ETV Bharat / business

ಬಜೆಟ್ ಮಂಡನೆ: ಮುಂಬೈ ಷೇರು ಸೂಚ್ಯಂಕ 1,601 ಅಂಕ ಏರಿಕೆ! - ಮುಂಬೈ ಷೇರು ಪೇಟೆ

ಕೇಂದ್ರ ಬಜೆಟ್ ಮಂಡನೆ ಆರಂಭಗೊಳ್ಳುತ್ತಿದ್ದಂತೆ ಅಟೊಮೊಬೈಲ್ ಸೆಕ್ಟರ್ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಷೇರುಗಳಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿದೆ.

Sensex
Sensex
author img

By

Published : Feb 1, 2021, 11:52 AM IST

Updated : Feb 1, 2021, 1:45 PM IST

ಮುಂಬೈ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ 2021-22ನೇ ಸಾಲಿನ ಬಜೆಟ್ ಮಂಡಿಸಿದ್ದು,ಇದರ ಬೆನ್ನಲ್ಲೇ ಮುಂಬೈ ಷೇರುಪೇಟೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ.

ಸೂಚ್ಯಂಕದಲ್ಲಿ 1601 ಅಂಕ ಏರಿಕೆ ಕಂಡು ಬಂದಿದ್ದು, ನಿಫ್ಟಿಯಲ್ಲಿಯೂ ಏರಿಕೆಯಾಗಿದೆ. ಅಟೊಮೊಬೈಲ್ ಸೆಕ್ಟರ್​ಗೆ ಹೆಚ್ಚಿನ ಆದ್ಯತೆ ನೀಡಿರುವುದು ಹಾಗೂ ಬ್ಯಾಂಕ್​ ಸೆಕ್ಟರ್​ಗಳ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿರುವುದು ಈ ಏರಿಕೆಗೆ ಕಾರಣ ಎಂದು ತಿಳಿದು ಬಂದಿದೆ. ಸದ್ಯ ಮುಂಬೈ ಸೂಚ್ಯಂಕ 47,887.43 ಇದ್ದು, ನಿಫ್ಟಿ 13,860 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ. ಇದರ ಜೊತೆಗೆ ಡಾಲರ್​ ಎದುರು ರೂಪಾಯಿ 8 ಪೈಸೆಗಳ ಏರಿಕೆ ಕಂಡು ಬಂದಿದೆ.

ಓದಿ: ಬಜೆಟ್​ ಮಂಡನೆ ಹೊಸ್ತಿಲಲ್ಲಿ 350 ಅಂಕ ಜಿಗಿದ ಸೆನ್ಸೆಕ್ಸ್​: 6 ದಿನಗಳ ಕುಸಿತಕ್ಕೆ ಬ್ರೇಕ್​

ಐಸಿಐಸಿಐ ಬ್ಯಾಂಕ್​, ಹೆಚ್​ಡಿಎಫ್​ಸಿ, ಇನ್ಪೋಸಿಸ್​, ರಿಲಯನ್ಸ್​ ಇಂಡಸ್ಟ್ರಿ ಷೇರುಗಳಲ್ಲಿ ಏರಿಕೆ ಕಂಡು ಬಂದಿದೆ. ಇದರ ಜತೆಗೆ ಪ್ರಮುಖವಾಗಿ ಮಹಿಂದ್ರಾ & ಮಹಿಂದ್ರಾ, ಅಶೋಕ​ ಲೈಲ್ಯಾಂಡ್​, ಎಂಆರ್​ಎಫ್​, ಟಾಟಾ ಮೋಟರ್ಸ್​​, ಮಾರುತಿ ಸುಜುಕಿ ಕಂಪನಿಗಳ ಷೇರುಗಳಲ್ಲಿ ಏರಿಕೆಯಾಗಿದೆ.

Last Updated : Feb 1, 2021, 1:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.