ಮುಂಬೈ: ಕೋವಿಡ್ ನಡುವೆಯೂ ಒಂದು ವಾರ ಏರುಗತಿಯಲ್ಲಿದ್ದ ಮುಂಬೈ ಷೇರುಪೇಟೆಯಲ್ಲಿ ಸತತ ಮೂರು ದಿನಗಳಿಂದ ಕರಡಿ ಕುಣಿತ ಮುಂದುವರೆದಿದೆ.
ಷೇರುಪೇಟೆಯಲ್ಲಿಂದು ದಿನದಾಂತ್ಯಕ್ಕೆ ಸೆನ್ಸೆಕ್ಸ್ 634 ಅಂಗಳ ಕುಸಿತ ಬಳಿಕ 59,464ರಲ್ಲಿ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 181 ಅಂಕಗಳ ನಷ್ಟದೊಂದಿಗೆ 17,757ರಲ್ಲಿ ವಹಿವಾಟು ಅಂತ್ಯಗೊಳಿಸಿವೆ.
ಬಜಾಬ್ ಫಿನ್‌ಸರ್ವ್ ಷೇರುಗಳ ಮೌಲ್ಯ ಶೇ.4.57ರಷ್ಟು ನಷ್ಟ ಅನುಭವಿದೆ. ಇನ್ಫೋಸಿಸ್, ಟಿಸಿಎಸ್, ಸನ್ ಫಾರ್ಮಾ, ಹೆಚ್‌ಯುಎಲ್, ಹೆಚ್‌ಸಿಎಲ್ ಟೆಕ್, ಡಾ.ರೆಡ್ಡೀಸ್, ಹೆಚ್‌ಡಿಎಫ್‌ಸಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ನಷ್ಟ ಕಂಡ ಇತರೆ ಪ್ರಮುಖ ಕಂಪನಿಗಳಾಗಿವೆ. ಮತ್ತೊಂದೆಡೆ ಪವರ್‌ಗ್ರಿಡ್, ಭಾರ್ತಿ ಏರ್‌ಟೆಲ್, ಏಷ್ಯನ್ ಪೇಂಟ್ಸ್, ಮಾರುತಿ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಶೇ.4.86 ರಷ್ಟು ಲಾಭಗಳಿಸಿವೆ.
ಜಾಗತಿಕ ಹಣದುಬ್ಬರದ ಮೇಲಿನ ನಿರಂತರ ಬೆಳವಣಿಗೆಗಳು ಹಾಗೂ ಫೆಡ್ ದರ ಏರಿಕೆಯು ದೇಶೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಸತತ ಮೂರನೇ ದಿನವೂ ಷೇರುಗಳು ಕುಸಿಯಲು ಪ್ರಮುಖ ಕಾರಣ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಏಷ್ಯನ್ ಪೇಂಟ್ಸ್‌ನ ಏಕೀಕೃತ ನಿವ್ವಳ ಲಾಭವು 2021ರ ಡಿಸೆಂಬರ್ ಮೂರನೇ ತ್ರೈಮಾಸಿಕದಲ್ಲಿ 18.5 ರಷ್ಟು ಕುಸಿತದೊಂದಿಗೆ 1,031.29 ಕೋಟಿ ರೂಪಾಯಿಗಳಿಗೆ ತಲುಪಿದೆ.
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಮೂರನೇ ತ್ರೈಮಾಸಿಕದಲ್ಲಿ 2,300 ಕೋಟಿ ರೂ.ಗೆ ಏಕೀಕೃತ ನಿವ್ವಳ ಲಾಭದಲ್ಲಿ ಶೇ.18.68 ಲಾಭ ಮಾಡಿಕೊಂಡಿದೆ ಎಂದು ವರದಿಯಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