ಟಾಟಾ ಪಂಚ್ ಸಿಎನ್‌ಜಿ (Tata Punch CNG): ಟಾಟಾ ಮೋಟಾರ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಹ್ಯುಂಡೈ ಎಕ್ಸ್‌ಟರ್ ಸಿಎನ್‌ಜಿ ಮಾದರಿಯ ಜೊತೆಗೆ ಟಾಟಾ ಪಂಚ್‌ನ ಸಿಎನ್‌ಜಿ ಆವೃತ್ತಿಯನ್ನು ಈ ತಿಂಗಳ ಆರಂಭದಲ್ಲಿ ಪರಿಚಯಿಸಲಿದೆ. ಪಂಚ್ ಸಿಎನ್‌ಜಿಯನ್ನು ಈ ವರ್ಷದ ಆರಂಭದಲ್ಲಿ ಗ್ಲೋಬಲ್ ಆಟೋ ಎಕ್ಸ್‌ಪೋದಲ್ಲಿ ಸಂಘಟಕರು ಬಿಡುಗಡೆ ಮಾಡಿದರು. ಇದು Altroz CNG ಯಂತೆಯೇ ಅವಳಿ-ಸಿಲಿಂಡರ್ ತಂತ್ರಜ್ಞಾನವನ್ನು ಹೊಂದಿದೆ. ಇದರಲ್ಲಿ 1.2L NA ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಇದನ್ನು ಸಿಎನ್‌ಜಿ ಮೋಡ್‌ನಲ್ಲಿ 73.5 ಪಿಎಸ್‌ನಲ್ಲಿ ಚಲಾಯಿಸುವಂತೆ ಮಾಡಲಾಗುತ್ತಿದೆ.
ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ (Tata Nexon Facelift) : ಶೀಘ್ರದಲ್ಲೇ ಬರಲಿರುವ ಈ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಅನ್ನು ಕರ್ವ್ವ್ ಪರಿಕಲ್ಪನೆಯ ಸ್ಫೂರ್ತಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಆರು ವರ್ಷಗಳ ಜೀವಿತಾವಧಿಯಲ್ಲಿ ಕಾಂಪ್ಯಾಕ್ಟ್ SUV ಗಾಗಿ ಇದು ಎರಡನೇ ಪ್ರಮುಖ ಅಪ್ಡೇಟ್ ಆಗಿದೆ. ಹೊರಭಾಗದ ಜೊತೆಗೆ ಇಂಟೀರಿಯರ್ ಕೂಡ ಸಂಪೂರ್ಣವಾಗಿ ಮರು ವಿನ್ಯಾಸ ಮಾಡಲಾಗುತ್ತಿದೆ. ಹೊಸ ಸ್ಟೀರಿಂಗ್ ವೀಲ್, ಇಲ್ಯುಮಿನೇಟೆಡ್ ಲೋಗೋ, ಟಚ್ ಆಧಾರಿತ ಕ್ಲೈಮೇಟ್ ಕಂಟ್ರೋಲ್‌ಗಳು, ದೊಡ್ಡ ಟಚ್‌ಸ್ಕ್ರೀನ್ 360 ಡಿಗ್ರಿ ಕ್ಯಾಮೆರಾ ಸಿಸ್ಟಮ್ ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 1.2 ಎಲ್ ಡಿಐ ಟರ್ಬೊ ಪೆಟ್ರೋಲ್ ಎಂಜಿನ್ ಇದರಲ್ಲಿ ಅಳವಡಿಸಲಾಗುವುದು.
ಕಿಯಾ ಸೋನೆಟ್ ಫೇಸ್‌ಲಿಫ್ಟ್ (Kia Sonet Facelift): ಈ ಮಾದರಿಯು ಈ ವರ್ಷದ ಅಂತ್ಯದ ಮೊದಲು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಆದರೆ 2024ರ ಆರಂಭದಲ್ಲಿ ಭಾರತಕ್ಕೆ ಬರುವ ಸಾಧ್ಯತೆ ಇದೆ. ಇಂಟೀರಿಯರ್ ಜೊತೆಗೆ ಮೆಕ್ಯಾನಿಕಲ್ ವಿಷಯದಲ್ಲಿ ಹಲವು ಹೊಸ ಅಪ್ಡೇಟ್ಗಳನ್ನು ಈ ಮಾದರಿಯಲ್ಲಿ ಬಳಸಲಾಗುವುದು. ಭವಿಷ್ಯದ ಸುಧಾರಿತ ತಂತ್ರಜ್ಞಾನಗಳನ್ನು ಸಹ ಇದರಲ್ಲಿ ಬಳಸಲಾಗುವುದು.
ಟೊಯೊಟಾ ಕಾಂಪ್ಯಾಕ್ಟ್ (Toyota Compact SUV): ಟೊಯೊಟಾ ಟೈಸರ್ ಮಾರುತಿ ಸುಜುಕಿ ಫ್ರಾಂಕ್ಸ್‌ನ ಅಪ್ಡೇಟ್ ಆವೃತ್ತಿಯಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಟೊಯೊಟಾ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಇಂಟೀರಿಯರ್ ಜೊತೆಗೆ ಹೊರಭಾಗವನ್ನು ಹೊಸ ಬದಲಾವಣೆಗಳೊಂದಿಗೆ ಮಾಡಲಾಗಿದೆ. ಈ ಮಾದರಿಯಲ್ಲಿ 1.2L NA K-ಸರಣಿಯ ಪೆಟ್ರೋಲ್ ಮತ್ತು 1.0L ಟ್ರಿಪಲ್-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‌ಗಳನ್ನು ಬಳಸಲಾಗುವುದು.
ಮಹೀಂದ್ರಾ XUV300 ಫೇಸ್‌ಲಿಫ್ಟ್ (Mahindra XUV300 Facelift): ಮಹೀಂದ್ರಾ ಕಂಪನಿಯು ಮಹೀಂದ್ರಾ XUV300 ನ ಮುಂದುವರಿಕೆಯಾಗಿ ಮಹೀಂದ್ರಾ XUV300 ಫೇಸ್‌ಲಿಫ್ಟ್ ಅನ್ನು ತರುತ್ತಿದೆ. ಮುಂದಿನ ವರ್ಷ ಜೂನ್ ವೇಳೆಗೆ ಇದು ಲಭ್ಯವಾಗುವ ಸಾಧ್ಯತೆ ಇದೆ. ಇದನ್ನು XUV700 ಆಧರಿಸಿ ವಿನ್ಯಾಸಗೊಳಿಸಲಾಗುತ್ತಿದೆ. ಈಗಿರುವ 1.2L ಟರ್ಬೊ ಪೆಟ್ರೋಲ್ ಮತ್ತು 1.5L ಡೀಸೆಲ್ ಎಂಜಿನ್‌ಗಳನ್ನು ಇದರಲ್ಲಿ ಬಳಸಲಾಗುವುದು. ಒಳಾಂಗಣ ವಿನ್ಯಾಸದಲ್ಲಿಯೂ ಪ್ರಮುಖ ಬದಲಾವಣೆಗಳನ್ನು ಮಾಡಲಾಗುವುದು.