ETV Bharat / business

ಮುಂಬೈ ಷೇರುಪೇಟೆಯಲ್ಲಿ ದಿನದ ಆರಂಭದಲ್ಲೇ ಸೆನ್ಸೆಕ್ಸ್‌ 444 ಅಂಕಗಳ ಜಿಗಿತ

author img

By

Published : Mar 9, 2022, 11:33 AM IST

ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ ಆರಂಭದಲ್ಲೇ 444.51 ಅಂಕಗಳ ಜಿಗಿತ ಕಂಡು 53,868 ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 117 ಅಂಶಗಳು ಏರಿಕೆಯಾಗಿದೆ.

Sensex, Nifty continue to rally supported by gains in IT, Reliance stocks
ಮುಂಬೈ ಷೇರುಪೇಟೆಯಲ್ಲಿ ದಿನದ ಆರಂಭದಲ್ಲೇ ಸೆನ್ಸೆಕ್ಸ್‌ 444 ಅಂಕಗಳ ಜಿಗಿತ

ಮುಂಬೈ: ರಾಷ್ಟ್ರೀಯ ಷೇರುಪೇಟೆಯಲ್ಲಿ ಇಂದು ಕೂಡ ಗೂಳಿ ಓಟ ಮುಂದುವರೆದಿದ್ದು, ದಿನದ ಆರಂಭದಲ್ಲೇ ಸೆನ್ಸೆಕ್ಸ್‌ 444.51 ಅಂಕಗಳ ಜಿಗಿತ ಕಂಡು 53,868 ರಲ್ಲಿ ಹಾಗೂ ನಿಫ್ಟಿ 117 ಅಂಶಗಳನ್ನು ಹೆಚ್ಚಿಸಿಕೊಂಡು 16,130ರಲ್ಲಿ ವಹಿವಾಟು ನಡೆಸುತ್ತಿದೆ.

ಟೆಕ್ ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಸನ್ ಫಾರ್ಮಾ, ಇನ್ಫೋಸಿಸ್ ಹಾಗೂ ಡಾ ರೆಡ್ಡೀಸ್ ಲಾಭದಲ್ಲಿ ಸಾಗುತ್ತಿರುವ ಪ್ರಮುಖ ಕಂಪನಿಗಳಾಗಿವೆ. ಮತ್ತೊಂದೆಡೆ ಪವರ್ ಗ್ರಿಡ್, ಟಾಟಾ ಸ್ಟೀಲ್, ಏಷ್ಯನ್ ಪೇಂಟ್ಸ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಆರಂಭಿಕ ವಹಿವಾಟಿನಲ್ಲಿ ನಷ್ಟದಲ್ಲಿವೆ.

ಹಾಂಕಾಂಗ್, ಶಾಂಘೈ ಷೇರು ಪೇಟೆಗಳು ಮಿಡ್-ಸೆಷನ್ ಡೀಲ್‌ಗಳಲ್ಲಿ ನಕರಾತ್ಮಕ ವಹಿವಾಟು ನಡೆಸುತ್ತಿದ್ದರೆ, ಟೋಕಿಯೋ ಮಾರುಕಟ್ಟೆ ಲಾಭದಲ್ಲಿದೆ. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಶೇ. 2.61 ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 131 ಡಾಲರ್‌ಗೆ ತಲುಪಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ ಹೆಚ್ಚಳ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಆರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 22 ಪೈಸೆ ಏರಿಕೆ ಕಂಡು 76.78 ರೂಪಾಯಿಯಲ್ಲಿ ಇದೆ. ರಷ್ಯಾ - ಉಕ್ರೇನ್ ಬಿಕ್ಕಟ್ಟಿನಿಂದಾಗಿ ಮಾರುಕಟ್ಟೆ ಅಸ್ಥಿರತೆಯಿಂದಾಗಿ ಜಾಗತಿಕ ಷೇರುಗಳಲ್ಲಿನ ಬೆಳವಣಿಗೆ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತ ಹಾಗೂ ಕಚ್ಚಾ ತೈಲ ಬೆಲೆಗಳ ಏರಿಕೆಯಾಗಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಮಿತುಲ್ ಶಾ ಹೇಳಿದ್ದಾರೆ.

ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ ಕೆ ವಿಜಯಕುಮಾರ್, ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ನಕಾರಾತ್ಮಕ ಬೆಳವಣಿಗೆಗಳು ಮುಂದುವರಿಯುತ್ತವೆ. ಯುದ್ಧ ನಡೆಯುವ ವರೆಗೆ ಕಚ್ಚಾ ತೈಲ ಬೆಲೆ ಏರಿಕೆಯಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸತತ ಕುಸಿತದ ಬಳಿಕ ಷೇರುಪೇಟೆ ಚೇತರಿಕೆ; ದಿನದಾಂತ್ಯಕ್ಕೆ ಸೆನ್ಸೆಕ್ಸ್‌ 580 ಅಂಕ ಜಿಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.