ನವದೆಹಲಿ: ದೇಶಾದ್ಯಂತ ಡೆಡ್ಲಿ ವೈರಸ್ ಕೊರೊನಾ ಅಬ್ಬರಿಸುತ್ತಿರುವ ಮಧ್ಯೆ ಯುಎಸ್ ಡಾಲರ್ ಎದುರು ರೂಪಾಯಿ ಚೇತರಿಕೆ ಕಂಡಿದ್ದು, 45 ಪೈಸೆ ಏರಿಕೆ ಕಾಣುವ ಮೂಲಕ 75.27ರಲ್ಲಿ ವಹಿವಾಟು ನಡೆಯುತ್ತಿದೆ.
ವಿದೇಶಿ ವಿನಿಯಮ ಹಾಗೂ ದೇಶೀಯ ಷೇರುಗಳ ಖರೀದಿ ಸಕಾರಾತ್ಮಕವಾಗಿ ಆರಂಭಗೊಂಡಿರುವ ಕಾರಣ ರೂಪಾಯಿ ಮೌಲ್ಯ ಹೆಚ್ಚಳವಾಗಿದೆ. ನಿನ್ನೆ ಬುದ್ಧ ಪೂರ್ಣಿಮೆಯಾಗಿದ್ದ ಕಾರಣ ವಿದೇಶಿ ವಿನಿಮಯ ಮಾರುಕಟ್ಟೆ ಮುಚ್ಚಲಾಗಿತ್ತು.
ಇದರ ಜತೆಗೆ ಮುಂಬೈ ಷೇರು ಸೂಚ್ಯಂಕದಲ್ಲಿ ಸೆನ್ಸೆಕ್ಸ್ 600 ಅಂಕಗಳ ಜಿಗಿತ ಕಂಡಿದ್ದು 32,088.51ರಲ್ಲಿ ವಹಿವಾಟು ನಡೆಸಿದೆ. ನಿಫ್ಟಿ ಕೂಡ 175 ಅಂಕಗಳ ಏರಿಕೆ ಕಂಡು 9,374.05ಕ್ಕೆ ತಲುಪಿದೆ. ಹೀಗಾಗಿ ರಿಲಯನ್ಸ್ ಇಂಡಸ್ಟ್ರಿ ಸೇರಿ ಕೆಲ ಷೇರುಗಳ ಬೆಲೆ ಜಾಸ್ತಿಯಾಗಿದೆ.