ಮುಂಬೈ: ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಹೊಸ ದಾಖಲೆ ಬರೆದಿದೆ. ಗೂಳಿಯ ಸತತ ಓಟ ಮುಂದುವರಿದಿದ್ದು, ದಿನದ ಆರಂಭದಲ್ಲೇ 197 ಅಂಕಗಳ ಏರಿಕೆಯೊಂದಿಗೆ 58,050ರಲ್ಲಿ ವಹಿವಾಟು ನಡೆಸುತ್ತಿದೆ. ಇದೇ ಮೊದಲ ಬಾರಿಗೆ 58 ಸಾವಿರ ಅಂಕಗಳ ಗಡಿ ದಾಟಿರುವುದು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 39 ಅಂಕಗಳ ಜಿಗಿತದೊಂದಿಗೆ 17,273 ರಲ್ಲಿತ್ತು.
ಕೋಟಕ್ ಮಹಿಂದ್ರಾ ಬ್ಯಾಕ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಟೈಟಾನ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಐಸಿಐಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಲಾಭದಲ್ಲಿವೆ. ಹೆಚ್‌ಸಿಎಲ್ ಟೆಕ್, ಟಾಟಾ ಕನ್ಸೆಲ್ಟೆನ್ಸಿ ಸರ್ವೀಸ್, ಮಾರುತಿ ಸುಜುಕಿ, ನೆಸ್ಲೆ ಇಂಡಿಯಾ, ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್, ಟೆಕ್ ಮಹೀಂದ್ರಾ ಷೇರುಗಳು ನಷ್ಟ ಅನುಭವಿಸಿದವು.