ಮುಂಬೈ: ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 1,197 ಅಂಕ ಹಾಗೂ ನಿಫ್ಟಿ 366 ಅಂಕಗಳಷ್ಟು ಏರಿಕೆಯಾಗಿದೆ.
ನಿನ್ನೆ ಮಂಡನೆಯಾದ ಕೇಂದ್ರ ಬಜೆಟ್ನಲ್ಲಿ ಮೂಲಸೌಕರ್ಯ ಹಾಗೂ ಇತರ ಯೋಜನೆಗಳ ಘೋಷಣೆಯಿಂದ ಷೇರುಮಾರುಕಟ್ಟೆಯಲ್ಲಿ ಗೂಳಿಯ ಓಟ ಮುಂದುವರಿದಿದೆ. ಸೋಮವಾರ ದಾಖಲೆಯ 2314 ಅಂಕಗಳ ಜಿಗಿತ ಕಂಡ ಸೆನ್ಸೆಕ್ಸ್, ಇಂದು ಅದೇ ಆವೇಗ ಕಾಯ್ದುಕೊಂಡಿದೆ.
ಮುಂಬೈ ಷೇರು ಸೂಚ್ಯಂಖ ಸೆನ್ಸೆಕ್ಸ್ 1,197.11 ಅಂಕ ಅಥವಾ ಶೇ 2.46ರಷ್ಟು ಹೆಚ್ಚಳವಾಗಿ 49,797.72 ಅಂಕಗಳ ಮಟ್ಟದಲ್ಲೂ ನಿಫ್ಟಿ 366.65 ಅಂಕ ಅಥವಾ ಶೇ 2.57ರಷ್ಟು ಮುನ್ನಡೆ ಸಾಧಿಸಿ 14,647.85 ಅಂಗಳ ಮಟ್ಟದಲ್ಲಿ ಕೊನೆಗೊಂಡಿತು.
ಇದನ್ನೂ ಓದಿ: ನಿರ್ಮಲಾ ಬಜೆಟ್ ಎಫೆಕ್ಟ್: ಬೆಳಂಬೆಳಗ್ಗೆ ಹೂಡಿಕೆದಾರರ ಜೇಬಿಗೆ 3 ಕೋಟಿ ರೂ. ಸಂಪತ್ತು.. ಹೇಗೆ ಗೊತ್ತೆ?
ಬಜೆಟ್ ದಿನದ ಲಾಭದೊಂದಿಗೆ ಸೆನ್ಸೆಕ್ಸ್ ಎರಡು ಸೆಷನ್‌ಗಳಲ್ಲಿ 3,511 ಅಂಕ ಅಥವಾ ಶೇ 7.58ರಷ್ಟು ಹೆಚ್ಚುವರಿ ಏರಿಕೆ ದಾಖಲಿಸಿದ್ದರೇ ನಿಫ್ಟಿ 1,007.25 ಅಂಕ ವೃದ್ಧಿಸಿಕೊಂಡಿದೆ.
ಎಸ್‌ಬಿಐ, ಅಲ್ಟ್ರಾಟೆಕ್ ಸಿಮೆಂಟ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಲ್ & ಟಿ, ಭಾರ್ತಿ ಏರ್‌ಟೆಲ್, ಮಾರುತಿ ಸುಜುಕಿ ಮತ್ತು ಕೊಟಕ್ ಬ್ಯಾಂಕ್ ದಿನದ ಟಾಪ್ ಗೇನರ್ಗಳಾದರು. ಸೆನ್ಸೆಕ್ಸ್ ಘಟಕಗಳಲ್ಲಿ 27 ಷೇರುಗಳನ್ನು ಹಸಿರು ಬಣ್ಣದಲ್ಲಿದ್ದವು.