ETV Bharat / business

ಎರಡನೇ ದಿನವೂ ಏರಿಕೆ ಕಂಡ ಸೆನ್ಸೆಕ್ಸ್​: 403 ಅಂಕಗಳ ಹೆಚ್ಚಳದೊಂದಿಗೆ ವಹಿವಾಟು ಅಂತ್ಯ - ಜಾಗತಿಕವಾಗಿ ಸೆನ್ಸೆಕ್ಸ್​ 403 ಅಂಕಗಳ ಏರಿಕೆ

ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಕಳೆದೆರಡು ದಿನಗಳಿಂದ ಗೂಳಿ ಓಟ ಮುಂದುವರಿದಿದೆ. ಸೆನ್ಸೆಕ್ಸ್ 403 ಅಂಕಗಳಷ್ಟು ಜಿಗಿದಿದ್ದು, ನಿಫ್ಟಿ 12.8 ಅಂಕಗಳಷ್ಟು ಏರಿಕೆ ಕಂಡಿದೆ.

ಸೆನ್ಸೆಕ್ಸ್
ಸೆನ್ಸೆಕ್ಸ್
author img

By

Published : Aug 24, 2021, 7:22 PM IST

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ವಾರದ ಮೊದಲೆರಡು ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್, ನಿಫ್ಟಿಯಲ್ಲಿ ಭಾರಿ ಏರಿಕೆ ಕಂಡಿದೆ. ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಫಿನ್‌ಸರ್ವ್‌ಗಳು ಉತ್ತಮ ವಹಿವಾಟು ನಡೆಸಿದ್ದು, ಸೆನ್ಸೆಕ್ಸ್​ 403 ಅಂಕಗಳಷ್ಟು ಏರಿಕೆ ಕಂಡಿದೆ.

ಷೇರು ಸೂಚ್ಯಂಕವು 403.19 ಪಾಯಿಂಟ್‌ಗಳಷ್ಟು ಹೆಚ್ಚಾಗಿ 55,958.98 ಅಂಕಗಳೊಂದಿಗೆ ದಿನದ ವಹಿವಾಟು ಮುಗಿಸಿದೆ. ಇನ್ನು NSE ನಿಫ್ಟಿ 128.15 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದ್ದು, ದಿನದಾಂತ್ಯಕ್ಕೆ 16,624.60 ಅಂಕಗಳೊಂದಿಗೆ ವ್ಯವಹಾರ ಕೊನೆಗೊಳಿಸಿತು.

ಸೆನ್ಸೆಕ್ಸ್​ನಲ್ಲಿ ಬಜಾಜ್ ಫಿನ್‌ಸರ್ವ್ ವ್ಯವಹಾರದಲ್ಲಿ ಶೇಕಡಾ 8 ರಷ್ಟು ಏರಿಕೆ ಕಂಡಿದೆ. ಇನ್ನು ಕಳೆದ ವಾರಾಂತ್ಯದಲ್ಲಿ ಶೇ 9 ರಷ್ಟು ಕುಸಿತ ಕಂಡಿದ್ದ ಟಾಟಾ ಸ್ಟೀಲ್ ಷೇರುಗಳು ಬೆಲೆಯಲ್ಲಿ ಇಂದು ಭಾರಿ ಏರಿಕೆ ದಾಖಲಿಸಿತು. ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್​ಗಳು ಹೆಚ್ಚಿನ ವಹಿವಾಟು ನಡೆಸಿವೆ.

ನಂತರದದಲ್ಲಿ ನೆಸ್ಲೆ ಇಂಡಿಯಾ, ಇನ್ಫೋಸಿಸ್, ಹೆಚ್‌ಡಿಎಫ್‌ಸಿ ಮತ್ತು ಹೆಚ್‌ಸಿಎಲ್ ಟೆಕ್ ಷೇರುಗಳಿವೆ. ಮೆಟಲ್, ಬ್ಯಾಂಕಿಂಗ್​, ರಿಯಾಲ್ಟಿ ಸ್ಟಾಕ್​ಗಳು ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭ ಗಳಿಸಿವೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.

ಸೋಮವಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ​6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಭೂಮಿ ಮಾರಾಟ ಮಾಡಿ ಮೂಲಸೌಕರ್ಯ ಅಭಿವೃದ್ಧಿ ಮಾಡುವ ಯೋಜನೆ ಪ್ರಕಟಿಸಿದ್ದರು. ಇದು ಇಂದು ಷೇರುಪೇಟೆ ವ್ಯವಹಾರದ ಮೇಲೆ ಪ್ರಭಾವ ಬೀರುವಂತೆ ಮಾಡಿದೆ.

ಇನ್ನು ಶಾಂಘೈ, ಹಾಂಕಾಂಗ್, ಟೋಕಿಯೊ ಮತ್ತು ಸಿಯೋಲ್‌ ಮಾರುಕಟ್ಟೆಗಳು ಸಹ ಏರುಗತಿಯಲ್ಲಿ ಸಾಗಿದ್ದರಿಂದ ಮುಂಬೈ ಷೇರುಪೇಟೆ ಹಸಿರು ಹಾದಿಯಲ್ಲಿ ಸಾಗಲು ಪ್ರೇರಣೆಯಾಯ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.