ETV Bharat / business

ಡಾಲರ್​ ಮುಂದೆ ಮಕಾಡೆ ಮಲಗಿದ ರೂಪಾಯಿ.. 6 ತಿಂಗಳ ಕನಿಷ್ಠ ಮೊತ್ತಕ್ಕೆ ಇಳಿಕೆ

ಮಂದಗತಿಯ ಜಾಗತಿಕ ಆರ್ಥಿಕತೆಯಿಂದಾಗಿ ಸೋಮವಾರದಂದು 29 ಪೈಸೆಯಷ್ಟು ಮೌಲ್ಯ ಕಳೆದುಕೊಳ್ಳುವ ಮೂಲಕ ಆರು ತಿಂಗಳ ಹಿಂದಿನ ಕನಿಷ್ಠ ಮೊತ್ತಕ್ಕೆ ಇಳಿಕೆಯಾಗಿದ್ದ ರೂಪಾಯಿ, ಪ್ರತಿ ಡಾಲರ್​ ಎದುರು ₹ 71.43ರಷ್ಟು ಮೌಲ್ಯ ಹೊಂದಿತ್ತು.

ಸಾಂದರ್ಭಿಕ ಚಿತ್ರ
author img

By

Published : Aug 20, 2019, 7:32 PM IST

Updated : Aug 20, 2019, 7:41 PM IST

ಮುಂಬೈ: ಕಚ್ಚಾ ತೈಲ ದರ ಏರಿಕೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಬಂಡವಾಳ ಹಿಂತೆಗೆತ ಸೇರಿದಂತೆ ಇತರ ನಡೆಗಳನ್ನು ಅನುಸರಿಸಿದ ಭಾರತೀಯ ಕರೆನ್ಸಿ ರೂಪಾಯಿ ಮೌಲ್ಯ ಮಂಗಳವಾರದ ಫಾರೆಕ್ಸ್​ ಮಾರುಕಟ್ಟೆಯಲ್ಲಿ ಡಾಲರ್​​ ಎದುರು 23 ಪೈಸೆ ಕುಸಿದಿದೆ.

ಮಂದಗತಿಯ ಜಾಗತಿಕ ಆರ್ಥಿಕತೆಯಿಂದಾಗಿ ಸೋಮವಾರದಂದು 29 ಪೈಸೆಯಷ್ಟು ಮೌಲ್ಯ ಕಳೆದುಕೊಳ್ಳುವ ಮೂಲಕ ಆರು ತಿಂಗಳ ಹಿಂದಿನ ಕನಿಷ್ಠ ಮೊತ್ತಕ್ಕೆ ಇಳಿಕೆಯಾಗಿದ್ದ ರೂಪಾಯಿ, ಪ್ರತಿ ಡಾಲರ್​ ಎದುರು ₹ 71.43ರಷ್ಟು ಮೌಲ್ಯ ಹೊಂದಿತ್ತು.ನಿಧಾನಗತಿಯ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಹೂಡಿಕೆದಾರರು ಸರ್ಕಾರದ ಹಸ್ತಕ್ಷೇಪಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.

ಸರ್ಕಾರವು ಶೀಘ್ರದಲ್ಲೇ ವಲಯವಾರ ಕ್ಷೇತ್ರಗಳ ಬಲ ವರ್ಧನೆ ನೂತನ ಸುಧಾರಣೆಗಳ ಮೂಲಕ ಮುಂದೆ ಬರಲಿದೆ ಎಂಬ ನಿರೀಕ್ಷೆಗಳಿವೆ. ಇಂಟರ್​ಬ್ಯಾಂಕ್‌ ವಿದೇಶಿ ವಿನಿಮಯ ಕೇಂದ್ರದಲ್ಲಿ ಡಾಲರ್​ ಎದುರು ರೂಪಾಯಿ, ₹ 71.56 ಮೌಲ್ಯದೊಂದಿಗೆ ದಿನದ ವಹಿವಾಟು ನಕರಾತ್ಮಕವಾಗಿ ಆರಂಭಿಸಿತು. ಋಣಾತ್ಮಕ ಹಾದಿಯಲ್ಲಿ ಸಾಗಿದ ರೂಪಾಯಿ ಅಂತಿಮವಾಗಿ 23 ಪೈಸೆ ಕುಸಿದು ₹ 71.66ಕ್ಕೆ ಕುಸಿಯಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್​ಐಐ) ಸೋಮವಾರದ ಬಂಡವಾಳ ಮಾರುಕಟ್ಟೆಯಿಂದ ₹ 303. 74 ಕೋಟಿಯಷ್ಟು ಸಂಪತ್ತು ಹಿಂತೆಗೆದುಕೊಂಡರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್​ ಬ್ರೆಂಟ್​ ಕಚ್ಚಾ ತೈಲ ದರದಲ್ಲಿ ಶೇ 0.05ರಷ್ಟು ಹೆಚ್ಚಾಗಿ, 59.77 ಡಾಲರ್​ಗೆ ಮಾರಾಟವಾಗಿದೆ.

Intro:Body:Conclusion:
Last Updated : Aug 20, 2019, 7:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.