ಮುಂಬೈ: ಸಕಾರಾತ್ಮಕ ದೇಶೀಯ ಮತ್ತು ಜಾಗತಿಕ ಸೂಚನೆಗಳ ಮಧ್ಯೆ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 190 ಅಂಕ ಏರಿಕೆ ಕಂಡು 50,000 ಅಂಕಗಳ ಗಡಿ ದಾಟಿದೆ.
ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಸಂಖ್ಯೆ ವೃದ್ಧಿಯ ಪ್ರೋತ್ಸಾಹದ ಜೊತೆಗೆ ಕಳೆದ ವಾರದ ಪ್ರಕ್ಷುಬ್ಧತೆಯ ನಂತರ ಜಾಗತಿಕ ಬಾಂಡ್ ಮಾರುಕಟ್ಟೆಗಳಲ್ಲಿ ಹೂಡಿಕೆ ಶಾಂತತೆ ಮರುಕಳಿಸಿದ್ದರಿಂದ ಹೂಡಿಕೆದಾರರ ಮನೋಭಾವವು ಲವಲವಿಕೆಯಿಂದ ಕೂಡಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ದಿನದ ಆರಂಭಿಕ ಸೆಷನ್ನಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕವು 191.45 ಅಂಕ ಅಥವಾ ಶೇ 0.38ರಷ್ಟು ಹೆಚ್ಚಳವಾಗಿ 50,041.21 ಅಂಕಗಳಿಗೆ ಏರಿಕೆಯಾಗಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 65.10 ಅಥವಾ ಶೇ 0.44ರಷ್ಟು ಜಿಗಿತ ಕಂಡು 14,826 ಅಂಕಗಳಲ್ಲಿ ವಹಿವಾಟು ನಿರತವಾಗಿದೆ.
ಇದನ್ನೂ ಓದಿ: ಭಾರತವನ್ನು ಕತ್ತಲಿಗೆ ತಳ್ಳಲು ಚೀನಾ ಪ್ಲ್ಯಾನ್.. ಸರ್ಕಾರಿ ಕಂಪ್ಯೂಟರ್ ನೆಟ್ವರ್ಕ್ ಹ್ಯಾಕಿಂಗ್ ಯತ್ನ
ಸೋಮವಾರದ ವಹಿವಾಟಿನಂದು ಸೆನ್ಸೆಕ್ಸ್ 749 ಅಂಕ ಹಾಗೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 232 ಅಂಕ ಏರಿಕೆಯಾದವು. ಭಾರತದ ಬಂಡವಾಳ ಮಾರುಕಟ್ಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 125.15 ಕೋಟಿ ರೂ. ಮೌಲ್ಯದಷ್ಟು ಷೇರು ಖರೀದಿ ಮಾಡಿದರು.