ETV Bharat / business

ಡಾಲರ್​ಗೆ ರೂಪಾಯಿ ಪಂಚ್​! ಚೇತರಿಕೆ ಕಂಡ ರೂಪಾಯಿ

ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಕರೆನ್ಸಿ ರೂಪಾಯಿ 32 ಪೈಸೆ ಏರಿಕೆ ಕಂಡು ₹ 69.70 ಪೈಸೆಯಲ್ಲಿ ನಿಂತಿತ್ತು. ಸಂಜೆಯ ವೇಳೆಗೆ 45 ಪೈಸೆಯಷ್ಟು ಚೇತರಿಕೆ ಕಂಡು ₹ 69.55ರ ಮಟ್ಟದಲ್ಲಿ ವ್ಯವಹಾರ ನಡೆಸುತ್ತಿದೆ.

ಸಾಂದರ್ಭಿಕ ಚಿತ್ರ: ಗೆಟ್ಟಿ
author img

By

Published : Apr 30, 2019, 8:10 PM IST

ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತ ಹಾಗೂ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಇತರೆ ಕರೆನ್ಸಿಗಳ ವಿರುದ್ದ ಡಾಲರ್​ ವಹಿವಾಟಿನ ಹಿನ್ನೆಡೆ ಸೇರಿದಂತೆ ಇತರೆ ಕಾರಣಗಳಿಂದ ರೂಪಾಯಿ ವಿರುದ್ದ ಡಾಲರ್ ಇಳಿಕೆ ದಾಖಲಿಸಿದೆ.

ಇವತ್ತಿನ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಕರೆನ್ಸಿ ರೂಪಾಯಿ 32 ಪೈಸೆ ಏರಿಕೆ ಕಂಡು ₹ 69.70 ಪೈಸೆಯಲ್ಲಿ ನಿರತವಾಗಿತ್ತು. ಸಂಜೆಯ ವೇಳೆಗೆ 45 ಪೈಸೆಯಷ್ಟು ಚೇತರಿಕೆ ಕಂಡು ₹ 69.55ರ ಮಟ್ಟದಲ್ಲಿ ವ್ಯವಹಾರ ನಡೆಯುತ್ತಿತ್ತು.

ಫಾರೆಕ್ಸ್​ ಮಾರುಕಟ್ಟೆಯ ಆರಂಭಿಕ ಹಂತದಿಂದ ಡಾಲರ್ ನಡೆಯನ್ನು ಸಮರ್ಥವಾಗಿ ಎದುರಿಸಿದ ರೂಪಾಯಿ, ನಿನ್ನೆಯ ₹ 69.83 ಮೌಲ್ಯದಿಂದ ₹ 69.55ಕ್ಕೆ ತಲುಪಿದೆ. ಕಳೆದ ಶುಕ್ರವಾರದ ಪೇಟೆಯಲ್ಲಿ ಡಾಲರ್​ ಎದುರು ರೂಪಾಯಿ 70.02ರಷ್ಟು ಕುಸಿತ ಕಂಡು ವಹಿವಾಟು ನಡೆಸಿತ್ತು.

ಫಾರೆಕ್ಸ್​ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಮಾರಾಟಕ್ಕೆ ರೂಪಾಯಿ ರಫ್ತುದಾರರು ಬೆಂಬಲಿಸಿದ್ದರು. ಇದರ ಜೊತೆಗೆ ಬ್ರೆಂಟ್ ಕಚ್ಚಾ ತೈಲವು ಕಳೆದ ಆರು ತಿಂಗಳಲ್ಲಿ ಅತ್ಯಧಿಕ ಬೆಲೆ ಏರಿಕೆ ಕಂಡದ್ದು (ಬ್ಯಾರೆಲ್​ಗೆ 75.60 ಡಾಲರ್​) ಇಂದು ಪ್ರತಿ ಬ್ಯಾರೆಲ್​ಗೆ 70.02 ಡಾಲರ್​ನಲ್ಲಿ ವಹಿವಾಟು ನಡೆಸಿತು. ಈ ಬೆಳವಣಿಗೆಗಳು ರೂಪಾಯಿ ಮೌಲ್ಯ ಏರಿಕೆಗೆ ಸಹಕರಿಸಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.