ETV Bharat / business

ಡಾ. ಸಿಂಗ್ ಕಾಲದ ಪೆಟ್ರೋಲ್​, ಡಿಸೇಲ್​ ತೆರಿಗೆ ಮೋದಿ ಕಾಲದ 2021ಕ್ಕೆ ಶೇ 459% ಏರಿಕೆ: LPG ರೇಟ್ ಡಬಲ್! - ಇಂಧನ ತೆರಿಗೆ ಸಂಗ್ರಹಕ್ಕೆ ಧರ್ಮೇಂದ್ರ ಪ್ರಧಾನ್ ಪ್ರತಿಕ್ರಿಯೆ

2014ರ ಮಾರ್ಚ್ 1ರಂದು ದೇಶೀಯ ಅನಿಲದ ಚಿಲ್ಲರೆ ಮಾರಾಟ 14.2 ಕೆಜಿ ಸಿಲಿಂಡರ್‌ ಬೆಲೆ 410.5 ರೂ. ಆಗಿತ್ತು. ಈ ತಿಂಗಳು ಅದೇ ಸಿಲಿಂಡರ್‌ಗೆ 819 ರೂ.ಗೆ ತಲುಪಿದೆ. 'ಕಳೆದ ಕೆಲವು ತಿಂಗಳುಗಳಲ್ಲಿ ದೇಶೀಯ ಸಬ್ಸಿಡಿ ಎಲ್‌ಪಿಜಿ ಬೆಲೆಯನ್ನು ಹೆಚ್ಚಿಸಲಾಗಿದೆ' ಎಂದು ಕೇಂದ್ರ ಸಚಿವ ಪ್ರಧಾನ್ ಹೇಳಿದ್ದಾರೆ. 2020ರ ಡಿಸೆಂಬರ್‌ನಲ್ಲಿ ಇದರ ಬೆಲೆ ಪ್ರತಿ ಸಿಲಿಂಡರ್‌ಗೆ 594 ರೂ. ಈಗ ಇದರ ಬೆಲೆ 819 ರೂ. ಆಗಿದೆ.

Tax collection
Tax collection
author img

By

Published : Mar 9, 2021, 6:26 PM IST

ನವದೆಹಲಿ: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರದ ಮೇಲೆ ತೆರಿಗೆ ಸಂಗ್ರಹವು ಏಳು ವರ್ಷಗಳಲ್ಲಿ ಶೇ 459ರಷ್ಟು ಹೆಚ್ಚಾಗಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

ಇದೇ ಅವಧಿಯಲ್ಲಿ ಎಲ್‌ಪಿಜಿ ಬೆಲೆ ಪ್ರತಿ ಸಿಲಿಂಡರ್‌ಗೆ 819 ರೂ.ಗೆ ಏರಿದೆ. ದೇಶೀಯ ಅಡುಗೆ ಅನಿಲದ ಬೆಲೆ, ಎಲ್‌ಪಿಜಿ ಕಳೆದ ಏಳು ವರ್ಷಗಳಲ್ಲಿ ಪ್ರತಿ ಸಿಲಿಂಡರ್‌ಗೆ 819 ರೂ.ಗೆ ಏರಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳವು ಸಂಗ್ರಹದ ಶೇ 459ರಷ್ಟು ಜಿಗಿತವಾಗಿದೆ.

2014ರ ಮಾರ್ಚ್ 1ರಂದು ದೇಶೀಯ ಅನಿಲದ ಚಿಲ್ಲರೆ ಮಾರಾಟ 14.2 ಕೆಜಿ ಸಿಲಿಂಡರ್‌ ಬೆಲೆ 410.5 ರೂ. ಆಗಿತ್ತು. ಈ ತಿಂಗಳು ಅದೇ ಸಿಲಿಂಡರ್‌ಗೆ 819 ರೂ.ಗೆ ತಲುಪಿದೆ. 'ಕಳೆದ ಕೆಲವು ತಿಂಗಳುಗಳಲ್ಲಿ ದೇಶೀಯ ಸಬ್ಸಿಡಿ ಎಲ್‌ಪಿಜಿಯ ಬೆಲೆಯನ್ನು ಹೆಚ್ಚಿಸಲಾಗಿದೆ' ಎಂದು ಪ್ರಧಾನ್ ಹೇಳಿದ್ದಾರೆ. 2020ರ ಡಿಸೆಂಬರ್‌ನಲ್ಲಿ ಇದರ ಬೆಲೆ ಪ್ರತಿ ಸಿಲಿಂಡರ್‌ಗೆ 594 ರೂ. ಈಗ ಇದರ ಬೆಲೆ 819 ರೂ. ಆಗಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ ಬಡವರಿಗೆ ಮಾರಾಟ ಮಾಡುವ ಸೀಮೆಎಣ್ಣೆ 2014ರ ಮಾರ್ಚ್‌ನಲ್ಲಿ ಪ್ರತಿ ಲೀಟರ್‌ಗೆ 14.96 ರೂ.ಯಿಂದ ಈ ತಿಂಗಳು 35.35 ರೂ.ಗೆ ಏರಿದೆ.

