ನವದೆಹಲಿ: ಕೋವಿಡ್-19 ಲಸಿಕೆ ಬೆಲೆ ನೀತಿ ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದ್ದು, ಇದು ಸಾರ್ವಜನಿಕ ಆರೋಗ್ಯದ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಹೇಳಿದೆ.
ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ತಯಾರಕರು ಎರಡು ವಿಭಿನ್ನ ಬೆಲೆಗಳನ್ನು ಸೂಚಿಸಿದ್ದಾರೆ. ಕೇಂದ್ರಕ್ಕೆ ಅನ್ವಯವಾಗುವ ಕಡಿಮೆ ಬೆಲೆ ಮತ್ತು ರಾಜ್ಯ ಸರ್ಕಾರಗಳು ಖರೀದಿಸಿದ ಪ್ರಮಾಣಗಳಿಗೆ ಅನ್ವಯವಾಗುವ ಹೆಚ್ಚಿನ ಬೆಲೆ. ಈ ತಾರತಮ್ಯದ ನೀತಿ ಮರುಪರಿಶೀಲನೆ ಮಾಡುವಂತೆ ಸೂಚಿಸಿದೆ.
ಸ್ಪರ್ಧೆಯನ್ನು ಉತ್ತೇಜಿಸುವ ಮತ್ತು ಹೊಸ ಲಸಿಕೆ ತಯಾರಕರ ಜತೆ ರಾಜ್ಯ ಸರ್ಕಾರಗಳು ಮಾತುಕತೆ ನಡೆಸಬೇಕು. ಹೆಚ್ಚಿನ ಬೆಲೆ ನಿಗದಿಯು 18 ರಿಂದ 44 ವರ್ಷದೊಳಗಿನವರ ಮೇಲೆ ಗಂಭೀರ ಹಾನಿಯಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
18ರಿಂ 45 ವಯಸ್ಸಿನ ಒಳಗಿನ ಸಾಮಾಜಿಕ ಸ್ತರದಲ್ಲಿ ಬಹು ಜನರು ಬರುತ್ತಾರೆ. ಸಾಮಾಜಿಕ ವ್ಯವಸ್ಥೆಯ ಕೊನೆಯ ಅಂಚಿನ ವ್ಯಕ್ತಿಗಳನ್ನು ಸಹ ಒಳಗೊಂಡಿದೆ. ಅವರು ಪಾವತಿಸುವ ಸಾಮರ್ಥ್ಯ ಹೊಂದಿಲ್ಲದಿರಬಹುದು. ಆರ್ಥಿಕವಾಗಿ ದುರ್ಬಲವಾಗಿರುವ ಇಂಥವರಿಗೆ ಲಸಿಕೆ ಲಭ್ಯವಾಗುವಂತೆ ಮಾಡುವುದು ರಾಜ್ಯಗಳ ಕರ್ತವ್ಯವಾಗಿರುತ್ತದೆ ಎಂದು ನ್ಯಾಯಪೀಠ ಗಮನ ಸೆಳೆಯಿತು.
ಅಗತ್ಯವಾದ ಲಸಿಕೆಗಳು ಅವರಿಗೆ ಲಭ್ಯವಾಗುತ್ತದೆಯೋ ಇಲ್ಲವೋ ಎಂಬುದನ್ನು ಪ್ರತಿ ರಾಜ್ಯ ಸರ್ಕಾರವು ತನ್ನದೇ ಆದ ಹಣಕಾಸಿನ ಆಧಾರದ ಮೇಲೆ, ಲಸಿಕೆ ಉಚಿತವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ರಾಷ್ಟ್ರದಾದ್ಯಂತ ಅಸಮಾನತೆ ಉಂಟುಮಾಡದಂತೆ ನಾಗರಿಕರಿಗೆ ವ್ಯಾಕ್ಸಿನೇಷನ್‌ಗಳು ಹಿತಕರವಾಗಿ ಹೊಂದಿರಬೇಕು ಎಂದಿದೆ.
ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ರವೀಂದ್ರ ಭಟ್ ಅವರನ್ನೂ ಒಳಗೊಂಡ ನ್ಯಾಯಪೀಠ, ವಿವಿಧ ವರ್ಗದ ನಾಗರಿಕರ ನಡುವೆ ತಾರತಮ್ಯ ಮಾಡಲಾಗುವುದಿಲ್ಲ. 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಗೆ ಉಚಿತ ಲಸಿಕೆಗಳನ್ನು ನೀಡುವ ಹೊಣೆಯನ್ನು ಕೇಂದ್ರ ಸರ್ಕಾರವು ಹೊತ್ತುಕೊಳ್ಳುತ್ತದೆ. 18 ರಿಂದ 44 ವಯೋಮಾನದವರ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳು ಮಾತುಕತೆ ನಡೆಸಬೇಕು ಎಂದಿದೆ.
ಕೇಂದ್ರ ಸರ್ಕಾರ ಸಂವಿಧಾನದ ಆರ್ಟಿಕಲ್ 14 (ಕಾನೂನಿನ ಎದುರು ಎಲ್ಲರೂ ಸಮಾನರು) ಮತ್ತು ಆರ್ಟಿಕಲ್ 21ರಲ್ಲಿ (ಜೀವ ಸಂರಕ್ಷಣೆ ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಇರುವಂತೆ ಈಗಿನ ಲಸಿಕೆ ನೀತಿಯನ್ನು ಪರಿಷ್ಕರಿಸುವ ವಿಶ್ವಾಸವಿದೆ ಎಂದು ಪೀಠ ತಿಳಿಸಿದೆ.