ನವದೆಹಲಿ: ರಿಲಯನ್ಸ್ ಜಿಯೋ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಮನದಲ್ಲಿ ಇಟ್ಟುಕೊಂಡು ಎರಡು ಹೊಸ ಯೋಜನೆಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ.
ಜಿಯೋ ‘ಧನ್ ಧನಾ ಧನ್’ ಕೊಡುಗೆಯಡಿ ₹ 499 ಮತ್ತು ₹ 777 ಬೆಲೆಯ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಜಾರಿಗೆ ತಂದಿದೆ. ದುಬೈನಲ್ಲಿ ನಡೆಯಲ್ಲಿರುವ 2020ರ ಐಪಿಎಲ್ ಸೀಸನ್ ಗುರಿಯಾಗಿಸಿ ಕ್ರಿಕೆಟ್ ವೀಕ್ಷಕರನ್ನು ಸೆಳೆಯಲು ಈ ಯೋಜನೆಗಳನ್ನು ವಿನ್ಯಾಸಗೊಳಿಸಿದೆ.
ಎರಡೂ ಯೋಜನೆಗಳು ಒಂದು ವರ್ಷ ಕಾಂಪ್ಲಿಮೆಂಟರಿ ಡಿಸ್ನಿ ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಕೆಲ ವಾರಗಳಲ್ಲಿ ಪ್ರಸಾರ ಆಗಲಿರುವ ಎಲ್ಲಾ ಕ್ರಿಕೆಟ್ ಪಂದ್ಯಗಳ ಸಂಪೂರ್ಣ ಸ್ಟ್ರೀಮಿಂಗ್ ನೀಡುತ್ತದೆ.
₹ 499 ಯೋಜನೆಯಡಿಯಲ್ಲಿ ಪ್ರಿಪೇಯ್ಡ್ ಡೇಟಾ ಯೋಜನೆ ದಿನಕ್ಕೆ 1.5 ಜಿಬಿ 4ಜಿ ಡೇಟಾ ನೀಡುತ್ತದೆ. ಇದು ಡೇಟಾ ಮಾತ್ರ ಟಾಪ್ ಅಪ್ ಯೋಜನೆಯಾಗಿದೆ. ಈಗಿನ ಜಿಯೋ ಪ್ರಿಪೇಯ್ಡ್ ಯೋಜನೆಯಡಿ ಕಾರ್ಯನಿರ್ವಹಿಸುತ್ತದೆ.
ಡೇಟಾ ಭತ್ಯೆಯ ಜೊತೆಗೆ ಜಿಯೋ ₹ 499 ಪ್ರಿಪೇಯ್ಡ್ ಯೋಜನೆಯು 399 ರೂ. ಮೌಲ್ಯದ ಒಂದು ವರ್ಷದ ಡಿಸ್ನಿ ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ ನೀಡುತ್ತದೆ. ಇದು 56 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಯು ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯ ಮೇಲೆ ₹ 100 ಹೆಚ್ಚುವರಿ ವೆಚ್ಚದಲ್ಲಿ ಸುಮಾರು ಎರಡು ತಿಂಗಳವರೆಗೆ ಒಟ್ಟು 74 ಜಿಬಿ ಡೇಟಾ ಸಿಗಲಿದೆ.
ಡಿಸ್ನಿ ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ ಪ್ರಸ್ತುತ ಕ್ರೀಡೆಗಳ ನೇರ ಪ್ರಸಾರಕ್ಕೆ ಅವಕಾಶ ನೀಡುತ್ತದೆ. ಹಾಟ್‌ಸ್ಟಾರ್ ಯಾವುದೇ ನಿರ್ದಿಷ್ಟ ಬದಲಾವಣೆ ಘೋಷಿಸದಿದ್ದರೆ, 2020ರ ಐಪಿಎಲ್ ಅನ್ನು ಈ ಜಿಯೋ ಚಂದಾದಾರರಿಗೆ ಉಚಿತವಾಗಿ ಪ್ರವೇಶಿಸಬಹುದು. 2020ರ ಐಪಿಎಲ್ ಪಂದ್ಯಾವಳಿ ಸೆಪ್ಟೆಂಬರ್ 19ರಿಂದ ಪ್ರಾರಂಭವಾಗಲಿದ್ದು, ಈ ವರ್ಷ ನವೆಂಬರ್ 10ರವರೆಗೆ ನಡೆಯಲಿವೆ.