ಮುಂಬೈ: ಹೊಸ ವರ್ಷದ ಮೊದಲ ದಿನವೇ ಸೆನ್ಸೆಕ್ಸ್ ಶುಭಾರಂಭ ಮಾಡಿದೆ. ಆರಂಭಿಕ ವಹಿವಾಟಿನಲ್ಲಿ114 ಪಾಯಿಂಟ್‌ಗಳ ಏರಿಕೆ ಕಂಡಿದ್ದು, ಪ್ರಸ್ತುತ 47,866 ವಹಿವಾಟು ನಡೆಸುತ್ತಿದೆ. ನಿಫ್ಟಿ 14,016 ಕ್ಕೆ ತಲುಪಿದೆ.
ಬೆಳಿಗ್ಗೆ 9: 15 ಕ್ಕೆ ಸೆನ್ಸೆಕ್ಸ್ ಶೇ 0.07 ಅಥವಾ 33.95 ಪಾಯಿಂಟ್ ಗಳಿಸಿ 47,785.28 ಕ್ಕೆ ತಲುಪಿದ್ದರೆ, ನಿಫ್ಟಿ 50 ಸೂಚ್ಯಂಕವು 14.35 ಪಾಯಿಂಟ್ ಅಥವಾ 0.10 ರಷ್ಟು ಏರಿಕೆ ಕಂಡು 13,996.10 ಕ್ಕೆ ಏರಿಕೆ ಕಂಡು ವ್ಯವಹಾರ ಮುಂದುವರಿಸಿದೆ.
ಇದನ್ನೂ ಓದಿ: ಭವಿಷ್ಯ ನಿಧಿಗೆ ಇನ್ನಷ್ಟು ಸಂಗ್ರಹ.. ಇನ್ಮುಂದೆ ಇಪಿಎಫ್ ಮೇಲೆ ಶೇ.8.5 ರಷ್ಟು ಬಡ್ಡಿದರ
ನಿಫ್ಟಿ ಸ್ಮಾಲ್‌ಕ್ಯಾಪ್ 100 ಮತ್ತು ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕಗಳು ತಲಾ 0.5 ಪ್ರತಿಶತದಷ್ಟು ಏರಿಕೆ ಕಂಡಿವೆ. ವಿಶ್ವದ ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ವ್ಯವಹಾರ ಹಾಗೂ ಕೋವಿಡ್ಗೆ ಲಸಿಕೆ ಬಂದಿರುವ ಹಿನ್ನೆಲೆ ಮುಂಬೈ ಷೇರುಪೇಟೆಯಲ್ಲಿ ಸಕಾರಾತ್ಮಕ ಫಲಿತಾಂಶ ಕಂಡು ಬಂದಿದೆ ಎನ್ನಲಾಗಿದೆ.