ETV Bharat / business

ಉಕ್ರೇನ್‌ ಮೇಲೆ ರಷ್ಯಾ ಯುದ್ಧದ ತಲ್ಲಣ; ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ 900 ಅಂಕಗಳ ಭಾರಿ ಕುಸಿತ - ಸೆನ್ಸೆಕ್ಸ್‌ 900 ಅಂಕಗಳ ಕುಸಿತ

ಮುಂಬೈ ಷೇರುಪೇಟೆಯಲ್ಲಿ ಇಂದು ಕರಡಿ ಕುಣಿತವಾಗಿದ್ದು, ಭಾರಿ ನಷ್ಟದಲ್ಲಿ ವಹಿವಾಟು ಸಾಗುತ್ತಿದೆ. ಸೆನ್ಸೆಕ್ಸ್‌ 924 ಅಂಕಗಳ ನಷ್ಟದ ಬಳಿಕ 55,322ರಲ್ಲಿ ವಹಿವಾಟು ನಡೆಸಿದರೆ, ನಿಫ್ಟಿ 225 ಅಂಶಗಳ ಪತನದ ಬಳಿಕ 16,568ರಲ್ಲಿ ಇತ್ತು.

Sensex slumps over 600 pts in early trade; Nifty slips below 16,650 level
ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಕೆ ಎಫೆಕ್ಟ್‌; ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ 900 ಅಂಕಗಳ ಭಾರಿ ಕುಸಿತ
author img

By

Published : Mar 2, 2022, 12:05 PM IST

ಮುಂಬೈ: ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದ್ದು, ಇತ್ತ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆನ್ಸ್‌ 900 ಅಂಕಗಳ ಇಳಿಕೆಯೊಂದಿಗೆ ಭಾರಿ ನಷ್ಟ ಕಂಡಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 200 ಅಂಕಗಳನ್ನು ಕಳೆದುಕೊಂಡಿದೆ.

ಸೆನ್ಸೆಕ್ಸ್‌ 924 ಅಂಕಗಳ ನಷ್ಟದ ಬಳಿಕ 55,322ರಲ್ಲಿ ವಹಿವಾಟು ನಡೆಸಿದರೆ, ನಿಫ್ಟಿ 225 ಅಂಶಗಳ ಪತನದ ಬಳಿಕ 16,568ರಲ್ಲಿ ವಹಿವಾಟು ನಡೆಸುತ್ತಿದೆ.

ಏರುತ್ತಿರುವ ಅಂತಾರಾಷ್ಟ್ರೀಯ ಕಚ್ಚಾ ಬೆಲೆಗಳು ಹಾಗೂ ವಿದೇಶಿ ಬಂಡವಾಳದ ಹೊರಹರಿವು ಹೂಡಿಕೆದಾರರನ್ನು ಇಕ್ಕಟ್ಟಿಗೆ ಸಿಲುವಂತೆ ಮಾಡಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 613.55 ಪಾಯಿಂಟ್‌ಗಳು ಕಡಿಮೆಯಾಗಿ 55,633.73 ರಲ್ಲಿ, ನಿಫ್ಟಿ 175.30 ಪಾಯಿಂಟ್ ಕುಸಿದ ಬಳಿಕ 16,618.6 ಕ್ಕೆ ತಲುಪಿತ್ತು. ಇದೀಗ ಕುಸಿತವು ಮುಂದುವರಿಯುತ್ತಲೇ ಇದೆ.

ಷೇರುಪೇಟೆಯಲ್ಲಿ ನಕಾರಾತ್ಮಕ ಬೆಳವಣಿಗೆಯ ಪರಿಣಾಮವಾಗಿ ಐಸಿಐಸಿಐ ಬ್ಯಾಂಕ್ ಹೆಚ್ಚು ನಷ್ಟ ಹೊಂದಿದ ಪ್ರಮುಖ ಸಂಸ್ಥೆಗಳಲ್ಲಿ ಅಗ್ರ ಸ್ಥಾನದಲ್ಲಿತ್ತು. ಈ ಬ್ಯಾಂಕ್‌ ಷೇರುಗಳ ಮೌಲ್ಯ ಶೇ. 3.46 ರಷ್ಟು ಕುಸಿದಿದೆ. ನಂತರ ಏಷ್ಯನ್ ಪೇಂಟ್ಸ್, ಮಾರುತಿ, ಹೆಚ್‌ಡಿಎಫ್‌ಸಿ, ಕೋಟಕ್ ಬ್ಯಾಂಕ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ನಷ್ಟ ಅನುಭವಿಸಿವೆ. ಟಾಟಾ ಸ್ಟೀಲ್, ಎಂ & ಎಂ, ರಿಲಯನ್ಸ್ ಇಂಡಸ್ಟ್ರೀಸ್, ಪವರ್‌ಗ್ರಿಡ್, ಎನ್‌ಟಿಪಿಸಿ ಮತ್ತು ಟೆಕ್ ಮಹೀಂದ್ರ ಲಾಭ ಗಳಿಸಿದವು.

ಏಷ್ಯಾದ ಇತರೆ ಷೇರು ಮಾರುಕಟ್ಟೆಗಳಾದ ಟೋಕಿಯೋ, ಹಾಂಗ್ ಕಾಂಗ್, ಸಿಯೋಲ್ ಹಾಗೂ ಶಾಂಘೈ ಮಾರುಕಟ್ಟೆಗಳು ಮಧ್ಯಮ ಸೆಷನ್ ವ್ಯವಹಾರಗಳಲ್ಲಿ ದೊಡ್ಡ ನಷ್ಟದೊಂದಿಗೆ ವಹಿವಾಟು ನಡೆಸುತ್ತಿವೆ. ಅಮೆರಿಕ ಮಾರುಕಟ್ಟೆ ಕೂಡ ತೀವ್ರವಾಗಿ ಕುಸಿದಿದೆ. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ. 5.73 ರಷ್ಟು ಏರಿಕೆ ಕಂಡು 110.98 ಡಾಲರ್‌ ತಲುಪಿದೆ.

ಅಮೆರಿಕ ಮತ್ತು ಯುರೋಪ್‌ ಒಕ್ಕೂಟ ರಷ್ಯಾದ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಿವೆ. ಇವುಗಳಲ್ಲಿ ರಷ್ಯಾದ ಅತಿದೊಡ್ಡ ಬ್ಯಾಂಕ್‌ಗಳ ಮೇಲಿನ ನಿರ್ಬಂಧಗಳಾಗಿವೆ. ಆದರೆ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿವೆ.

ಇದನ್ನೂ ಓದಿ: ಫೆಬ್ರವರಿಯಲ್ಲಿ 1.33 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ; ಕಳೆದ ವರ್ಷಕ್ಕಿಂತ ಶೇ.18ರಷ್ಟು ಹೆಚ್ಚಳ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.