ETV Bharat / business

MAS ಹೋಲ್ಡಿಂಗ್ಸ್‌ನಿಂದ 'ಅಮಂತ್' ಸ್ವಾಧೀನಪಡಿಸಿಕೊಂಡ ರಿಲಯನ್ಸ್ ರೀಟೇಲ್ - ಆಕ್ಟೋಸೆರ್ಬಾ ಆಕ್ಟಿವ್ ಹೋಲ್‌ಸೇಲ್‌

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL), MAS ನಿಂದ 'ಅಮಾಂಟೆ' ಬ್ರಾಂಡ್‌ನ 100 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಂಡಿದೆ.

Reliance
Reliance
author img

By

Published : Nov 12, 2021, 7:03 AM IST

ನವದೆಹಲಿ: ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (Reliance Retail Ventures Limited) ಶ್ರೀಲಂಕಾ ಮೂಲದ MAS ಹೋಲ್ಡಿಂಗ್ಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ MAS ಬ್ರಾಂಡ್‌ಗಳಿಂದ 'ಅಮಾಂಟೆ' (amante) ಛತ್ರಿ ಬ್ರಾಂಡ್‌ನ ಅಡಿ ಚಿಲ್ಲರೆ ಒಳ ಉಡುಪು ವ್ಯವಹಾರಗಳನ್ನು ಸ್ವಾಧೀನಪಡಿಸಿಕೊಂಡಿದೆ.

2007 ರಲ್ಲಿ MAS ಸ್ಥಾಪಿಸಿದ 'ಅಮಂತ್ ವ್ಯಾಪಾರ'ವು (amant business) ಪ್ರೀಮಿಯಂ ಒಳ ಉಡುಪುಗಳ ಚಿಲ್ಲರೆ ಮತ್ತು ಸಗಟು ವಿತರಣೆಯಲ್ಲಿ 'ಅಮಂತ್', 'ಅಲ್ಟಿಮೋ' ಮತ್ತು 'ಎವೆರಿ ಡಿ ಬೈ ಅಮಂತ್' ಎಂಬ ಬ್ರಾಂಡ್‌ಗಳ ಅಡಿ ವ್ಯವಹಾರ ನಡೆಸುತ್ತಿತ್ತು. ಉತ್ಪನ್ನಗಳನ್ನು ಕಂಪನಿ - ಮಾಲೀಕತ್ವದ ಮಳಿಗೆಗಳು ಮತ್ತು ಬಹು - ಬ್ರಾಂಡ್ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಭಾರತ ಮತ್ತು ಶ್ರೀಲಂಕಾದಾದ್ಯಂತ ಇ-ಕಾಮರ್ಸ್ ಚಾನೆಲ್‌ಗಳ ಮೂಲಕ ಸಹ ಈ ಬ್ರಾಂಡ್ ಮಾರಾಟ ಮಾಡಲಾಗುತ್ತಿದೆ.

ಇದೀಗ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL), MAS ನಿಂದ 'ಅಮಾಂಟೆ' ಬ್ರಾಂಡ್‌ನ 100 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಎರಡು ಕಂಪನಿಗಳು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿರುವ RRVL ನಿರ್ದೇಶಕಿ ಇಶಾ ಅಂಬಾನಿ, " ನಮ್ಮ ಸಮೂಹಕ್ಕೆ ಉತ್ತಮ ಗುಣಮಟ್ಟದ ಹಾಗೂ ವಿನ್ಯಾಸದ ಅಮಾಂಟೆ ಬ್ರ್ಯಾಂಡ್ ಅನ್ನು ಸೇರಿಸಲು ನಾವು ಹೆಮ್ಮೆಪಡುತ್ತೇವೆ. ನಾವು ಅವರೊಂದಿಗೆ ಮಾಡಿಕೊಳ್ಳುತ್ತಿರುವ ಈ ಪಾಲುದಾರಿಕೆಯಿಂದ ಭಾರತೀಯ ಗ್ರಾಹಕರಿಗೆ ವಿಶ್ವ ದರ್ಜೆಯ ಉತ್ಪನ್ನ ಗುಣಮಟ್ಟದ ಬ್ರ್ಯಾಂಡ್​ಗಳನ್ನು ಒದಗಿಸುತ್ತೇವೆ ಎಂದಿದ್ದಾರೆ.

ಕಳೆದ ವರ್ಷ ಆರ್‌ಆರ್‌ವಿಎಲ್, ಆಕ್ಟೋಸೆರ್ಬಾ ಆಕ್ಟಿವ್ ಹೋಲ್‌ಸೇಲ್‌ (Actoserba Active Wholesale) ನಲ್ಲಿ ಅಲ್ಪಸಂಖ್ಯಾತ ಪಾಲು ಸ್ವಾಧೀನಪಡಿಸಿಕೊಂಡಿತು. RRVL ಮಾರ್ಚ್ 31, 2021 ಕ್ಕೆ ಕೊನೆಗೊಂಡ ವರ್ಷಕ್ಕೆ 1,57,629 ಕೋಟಿ ರೂ.ಗಳ ಏಕೀಕೃತ ವಹಿವಾಟು ನಡೆಸಿದೆ ಎಂದು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.