ETV Bharat / business

ವಿಪ್ಲವದಲ್ಲಿ ರೂಪಾಯಿ... ಮೋದಿ ಅಧಿಕಾರಕ್ಕೆ ಬಂದಾಗ 59 ರೂ. ಇದ್ದ ಡಾಲರ್​ ಬೆಲೆ ಈಗ ₹ 75ಕ್ಕೆ ..! - ಭಾರತೀಯ ರಿಸರ್ವ್ ಬ್ಯಾಂಕ್

ಗುರುವಾರದ ಸಾಗರೋತ್ತರ ಫಾರೆಕ್ಸ್ ಬ್ಯಾಂಕ್​ನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಕುಸಿತದೊಂದಿಗೆ ₹ 74.96ರಲ್ಲಿ ಮುಗ್ಗರಿಸಿತ್ತು. ಮತ್ತೊಂದು ಸುತ್ತಿನ ಕುಸಿತ ಮತ್ತು ಸಾರ್ವಕಾಲಿಕ ಗರಿಷ್ಠ ಕುಸಿತದ ₹ 75.12ಕ್ಕೆ ತಲುಪಿತು. ಇದರ ಜೊತೆಗೆ ಕಳೆದ ವಹಿವಾಟಿನಲ್ಲಿ 86 ಪೈಸೆಯಷ್ಟು ಇಳಿಕೆ ದಾಖಲಿಸಿತ್ತು.

Dollar
ಡಾಲರ್
author img

By

Published : Mar 19, 2020, 4:43 PM IST

ಮುಂಬೈ: ಜಾಗತಿಕ ಕೊರೊನಾ ಭೀತಿ ಹಾಗೂ ಕ್ಷೀಣಿಸಿದ ದೇಶಿ ಇಕ್ವಿಟಿಯಿಂದಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಕುಸಿದಿದೆ.

ಗುರುವಾರದ ಸಾಗರೋತ್ತರ ಫಾರೆಕ್ಸ್ ಬ್ಯಾಂಕ್​ನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಕುಸಿತದೊಂದಿಗೆ ₹ 74.96ರಲ್ಲಿ ಮುಗ್ಗರಿಸಿತು. ಮತ್ತೊಂದು ಸುತ್ತಿನ ಕುಸಿತ ಮತ್ತು ಸಾರ್ವಕಾಲಿಕ ಗರಿಷ್ಠ ಕುಸಿತದ ₹ 75.12ಕ್ಕೆ ತಲುಪಿತು. ಇದರ ಜೊತೆಗೆ ಕಳೆದ ವಹಿವಾಟಿನಲ್ಲಿ 86 ಪೈಸೆಯಷ್ಟು ಇಳಿಕೆ ದಾಖಲಿಸಿತ್ತು.

ಯಾವುದೇ ಸಣ್ಣ ಡಾಲರ್ ಬೇಡಿಕೆ ಅಥವಾ ಆರ್‌ಬಿಐನಲ್ಲಿನ ಸ್ವಲ್ಪವೇ ಡಾಲರ್ ಮಾರಾಟವು ವಿನಿಮಯ ದರದ ಚಿತ್ರಣವನ್ನೇ ಬದಲಾಯಿಸುತ್ತದೆ. ಸಣ್ಣಗೆ ವಹಿವಾಟು ನಡೆಸುವ ಮಾರುಕಟ್ಟೆಯು ರೂಪಾಯಿ ಸಮಸ್ಯೆಯನ್ನು ದ್ವಿಗುಣಗೊಳಿಸುತ್ತದೆ. ಹೀಗಾಗಿ, ರೂಪಾಯಿ ವಹಿವಾಟಿನಲ್ಲಿ ಎಚ್ಚರಿಕೆ ಅತ್ಯಗತ್ಯ.

ರೂಪಾಯಿಯ ಈ ಹಿಂದಿನ ದಾಖಲೆಯ ಕನಿಷ್ಠ ಡಾಲರ್ ₹ 74.50 ಆಗಿತ್ತು. ಇದರ ದಾಖಲೆಯನ್ನು ಗುರುವಾರದ ವಹಿವಾಟಿನಂದು ಅಳಿಸಿಹಾಕಿದೆ. 2014ರಲ್ಲಿ ಎನ್​ಡಿಎ ಅಧಿಕಾರಕ್ಕೆ ಬಂದಾಗ ಶುರುವಿನಲ್ಲಿ ಡಾಲರ್ ಮೌಲ್ಯ ₹ 59.59ಯಷ್ಟಿತ್ತು. ಈಗ ಈಗ ಅದು ಗರಿಷ್ಠ ₹ 75.12ಕ್ಕೆ ತಲುಪಿದೆ.

ಡಾಲರ್ ಸೂಚ್ಯಂಕವು ಜಾಗತಿಕ ಕರೆನ್ಸಿಗಳ ವಿರುದ್ಧ ಗ್ರೀನ್‌ಬ್ಯಾಕ್‌ನ ಶಕ್ತಿಯನ್ನು ಅಳೆಯುವ ಮಾಪನ ಆಗಿದ್ದರಿಂದ ರೂಪಾಯಿಯ ಮೌಲ್ಯ ಕುಸಿತ 100 ಪೈಸೆಯಷ್ಟು ದಾಟಿದೆ. ಕರೆನ್ಸಿಯು ಅಮೆರಿಕದ ಖಜಾನೆಯಲ್ಲಿ ಸುರಕ್ಷಿತ ಕ್ಷೇತ್ರಗಳ ಹೂಡಿಕೆಗೆ ಪ್ರಯತ್ನಿಸಿದ್ದು ಮತ್ತೊಂದು ಕಾರಣವಾಯಿತು.

ವಿದೇಶಿ ಹೂಡಿಕೆದಾರರು ಸ್ಥಳೀಯ ಬಾಂಡ್‌ಗಳಲ್ಲಿ ತಮ್ಮ ಹಿಡುವಳಿಗಳನ್ನು ಮಾರಾಟ ಮಾಡಿದ್ದರಿಂದ ಭಾರತದ ಬಾಂಡ್ ಮೌಲ್ಯ ಕೂಡ ಏರಿತು. 10 ವರ್ಷಗಳ ಬಾಂಡ್ ಶೇ 6.42ರಲ್ಲಿ ವಹಿವಾಟು ನಡೆಸುತ್ತಿದ್ದು, ಇದು ಈ ಹಿಂದೆ ಶೇ 6.29ರಲ್ಲಿತ್ತು. ಮೌಲ್ಯವನ್ನು ತಗ್ಗಿಸಲು ಆರ್‌ಬಿಐ 10,000 ಕೋಟಿ ರೂ. ದ್ವಿತೀಯ ಮಾರುಕಟ್ಟೆ ಬಾಂಡ್ ಖರೀದಿಯನ್ನು ಬುಧವಾರ ಘೋಷಿಸಿತು. ಸೆನ್ಸೆಕ್ಸ್ ಶೇ 5.40 ಅಥವಾ 1,584 ಅಂಗಳು ಕುಸಿದು 27,285.25ರಲ್ಲಿ ವಹಿವಾಟು ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.