ಗುವಾಹಟಿ: ಅಸ್ಸೋಂನ ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ (ಜಿಟಿಎಸಿ) 1 ಕೆ.ಜಿ. ಟೀ ದಾಖಲೆಯ ಪ್ರಮಾಣದ 50,000 ರೂ.ಗೆ ಹರಾಜಾಗಿದ್ದು, ದಾಖಲೆ ನಿರ್ಮಿಸಿದೆ.
ಪ್ಯಾನ್ ಇಂಡಿಯಾ ಹರಾಜು ವ್ಯವಸ್ಥೆಯಡಿ ಮನೋಹರ್ ಗೋಲ್ಡ್ ಟೀ ಎಸ್ಟೇಟ್ನ ಕೆ.ಜಿ. ಟೀ ಬ್ಯಾಗ್ 50 ಸಾವಿರ ರೂ.ಗೆ ಮಾರಾಟ ಆಗಿದೆ. ಇದು ಜಗತ್ತಿನ ಯಾವುದೇ ಹರಾಜು ಕೇಂದ್ರದಲ್ಲಿ ಮಾರಾಟವಾಗದ ದಾಖಲೆಯನ್ನು ಜಿಟಿಎಸಿನಲ್ಲಿ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಹರಾಜಿನಲ್ಲಿ ದಾಖಲೆಯ ಬೆಲೆಗಳು ಕಂಡುಬರುತ್ತಿವೆ. ಉತ್ತಮ ಉತ್ಪನ್ನದ ಟೀಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಗುಣಮಟ್ಟದ ಟೀಗೆ ಯಾವುದೇ ರೀತಿಯ ಬೆಲೆ ಅಡ್ಡಿಯಾಗುವುದಿಲ್ಲ ಎಂದು ಅಧಿಕಾರಿ ಹೇಳಿದರು.
ಮನಹೋಹರ್ ಗೋಲ್ಡ್ ಟೀ ಎಸ್ಟೇಟ್ ಮುಖ್ಯಸ್ಥ ರಾಜನ್ ಲೋಹಿಯಾ ಮಾತನಾಡಿ, ಸಣ್ಣ ಮೊಗ್ಗುಗಳಿಂದ ತಯಾರಿಸಲಾಗುವ ಗೋಲ್ಡ್ ಟೀ ಬ್ರ್ಯಾಂಡ್ಗೆ ವರ್ಷದಿಂದ ವರ್ಷಕ್ಕೆ ಯಥೇಚ್ಛ ಬೇಡಿಕೆ ಕಂಡುಬರುತ್ತಿದೆ. ಮೇ ಮತ್ತು ಜೂನ್ ಋತುವಿನ ಮುಂಜಾನೆಯಲ್ಲಿ ಸಣ್ಣ ಮೊಗ್ಗಗಳಿಂದ ಇದನ್ನು ಉತ್ಪಾದಿಸಲಾಗುತ್ತದೆ. ಪ್ರತಿಕೂಲ ಹವಾಮಾನದಿಂದಾಗಿ ಈ ವರ್ಷ ಎಸ್ಟೇಟ್ನಲ್ಲಿ ಕೇವಲ ಐದು ಕೆ.ಜಿ.ಯಷ್ಟು ವಿಶೇಷ ಟೀ ಬೆಳೆಯಲಾಗಿದೆ ಎಂದರು.
ಕಳೆದ ವರ್ಷ ಒಂದು ಕೆ.ಜಿ. ಮನೋಹರ್ ಗೋಲ್ಡನ್ ಟೀ ₹ 39,001ಗೆ ಹರಾಜಾಗಿತ್ತು. ಅರುಣಾಚಲ ಪ್ರದೇಶದ ಡೊನಿ ಪೊಲೊ ಟೀ ಎಸ್ಟೇಟನ್ನ ಗೋಲ್ಡನ್ ಸೂಜಿ ₹ 40,000 ಮಾರಾಟ ಆಗುವ ಮೂಲಕ ಈ ಹಿಂದಿನ ದಾಖಲೆ ಅಳಿಸಿಹಾಕಿತ್ತು. ಈಗ ಅದರ ದಾಖಲೆಯನ್ನು ಮನೋಹರ್ ಗೋಲ್ಡ್ ಟೀಯೇ ಮುರಿದಿದೆ.