ETV Bharat / business

Share Marketನಲ್ಲಿ ಗೂಳಿ ಓಟ: ದಿನದ ಆರಂಭದಲ್ಲಿ ಸೆನ್ಸೆಕ್ಸ್​ 444 ಅಂಕ ಜಿಗಿತ

author img

By

Published : Jul 22, 2021, 12:28 PM IST

30 ಷೇರುಗಳ ಬಿಎಸ್‌ಇ ಸೂಚ್ಯಂಕವು ಆರಂಭಿಕ ವ್ಯವಹಾರಗಳಲ್ಲಿ 444.17 ಪಾಯಿಂಟ್‌ಗಳು ಅಥವಾ 0.85 ರಷ್ಟು ಹೆಚ್ಚಳವಾಗಿ 52,642.68 ಕ್ಕೆ ವಹಿವಾಟು ನಡೆಸುತ್ತಿದ್ದರೆ, ಎನ್‌ಎಸ್‌ಇ ನಿಫ್ಟಿ 129.15 ಪಾಯಿಂಟ್ ಅಥವಾ 0.83 ರಷ್ಟು ಏರಿಕೆ ಕಂಡು 15,761.25ಕ್ಕೆ ತಲುಪಿದೆ.

Share Market
ಬಿಎಸ್‌ಇ ಸೆನ್ಸೆಕ್ಸ್

ಮುಂಬೈ : ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕ ಸೂಚನೆಗಳ ನಡುವೆ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 444.17 ಪಾಯಿಂಟ್ ಏರಿಕೆ ಕಂಡು ಬಂದಿದ್ದು, ಈ ಮೂಲಕ 52,642.68ಕ್ಕೆ ತಲುಪಿದೆ. ಕಳೆದ ಎರಡು ಸೆಷನ್​​ನಲ್ಲಿ ಷೇರುಪೇಟೆ ಸಾವಿರಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು ಹೂಡಿಕೆದಾರರಲ್ಲಿ ಆತಂಕ ತಂದಿಟ್ಟಿತ್ತು.

30 ಷೇರುಗಳ ಬಿಎಸ್‌ಇ ಸೂಚ್ಯಂಕವು ಆರಂಭಿಕ ವ್ಯವಹಾರಗಳಲ್ಲಿ 444.17 ಪಾಯಿಂಟ್‌ಗಳು ಅಥವಾ 0.85 ರಷ್ಟು ಹೆಚ್ಚಳವಾಗಿ 52,642.68 ಕ್ಕೆ ವಹಿವಾಟು ನಡೆಸುತ್ತಿದ್ದರೆ, ಎನ್‌ಎಸ್‌ಇ ನಿಫ್ಟಿ 129.15 ಪಾಯಿಂಟ್ ಅಥವಾ 0.83 ರಷ್ಟು ಏರಿಕೆ ಕಂಡು 15,761.25ಕ್ಕೆ ತಲುಪಿದೆ.

ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಬಜಾಜ್ ಫೈನಾನ್ಸ್ ಶೇ.3 ರಷ್ಟು ಏರಿಕೆ ಕಂಡಿದ್ದು, ಟಾಟಾ ಸ್ಟೀಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಯುಎಲ್, ಐಸಿಐಸಿಐ ಬ್ಯಾಂಕ್ ಮತ್ತು ಇನ್ಫೋಸಿಸ್ ನಂತರದ ಸ್ಥಾನದಲ್ಲಿದೆ. ಮತ್ತೊಂದೆಡೆ, ಏಷ್ಯನ್ ಪೇಂಟ್ಸ್, ಪವರ್ ಗ್ರಿಡ್, ಬಜಾಜ್ ಆಟೋ ಮತ್ತು ಡಾ. ರೆಡ್ಡೀಸ್​ ಷೇರುಗಳು ಇಳಿಕೆ ಹಾದಿ ಹಿಡಿದಿವೆ.

ಮಂಗಳವಾರ ನಡೆದ ವಹಿವಾಟಿನಲ್ಲಿ ಸೆನ್ಸೆಕ್ಸ್ 354.89 ಪಾಯಿಂಟ್ ಅಥವಾ 0.68 ಶೇಕಡಾ ಇಳಿಕೆ ಕಂಡು 52,198.51 ಕ್ಕೆ ತಲುಪಿತ್ತು. ಇನ್ನು ನಿಫ್ಟಿ 120.30 ಪಾಯಿಂಟ್ ಅಥವಾ 0.76 ರಷ್ಟು ಕುಸಿದು 15,632.10ಕ್ಕೆ ಇಳಿದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.