ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿಯಂತಹ ಬೃಹತ್ ಷೇರುಗಳ ಏರಿಕೆಯಿಂದಾಗಿ ಮುಂಬೈ ಷೇರು ಪೇಟೆಯಲ್ಲಿ ಗೂಳಿಯ ನಾಗಲೋಟ ಮುಂದುವರಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದಿನ ಆರಂಭಿಕ ವಹಿವಾಟಿನಲ್ಲೇ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿವೆ.
ದಿನದ ಆರಂಭದಲ್ಲಿ ಸೆನ್ಸೆಕ್ಸ್ 142.85 ಅಂಕಗಳ ಜಿಗಿತದೊಂದಿಗೆ (ಶೇ.0.27 ರಷ್ಟು) 53,126ರ ಗರಿಷ್ಠ ಮಟ್ಟವನ್ನು ಮುಟ್ಟಿದೆ. ನಿಫ್ಟಿ 42.25 ಅಂಕಗಳ ಏರಿಕೆಯೊಂದಿಗೆ (ಶೇ 0.27 ರಷ್ಟು) 15,902.60ರಲ್ಲಿ ವಹಿವಾಟು ನಡೆಸಿದೆ. ಕೆಲಕಾಲ ನಿಫ್ಟಿ 15,915.65 ಗಳ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಏಷ್ಯನ್ ಪೇಂಟ್ಸ್ ಶೇಕಡಾ 1 ರಷ್ಟು ಲಾಭಗಳಿಸಿದೆ. ಇದಲ್ಲದೆ ಡಾ.ರೆಡ್ಡೀಸ್, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ, ಕೊಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಹ ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದವು. ಮತ್ತೊಂದೆಡೆ, ಟೈಟಾನ್, ಟಿಸಿಎಸ್, ಅಲ್ಟ್ರಾಟೆಕ್ ಸಿಮೆಂಟ್, ಭಾರ್ತಿ ಏರ್ಟೆಲ್ ಮತ್ತು ಎಲ್ ಅಂಡ್ ಟಿ ಷೇರುಗಳ ಮೌಲ್ಯ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ 0.17 ರಷ್ಟು ಕಡಿಮೆಯಾಗಿ. 75.25 ಕ್ಕೆ ವಹಿವಾಟು ನಡೆಸಿತು.
ಆದರೆ, ದಿನದ ವಾಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 189 ಅಂಕಗಳ ಕುಸಿತದೊಂದಿಗೆ 52,735 ಹಾಗೂ ನಿಫ್ಟಿ 45.65 ಅಂಕಗಳ ನಷ್ಟದೊಂದಿಗೆ 15,814 ರಲ್ಲಿತ್ತು.