ಮುಂಬೈ: ಬಿಎಸ್‌ಇ ಸೆನ್ಸೆಕ್ಸ್ ಸೋಮವಾರ ಮೊದಲ ಬಾರಿಗೆ 49,000 ಅಂಕಗಳನ್ನು ದಾಟಿದೆ ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ನಿಫ್ಟಿ 50 ಅಂಕ ಏರಿಕೆ ಕಂಡು 14,400 ಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದೆ. ಐಟಿ ಸ್ಟಾಕ್ಗಳ ಮೌಲ್ಯದಲ್ಲಿ ಏರಿಕೆ ಕಂಡಿದೆ.
ಸಾಂಕ್ರಾಮಿಕದಿಂದ ಆದ ಆರ್ಥಿಕ ಹಿನ್ನಡೆಯ ಹೊರತಾಗಿಯೂ ಏಷ್ಯಾದ ಷೇರುಗಳ ಮೌಲ್ಯದಲ್ಲಿ ಸೋಮವಾರ ಹೆಚ್ಚಳ ಕಂಡಿದೆ. ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಆಡಳಿತವು ಯುಎಸ್ ಆರ್ಥಿಕತೆಗೆ ಹೆಚ್ಚಿನ ಸಹಾಯ ನೀಡುತ್ತಿದೆ ಎಂಬ ನಿರೀಕ್ಷೆ ವ್ಯಾಪಾರಿಗಳಲ್ಲಿದೇ. ಇದು ಏಷ್ಯಾ ಮತ್ತು ಇತರ ರಫ್ತು-ಚಾಲಿತ ರಾಷ್ಟ್ರಗಳಿಗೆ ಸಹಾಯಕವಾಗಿದೆ.
ಇದನ್ನೂ ಓದಿ: ತೀವ್ರ ಟೀಕೆ, ವಿರೋಧದ ಬಳಿಕ ವಾಟ್ಸ್ಆ್ಯಪ್ ಹೊಸ ಬದಲಾವಣೆ ವಾಪಸ್
ಆರಂಭಿಕ ವಹಿವಾಟಿನಲ್ಲಿ ದಕ್ಷಿಣ ಕೊರಿಯಾದ ಕೋಸ್ಪಿ ಶೇಕಡಾ 2.5 ರಷ್ಟು ಏರಿಕೆ ಕಂಡು 3,230.15 ಕ್ಕೆ ತಲುಪಿದೆ. ಆಸ್ಟ್ರೇಲಿಯಾದ ಎಸ್ & ಪಿ / ಎಎಸ್ಎಕ್ಸ್ ಶೇಕಡಾ 0.7 ರಷ್ಟು ಕುಸಿದು 6,714.20 ಕ್ಕೆ ತಲುಪಿದೆ. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ 0.2 ರಷ್ಟು ಏರಿಕೆ ಕಂಡು 27,945.18ಕ್ಕೆ ತಲುಪಿದ್ದರೆ, ಶಾಂಘೈ ಕಾಂಪೊಸಿಟ್ 0.4 ರಷ್ಟು ಏರಿಕೆಯಾಗಿ 3,584.97 ಕ್ಕೆ ತಲುಪಿದೆ.