ETV Bharat / business

ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟಕ್ಕಿಲ್ಲ ಬ್ರೇಕ್: ಸೆನ್ಸೆಕ್ಸ್‌, ನಿಫ್ಟಿ ಮತ್ತೆ ಸಾರ್ವಕಾಲಿಕ ದಾಖಲೆ

ಮುಂಬೈ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಮುಂದುವರೆದಿದ್ದು, ಇಂದು ಕೂಡ ಸೆನ್ಸೆಕ್ಸ್‌ 55,582.58 ಹಾಗೂ ನಿಫ್ಟಿ 16,563.05ಕ್ಕೆ ತಲುಪುವುದರ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿವೆ. ರಿಲಯನ್ಸ್, ಎಚ್‌ಡಿಎಫ್‌ಸಿ, ಐಟಿ ಮತ್ತು ಫಾರ್ಮಾ ಷೇರುಗಳು ಲಾಭಗಳಿಸಿದರೆ, ಬಜಾಜ್ ಫೈನಾನ್ಸ್, ಎಂ&ಎಂ, ಬಜಾಜ್ ಫಿನ್‌ಸರ್ವ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಷ್ಟ ಅನುಭವಿಸಿವೆ.

Sensex, Nifty scale new peaks; RIL, HDFC duo lead rally
ಮುಂಬೈ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟಕ್ಕಿಲ್ಲ ಬ್ರೇಕ್‌; ಸೆನ್ಸೆಕ್ಸ್‌, ನಿಫ್ಟಿ ಮತ್ತೆ ಸಾರ್ವಕಾಲಿಕ ದಾಖಲೆ
author img

By

Published : Aug 16, 2021, 7:31 PM IST

Updated : Aug 17, 2021, 2:10 PM IST

ಮುಂಬೈ: ದೇಶದ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಮತ್ತೊಂದು ಸಾರ್ವಕಾಲಿಕ ದಾಖಲೆ ಬರೆದಿದ್ದು, ರಿಲಯನ್ಸ್, ಎಚ್‌ಡಿಎಫ್‌ಸಿ, ಐಟಿ ಮತ್ತು ಫಾರ್ಮಾ ಷೇರುಗಳು ಲಾಭಗಳಿಸಿದವು. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 145 ಅಂಕಗಳ ಅಥವಾ ಶೇ.0.26 ರಷ್ಟು ಏರಿಕೆಯೊಂದಿಗೆ 55,582.58 ವಹಿವಾಟು ನಡೆಸಿದೆ. ಒಮ್ಮೆ 55,680.75ಕ್ಕೆ ತಲುಪಿದ್ದು ಕೂಡ ಗರಿಷ್ಠ ಮಟ್ಟದ ದಾಖಲೆಯಾಗಿದೆ. ನಿಫ್ಟಿ 33.95 ಅಂಕ ಅಥವಾ ಶೇ. 0.21 ಹೆಚ್ಚಳದೊಂದಿಗೆ 16,563.05 ರಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ. ಇದು ಕೂಡ ಸಾರ್ವಕಾಲಿಕ ದಾಖಲೆಯಾಗಿದೆ. ಒಮ್ಮೆ 16,589.40ಕ್ಕೂ ಬಂದು ತಲುಪಿತ್ತು.

ಟಾಟಾ ಸ್ಟೀಲ್‌ನ ಷೇರುಗಳು ಹೆಚ್ಚಿನ ಲಾಭಗಳಿದವು. ನಂತರ ಬಜಾಜ್ ಫೈನಾನ್ಸ್, ಎಂ&ಎಂ, ಬಜಾಜ್ ಫಿನ್‌ಸರ್ವ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಾಭದತ್ತ ಮುಖ ಮಾಡಿದ್ದವು. ಮಾರುತಿ, ಬಜಾಜ್ ಆಟೋ, ಪವರ್‌ಗ್ರಿಡ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ನಷ್ಟ ಅನುಭವಿಸಿದವು.

ಇದನ್ನೂ ಓದಿ: 5 ತಿಂಗಳಲ್ಲಿ 5 ಸಾವಿರ ಅಂಕ ಏರಿಕೆ ಕಂಡ ಸೆನ್ಸೆಕ್ಸ್​​: ಒಂದೇ ದಿನ 3.48 ಲಕ್ಷ ಕೋಟಿ ಗಳಿಕೆ!

ಬಿಎಸ್‌ಇ ಲೋಹ, ಇಂಧನ, ತೈಲ ಮತ್ತು ಅನಿಲ, ಎಫ್‌ಎಂಸಿಜಿ ಮತ್ತು ಹಣಕಾಸು ಸೂಚ್ಯಂಕಗಳು ಶೇ .1.79 ಕ್ಕೆ ಏರಿಕೆಯಾಗಿದ್ದು, ಟೆಲಿಕಾಂ, ಆಟೋ, ಬಂಡವಾಳ ಸರಕು ಮತ್ತು ವಿದ್ಯುತ್ ಸೂಚ್ಯಂಕಗಳು ಶೇ .0.99 ಕ್ಕೆ ಇಳಿಕೆ ಕಂಡವು. ಇನ್ನು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ 1.33 ರಷ್ಟು ಕುಸಿತ ಕಂಡು ಬ್ಯಾರೆಲ್‌ಗೆ 69.65 ಡಾಲರ್‌ಗೆ ಮಾರಾಟವಾಗಿದೆ.

Last Updated : Aug 17, 2021, 2:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.