ETV Bharat / business

ಅಕ್ರಮ ಸಾರಾಯಿ ಅಂಗಡಿ, ಮದ್ಯ ಪ್ರಿಯರಿಗೆ ಶಾಕಿಂಗ್​ ನ್ಯೂಸ್​: ರಾಜ್ಯಕ್ಕೂ ಮಾದರಿಯಾದ ಪ್ಲಾನ್​..!

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಚಿವ ಸಂಪುಟ ಸಭೆಯಲ್ಲಿ ಮದ್ಯದ ಪೂರೈಕೆಯ ಸರಪಳಿ ಕಾರ್ಯವಿಧಾನದ ಬಗ್ಗೆ ತೀವ್ರ ನಿಗಾ ವಹಿಸಲು ಜಿಪಿಎಸ್ ತಂತ್ರಜ್ಞಾನ ಬಳಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಾಂದರ್ಭಿಕ ಚಿತ್ರ
author img

By

Published : Sep 24, 2019, 9:52 PM IST

ಲಖನೌ: ಅಕ್ರಮ ಮದ್ಯ ಮಾರಾಟ ಮತ್ತು ತಯಾರಿಕೆ ತಡೆಗಟ್ಟಲು ಪರವಾನಗಿ ಪಡೆದ ಮದ್ಯದ ಪೂರೈಕೆಯ ಸರಪಳಿ ಕಾರ್ಯವಿಧಾನದ ಬಗ್ಗೆ ತೀವ್ರ ನಿಗಾ ವಹಿಸಲು ಜಿಪಿಎಸ್ ತಂತ್ರಜ್ಞಾನ ಬಳಸುವುದಾಗಿ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮದ್ಯದ ಪೂರೈಕೆ ಸರಪಳಿ ಕಾರ್ಯವಿಧಾನದ ಬಗ್ಗೆ ತೀವ್ರ ನಿಗಾ ವಹಿಸಲು ಜಿಪಿಎಸ್ ತಂತ್ರಜ್ಞಾನ ಬಳಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪ್ರತಿ ಬಾಟಲಿಗೆ ವಿಶಿಷ್ಟವಾದ ಬಾರ್‌ಕೋಡ್ ನಮೋದಿಸುವ ಮೂಲಕ ರಾಜ್ಯ ಸರ್ಕಾರವು ಮದ್ಯದ ಉತ್ಪಾದನೆ ಮತ್ತು ಮಾರಾಟದ ಮೇಲ್ವಿಚಾರಣೆ ಮಾಡಲಿದೆ. ಈ ಕ್ರಮದಿಂದ ಅಕ್ರಮ ಮತ್ತು ಕಳ್ಳಸಾಗಣೆ ಮಾಡುವ ಮದ್ಯ ಮಾರಾಟವನ್ನು ತಡೆಯಲಾಗುವುದು. ಕಚ್ಚಾ ವಸ್ತುಗಳನ್ನು ಉತ್ಪಾದನಾ ಘಟಕಕ್ಕೆ ಪೂರೈಸುವವರನ್ನು ಮತ್ತು ಮಾರಾಟಗಾರನ್ನು ಜಿಪಿಎಸ್ ಬಳಸಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಉತ್ತರ ಪ್ರದೇಶದ ಸಚಿವ ಶ್ರೀಕಾಂತ್ ಶರ್ಮಾ ಸುದ್ದಿಗಾರರಿಗೆ ಮಾಹಿತಿ ನೀಡಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.