ಮುಂಬೈ: ಜಾಗತಿಕ ಕಚ್ಚಾ ತೈಲ ಉತ್ಪಾದಕರು ಇಂಧನ ಉತ್ಪಾದನ್ನೆಯನ್ನು ತಾತ್ಕಾಲಿಕ ಸ್ಥಗಿತದ ಹೊರತಾಗಿಯೂ ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್ ಕಚ್ಚಾ ತೈಲ ದರದಲ್ಲಿ ಪ್ರತಿ ಬ್ಯಾರೆಲ್ ಮೇಲೆ ಶೇ 2.25ರಷ್ಟು (₹ 322) ಇಳಿಕೆಯಾಗಿ 50.79 ಡಾಲರ್ನಲ್ಲಿ ಮಾರಾಟ ಆಗುತ್ತಿದೆ. ತತ್ಪರಿಣಾಮ ಭಾರತದ ತೈಲ ಚಿಲ್ಲರೆ ಮಾರಾಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಸುಮಾರು 22-23 ಪೈಸೆ ಹಾಗೂ 20-21 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.