ಮುಂಬೈ: ಇನ್ಫೋಸಿಸ್ ಮಾರುಕಟ್ಟೆ ಮೇಲಿನ ನಿರೀಕ್ಷೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಗಳಿಕೆ ಆಶಾದಾಯಕ ಭರವಸೆ ಮೂಡಿಸಿರುವ ನಿಟ್ಟಿನಲ್ಲಿ ಗುರುವಾರದ ವಹಿವಾಟಿನಂದು ಮುಂಬೈ ಷೇರುಮಾರುಕಟ್ಟೆ ಭರ್ಜರಿ ಚೇತರಿಕೆ ಕಂಡಿದೆ.
ಈಕ್ವಿಟಿ ಮಾನದಂಡದ ಸೂಚ್ಯಂಕಗಳು ಗುರುವಾರ ಶೇ.1ರಷ್ಟು ಹೆಚ್ಚಾಗಿದೆ. ಬಿಎಸ್ಇ ಎಸ್ & ಪಿ ಸೆನ್ಸೆಕ್ಸ್ 420 ಅಂಕ ಅಥವಾ ಶೇ.1.16ರಷ್ಟು ಏರಿಕೆಯಾಗಿ 36,472ಕ್ಕೆ ತಲುಪಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 122 ಅಂಕ ಅಥವಾ ಶೇ.1.15ರಷ್ಟು ಏರಿಕೆಯಾಗಿ 10,740 ಅಂಕ ತಲುಪಿತು.
ನಿಫ್ಟಿಯಲ್ಲಿ ರಿಯಾಲ್ಟಿ ಹೊರತುಪಡಿಸಿ ಎಲ್ಲಾ ವಲಯ ಸೂಚ್ಯಂಕಗಳು ನಿಫ್ಟಿ ಏರಿಕೆಕಂಡಿವೆ. ಐಟಿ ಶೇ.2.8, ಫಾರ್ಮಾ ಶೇ.1.6ರಷ್ಟು, ಆಟೋ ಶೇ.1.1ರಷ್ಟು ಮತ್ತು ಖಾಸಗಿ ಬ್ಯಾಂಕ್ ಶೇ.1 ರಷ್ಟು ಏರಿಕೆಯಾಗಿದೆ.
ಐಟಿ ದೈತ್ಯ ಇನ್ಫೋಸಿಸ್ ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ತನ್ನ ನಿವ್ವಳ ಲಾಭದಲ್ಲಿ 4,233 ಕೋಟಿ ರೂ.ಗಳಂತೆ ವರ್ಷದಿಂದ ವರ್ಷಕ್ಕೆ ಶೇ.12ರಷ್ಟು ಬೆಳವಣಿಗೆಯನ್ನು ದಾಖಲಿಸಿದ ನಂತರ ಪ್ರತಿ ಷೇರಿಗೆ ಶೇ.9.5 ರಷ್ಟು ಏರಿಕೆಯಾಗಿ 910 ರೂ.ಗೆ ತಲುಪಿದೆ.
ಹೆಚ್‌ಸಿಎಲ್ ಟೆಕ್ನಾಲಜೀಸ್ ಶೇ.3 ರಷ್ಟು ಏರಿಕೆ ಕಂಡು ಪ್ರತಿ ಷೇರಿಗೆ 634 ರೂ. ಫಾರ್ಮಾ ಮೇಜರ್ಗಳಾದ ಸಿಪ್ಲಾ ಮತ್ತು ಡಾ. ರೆಡ್ಡಿಸ್ ಕ್ರಮವಾಗಿ ಶೇ.5.5ರಷ್ಟು ಮತ್ತು ಶೇ.2.7ರಷ್ಟು ಏರಿಕೆ ಕಂಡಿವೆ. ಎಫ್‌ಎಂಸಿಜಿ ದೈತ್ಯ ಸಂಸ್ಥೆಗಳಾದ ಬ್ರಿಟಾನಿಯಾ ಮತ್ತು ನೆಸ್ಲೆ ಇಂಡಿಯಾ ಶೇ.3.6 ಮತ್ತು 3.2ರಷ್ಟು ಏರಿಕೆ ಕಂಡಿದೆ.
ಏಷ್ಯಾದ ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿದ್ದು, ಜಪಾನ್‌ನ ನಿಕ್ಕಿ ಶೇ. 0.76, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಶೇ.2ರಷ್ಟು ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ ಶೇ. 0.82ರಷ್ಟು ಕುಸಿದವು.