ಮುಂಬೈ: ಕಳೆದ ವಾರದ ವಹಿವಾಟಿನಲ್ಲಿ ದಾಖಲೆಯ 50 ಸಾವಿರ ಗಡಿ ದಾಟಿದ್ದ ಈಕ್ವಿಟಿ ಬೆಂಚ್ಮಾರ್ಕ್ ಸೆನ್ಸೆಕ್ಸ್, ಸತತ ಐದನೇ ದಿನವೂ ಇಳಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ದುರ್ಬಲ ಪ್ರವೃತ್ತಿಯ ಮಧ್ಯೆ ಎಚ್‌ಡಿಎಫ್‌ಸಿ ಟ್ವಿನ್ಸ್, ಟಿಸಿಎಸ್, ಇನ್ಫೋಸಿಸ್ ಮತ್ತು ಐಸಿಐಸಿಐ ಬ್ಯಾಂಕ್‌ನಂತಹ ಷೇರುಗಳ ಕುಸಿತದಿಂದ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 520 ಅಂಕಗಳಷ್ಟು ಕುಸಿದಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕವು 523.14 ಅಂಕ ಅಥವಾ ಶೇ 1.10ರಷ್ಟು ಕಡಿಮೆಯಾಗಿ 46,886.79 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 167.80 ಅಂಕ ಅಥವಾ ಶೇ 1.2ರಷ್ಟು ಕುಸಿದು 13,799.70 ಮಟ್ಟದಲ್ಲಿದೆ. ಮುಂಬರುವ ಬಜೆಟ್ ಮಂಡನೆಯ ಲಾಭ ಕಾಯ್ದಿರಿಸುವಿಕೆ ಹಾಗೂ ತ್ರೈಮಾಸಿಕಗಳ ಮಿಶ್ರ ಫಲಿತಾಂಶ ಪೇಟೆಯ ಮೇಲೆ ನೇರ ಪರಿಣಾಮ ಬೀರಿವೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಶೇ .2.50ರಷ್ಟು ಕುಸಿದಿದ್ದು ಎಚ್‌ಡಿಎಫ್‌ಸಿ, ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರಾ, ಸನ್ ಫಾರ್ಮಾ, ಪವರ್‌ಗ್ರಿಡ್, ಕೊಟಾಕ್ ಬ್ಯಾಂಕ್, ಎಸ್‌ಬಿಐ ಮತ್ತು ನೆಸ್ಲೆ ಇಂಡಿಯಾ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ ಒಎನ್‌ಜಿಸಿ, ಎನ್‌ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಯುಎಲ್ ಲಾಭ ಟಾಪ್ ಗೇನರ್ಗಳಾಗಿವೆ.
ಇದನ್ನೂ ಓದಿ: ಬ್ಯಾಂಕ್ಗಳಲ್ಲಿ ಕುಂದು ಕೊರತೆ ಪರಿಹಾರ ವ್ಯವಸ್ಥೆ ಬಲಪಡಿಸಲು ಚೌಕಟ್ಟು ರೂಪಿಸಿದ ಆರ್‌ಬಿಐ
ಏಷ್ಯಾದ ಇತರೆಡೆಗಳಲ್ಲಿ ಶಾಂಘೈ, ಹಾಂಕಾಂಗ್, ಸಿಯೋಲ್ ಮತ್ತು ಟೋಕಿಯೊಗಳಲ್ಲಿನ ಪೇಟೆಗಳು ಕೆಂಪು ಬಣ್ಣದಲ್ಲಿ ವಹಿವಾಟು ನಿರತವಾಗಿವೆ. ಟೆಕ್ ದೈತ್ಯರ ಕಡಿಮೆ ಗಳಿಕೆ ಮತ್ತು ವಿಸ್ತೃತ ಮೌಲ್ಯಮಾಪನದ ಮೇಲಿನ ಕಳವಳದಿಂದಾಗಿ ಅಮೆರಿಕ ಈಕ್ವಿಟಿಗಳು ಕೆಳಮುಖವಾಗಿತ್ತು.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಫ್ಯೂಚರ್ ಪ್ರತಿ ಬ್ಯಾರೆಲ್‌ಗೆ ಶೇ 0.45ರಷ್ಟು ಕಡಿಮೆಯಾಗಿ 55.56 ಡಾಲರ್‌ಗೆ ವಹಿವಾಟು ನಡೆಸುತ್ತಿದೆ.