ಮುಂಬೈ: ಆರ್‌ಬಿಐನ ವಿತ್ತೀಯ ನೀತಿ ಸಮಿತಿಯ ಫಲಿತಾಂಶದ ನಂತರ ಹಣಕಾಸು ಷೇರುಗಳಲ್ಲಿ ಕಂಡುಬಂದ ವ್ಯಾಪಕ ಖರೀದಿ ಮನೋಭಾವಕ್ಕೆ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನಂದು ದಾಖಲೆಯ ಏರಿಕೆ ದಾಖಲಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಹೆಚ್ಚಿನ ಹಣದುಬ್ಬರದ ಮಧ್ಯೆ ಸತತ ಮೂರನೇ ಬಾರಿಗೆ ಬಡ್ಡಿದರಗಳನ್ನು (ರೆಪೋ ದರ ಶೇ 4ರಷ್ಟು & ರಿವರ್ಸ್ ರೆಪೋ ದರ ಶೇ 3.35ರಷ್ಟು) ಬದಲಿಸದೆ ಯಥಾವತ್ತಾಗಿ ಇರಿಸಿಕೊಂಡಿದೆ. ದೇಶದಲ್ಲಿ ಆರ್ಥಿಕತೆಯು ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಪ್ರಸಕ್ತ ತ್ರೈಮಾಸಿಕದಲ್ಲಿಯೇ ಸಕಾರಾತ್ಮಕ ಬೆಳವಣಿಗೆಗೆ ಮತ್ತೆ ಮರಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.
ದಿನದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 446.90 ಅಂಕ ಏರಿಕೆಯಾಗಿ 45,079.55 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 124.65 ಅಂಕ ಹೆಚ್ಚಳವಾಗಿ 13,258.55 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು. ಇದು ಷೇರುಪೇಟೆಯ ಸಾರ್ವಕಾಲಿಕ ಗರಿಷ್ಠ ಎರಿಕೆಯಾಗಿದೆ.
ಓದಿ: ತಾನೇ ಕತ್ತೆ, ಬೀದಿ ನಾಯಿ ಮಾರಿ, ಜಗತ್ತಿನ ಆರ್ಥಿಕ ಚೇತರಿಕೆಗೆ ಟಿಪ್ಸ್ ಕೊಟ್ಟ ಪಾಕ್ ಪ್ರಧಾನಿ ಇಮ್ರಾನ್!
ಬಡ್ಡಿದರ ಪ್ರಕಟಣೆಯ ನಂತರ ಬ್ಯಾಂಕಿಂಗ್, ಹಣಕಾಸು, ರಿಯಾಲ್ಟಿ ಮತ್ತು ಆಟೋ ಷೇರುಗಳ ಖರೀದಿ ಭರಾಟೆ ಕಂಡುಬಂತು. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಐಸಿಐಸಿಐ ಬ್ಯಾಂಕ್ ಶೇ ರಷ್ಟು ಏರಿಕೆ ಕಂಡಿದ್ದು, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ಎಚ್‌ಯುಎಲ್, ಎಸ್‌ಬಿಐ, ಎಲ್ & ಟಿ, ಆಕ್ಸಿಸ್ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ನಂತರದ ಸ್ಥಾನದಲ್ಲಿದೆ. ಮತ್ತೊಂದೆಡೆ ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫಿನ್‌ಸರ್ವ್, ಎಚ್‌ಸಿಎಲ್ ಟೆಕ್ ಮತ್ತು ಎಚ್‌ಡಿಎಫ್‌ಸಿ ಹಿನ್ನಡೆ ಕಂಡವು.