ಇಂಧನ ತೆರಿಗೆ ಸಂಗ್ರಹದಲ್ಲಿ ತೀವ್ರ ಹೆಚ್ಚಳ

ಭಾರತೀಯ ನಾಗರಿಕರಿಗೆ ಇಂಧನ ಬೆಲೆಗಳು ಭಾರಿ ಹೊರೆಯಾಗಿ ಪರಿಣಮಿಸಿರುವ ಸಮಯದಲ್ಲಿ ಧರ್ಮೇಂದ್ರ ಪ್ರಧಾನ್ ಅವರ ಹೇಳಿಕೆಯು, ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸಂಗ್ರಹಿಸಿದ ತೆರಿಗೆಯಲ್ಲಿ ಶೇ 459ರಷ್ಟು ಏರಿಕೆಯಾಗಿದೆ ಎಂಬುದು ಸೂಚಿಸುತ್ತದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೇಶಾದ್ಯಂತ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಚಿಲ್ಲರೆ ಮಾರಾಟ ದರ ಮಾಡುತ್ತಿವೆ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ 91.17 ರೂ. ಆಗಿದೆ. ಅದೇ ಪ್ರಮಾಣದ ಡೀಸೆಲ್ ಬೆಲೆ 81.47 ರೂ. ಆಗಿದೆ. ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದ ಇತರ ಕೆಲವು ಪ್ರಮುಖ ನಗರಗಳಲ್ಲಿ ಇದು ಹೆಚ್ಚಾಗಿದೆ.

ಇದನ್ನೂ ಓದಿ: ಅಮೆರಿಕ ಕನಸಿನ H-1B ವೀಸಾ ಅರ್ಜಿ ಸಲ್ಲಿಕೆ ಶುರು: ನೀವು ತಿಳಿಯಬೇಕಾದ ಸಂಗತಿಗಳಿವು..

ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್​ನ ಚಿಲ್ಲರೆ ಬೆಲೆಯ ಬಹುಪಾಲು ತೆರಿಗೆ ಹೊಂದಿದೆ. ಎರಡು ಇಂಧನಗಳ ಮೇಲೆ ಸಂಗ್ರಹಿಸಿದ ತೆರಿಗೆ 2013ರಲ್ಲಿ 52,537 ಕೋಟಿ ರೂ. ಆಗಿದ್ದರೇ 2019-20ರಲ್ಲಿ 2.13 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದರು.

ಪ್ರಸಕ್ತ ಹಣಕಾಸು ವರ್ಷದ ಮೊದಲ 11 ತಿಂಗಳಲ್ಲಿ 2.94 ಲಕ್ಷ ಕೋಟಿ ರೂ.ಗೆ ಏರಿದೆ. ವಿಶ್ವದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಭಾರತ ಅತಿ ಹೆಚ್ಚು ತೆರಿಗೆ ವಿಧಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಪ್ರಸ್ತುತ ಸರ್ಕಾರವು ಪೆಟ್ರೋಲ್‌ಗೆ ಪ್ರತಿ ಲೀಟರ್ ಮೇಲೆ ಅಬಕಾರಿ ಸುಂಕ 32.90 ರೂ. ಮತ್ತು ಡೀಸೆಲ್‌ಗೆ 31.80 ರೂ. ವಿಧಿಸುತ್ತಿದೆ. 2018ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 17.98 ರೂ. ಮತ್ತು ಡೀಸೆಲ್ ಮೇಲೆ 13.83 ರೂ.ಯಷ್ಟಿತ್ತು.

ಪೆಟ್ರೋಲ್, ಡೀಸೆಲ್, ಎಟಿಎಫ್, ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲದಿಂದ ಕೇಂದ್ರ ಸರ್ಕಾರದ ಒಟ್ಟು ಅಬಕಾರಿ ಸುಂಕ ಸಂಗ್ರಹವು 2016-17ರಲ್ಲಿ 2.37 ಲಕ್ಷ ಕೋಟಿ ರೂ.ಗಳಿಂದ 2020-21ರ ಏಪ್ರಿಲ್-ಜನವರಿ ಅವಧಿಯಲ್ಲಿ 3.01 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಸಚಿವರು ಹೇಳಿದ್ದಾರೆ.

ಕಡಿಮೆ ಜಾಗತಿಕ ತೈಲ ಬೆಲೆಗಳ ಲಾಭ ಪಡೆಯಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 2014ರ ನವೆಂಬರ್ ಮತ್ತು 2016ರ ಜನವರಿ ನಡುವೆ ಒಂಬತ್ತು ಸಂದರ್ಭಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಆ 15 ತಿಂಗಳಲ್ಲಿ ಪೆಟ್ರೋಲ್‌ನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 11.77 ರೂ. ಮತ್ತು ಡೀಸೆಲ್‌ ಮೇಲೆ ಪ್ರತಿ ಲೀಟರ್‌ಗೆ 13.47 ರೂ. ವಿಧಿಸಿತ್ತು. ಸರ್ಕಾರವು ಎರಡೂ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಇದುವರೆಗೂ ಯಾವುದೇ ಉದಾಹರಣೆಗಳಿಲ್ಲ.

2017ರ ಅಕ್ಟೋಬರ್‌ನಲ್ಲಿ ಸರ್ಕಾರ ಅಬಕಾರಿ ಸುಂಕವನ್ನು 2 ರೂ. ಮತ್ತು ಒಂದು ವರ್ಷದ ನಂತರ 1.50 ರೂ., 2019ರ ಜುಲೈನಲ್ಲಿ 2 ರೂ. ಮತ್ತೆ 2020ರ ಮಾರ್ಚ್‌ನಲ್ಲಿ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿತ್ತು. ಇದರ ನಂತರ 2020ರ ಮೇ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಬಕಾರಿ ಸುಂಕದ ಮತ್ತೊಂದು ತೀವ್ರ ಏರಿಕೆ ಕಂಡುಬಂದಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಪ್ರತಿ ಲೀಟರ್​ಗೆ 10 ರೂ. ಮತ್ತು ಡೀಸೆಲ್​ಗೆ 13 ರೂ. ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.