ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹಣಕಾಸು ಷೇರುಗಳ ಗಳಿಕೆಯ ಕಾರಣದಿಂದ ಭಾರತೀಯ ಷೇರುಗಳು ಚೇತರಿಕೆಯ ಹಾದಿಯಲ್ಲಿ ಸಾಗುತ್ತಿವೆ.
ಅಂತಿಮ ಹಂತದಲ್ಲಿರುವ ಯೂರೋಪಿನ ಬ್ರೆಕ್ಸಿಟ್ ವ್ಯಾಪಾರ ಒಪ್ಪಂದ ಹೂಡಿಕೆದಾರರ ಆತ್ಮವಿಶ್ವಾಸವನ್ನು ವೃದ್ಧಿಸಿದೆ ಎನ್ನಲಾಗುತ್ತಿದೆ. ಹೀಗಾಗಿ ಭಾರತೀಯ ಕಂಪನಿಗಳು ಷೇರುಗಳ ಮೌಲ್ಯ ವೃದ್ಧಿಸುತ್ತಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 50 ಅಂಶಗಳಷ್ಟು ಅಂದರೆ ಶೇ 0.64 ರಷ್ಟು ಏರುಗತಿಯಲ್ಲಿ ಸಾಗುವ ಮೂಲಕ 13,688.60ರಲ್ಲಿ ವಹಿವಾಟು ನಡೆಸುತ್ತಿದೆ. ಈ ಮೂಲಕ ಸತತ ಮೂರನೇ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದೆ.
ಓದಿ: ಹೊಸ ಬಗೆ ಕೊರೊನಾಗೆ ಬೆದರಿದ ಏಷ್ಯಾ ಮಾರುಕಟ್ಟೆ: ನಮ್ಮ ಗೂಳಿಗಿಲ್ಲ ಚಿಂತೆ
ಅದೇ ರೀತಿ ಇನ್ನೊಂದೆಡೆ, ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಅಂಶಗಳು ಶೇ 0.63 ರಷ್ಟು ಏರಿಕೆಯಾಗಿದ್ದು ಸದ್ಯ 46,742.16ರಲ್ಲಿ ವಹಿವಾಟು ಸಾಗುತ್ತಿದೆ.
ಬ್ರಿಟನ್ ಮತ್ತು ಯುರೋಪಿಯನ್ ಒಕ್ಕೂಟಗಳು ಮಹತ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕುವ ವರದಿಗಳು ಬರುತ್ತಿವೆ. ಈ ಹಿನ್ನೆಲೆಯಲ್ಲೂ ಏಷ್ಯಾದ ಷೇರುಗಳ ಮೌಲ್ಯ ವೃದ್ಧಿಸಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆಯ ಸೂಚ್ಯಂಕ ನಿಫ್ಟಿಯಲ್ಲಿ ಬ್ಯಾಂಕಿಂಗ್ ವಲಯ, ಸಾರ್ವಜನಿಕ ಉದ್ದಿಮೆಗಳ ಬ್ಯಾಂಕುಗಳ ಷೇರುಗಳು ಶೇ 0.8- 1.5ರಷ್ಟು ಏರಿಕೆ ಕಂಡಿದೆ.