ETV Bharat / business

ಸಾರ್ವಕಾಲಿಕ ಏರಿಕೆ ದಾಖಲಿಸಿದ ನಿಫ್ಟಿ: 13 ಸಾವಿರದ ಗಡಿ ದಾಟಿದ ಸೂಚ್ಯಂಕ; ಬಳಿಕ ಕುಸಿತ

ಜನವರಿ ಬಳಿಕ ನಿಫ್ಟಿ ಮತ್ತೆ ಭಾರಿ ಏರಿಕೆ ಕಂಡಿದೆ. ಇದೇ ಮೊದಲ ಬಾರಿ ನಿಫ್ಟಿ-50, 13 ಸಾವಿರದ ಗಡಿ ದಾಟಿ ಹೊಸ ಎತ್ತರಕ್ಕೆ ಏರಿದೆ. ಇನ್ನು ಮುಂಬೈ ಷೇರುಪೇಟೆ ಕೂಡ ನಿನ್ನೆಯೇ 44,571 ಅಂಕಗಳಿಗೆ ಜಿಗಿದಿದ್ದರೆ ಇಂದು 44743 ಅಂಕಗಳಿಗೆ ಏರಿಕೆ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

Today Sensex News
ಸಾರ್ವಕಾಲಿಕ ಏರಿಕೆ ದಾಖಲಿಸಿದ ನಿಫ್ಟಿ
author img

By

Published : Nov 25, 2020, 10:52 AM IST

ಮುಂಬೈ: ಕೊನೆಗೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 13 ಸಾವಿರದ ಗಡಿಯನ್ನ ದಾಟಿ ಮುನ್ನುಗ್ಗುತ್ತಿದೆ. ಜನವರಿ ಬಳಿಕ ನಿಫ್ಟಿ ಮತ್ತೆ ಭಾರಿ ಏರಿಕೆ ಕಂಡಿದೆ. ಇದೇ ಮೊದಲ ಬಾರಿ ನಿಫ್ಟಿ-50 13 ಸಾವಿರದ ಗಡಿ ದಾಟಿ ಹೊಸ ಎತ್ತರಕ್ಕೆ ಏರಿದೆ. ಕೇವಲ 13 ವ್ಯವಹಾರಿಕ ದಿನಗಳಲ್ಲಿ ನಿಫ್ಟಿ 12 ಸಾವಿರದಿಂದ 13000 ದ ಗಡಿ ದಾಟಿದೆ.

ಓದಿ:ಮಾರುತಿ ಸುಝುಕಿ ಚಂದಾದಾರಿಕೆ ಕಾರ್ಯಕ್ರಮ 4 ನಗರಗಳಿಗೆ ವಿಸ್ತರಣೆ

ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕ ಬೆಳವಣಿಗೆಗಳು, ಡಾಲರ್​​​ನ ಕುಸಿತ, ಕೊರೊನಾಕ್ಕೆ ಹೊಸ ಲಸಿಕೆ ಇವೆಲ್ಲಕ್ಕಿಂತ ಮುಖ್ಯವಾಗಿ ಜಾಗತಿಕವಾಗಿ ಆಯಾಯ ಕೇಂದ್ರ ಬ್ಯಾಂಕ್​ಗಳು ಆರ್ಥಿಕ ಚೇತರಿಕೆ ಹಣದ ಹರಿವನ್ನ ಹೆಚ್ಚಳ ಮಾಡಿರುವುದು ಷೇರುಪೇಟೆ ಏರಿಕೆಗೆ ಕಾರಣವಾಗಿದೆ.

ಓದಿ:ಪ್ರತಿಷ್ಠಿತ ಕಂಪನಿಗಳಿಂದ‌ 6 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ: ಸಚಿವ ಶೆಟ್ಟರ್​​

ಇನ್ನು ಮುಂಬೈ ಷೇರುಪೇಟೆ ಕೂಡ ಇಂದು ಬೆಳಗಿನ ವ್ಯವಹಾರದಲ್ಲಿ 44,571 ಅಂಕಗಳಿಗೆ ಏರಿಕೆ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ನವೆಂಬರ್​ ತಿಂಗಳಲ್ಲಿ ಶೇ 12 ರಷ್ಟು ಏರಿಕೆ ದಾಖಲಿಸಿದೆ. ಇಂದಿನ ವ್ಯವಹಾರದಲ್ಲಿ ನಿಫ್ಟಿ 13120 ಅಂಶಗಳಿಗೆ ಏರಿಕೆ ಕಂಡರೆ, ಬಿಎಸ್​​ಸಿ 220 ಅಂಕಗಳ ಹೆಚ್ಚಳದ ಮೂಲಕ 44743ಕ್ಕೆ ತಲುಪಿದೆ.

10;50 ರ ವೇಳಗೆ ಷೇರುಪೇಟೆ 143 ಅಂಕಗಳ ಕುಸಿತ ಕಂಡು 44373ರ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.