ನವದೆಹಲಿ: ಭಾರತೀಯ ಮೊಬೈಲ್ ಮಾರುಕಟ್ಟೆಯನ್ನು ಆವರಿಸಿಕೊಂಡಿರುವ ಷಿಯೋಮಿ ಸಂಸ್ಥೆ ಇಂದು ತನ್ನ ನೂತನ ಎರಡು ಮೊಬೈಲ್ಗಳನ್ನು ಭಾರತೀಯರಿಗೆ ಪರಿಚಯಿಸಲಿದೆ.
ರೆಡ್ಮಿಯ ನೋಟ್ ಸರಣಿಯ ನೋಟ್ 8 ಹಾಗೂ ನೋಟ್ 8 ಪ್ರೋ ಮೊಬೈಲ್ ಇಂದು ಭಾರತೀಯ ಮೊಬೈಲ್ ಬಳಕೆದಾರರಿಗೆ ಲಭ್ಯವಾಗಲಿದೆ. ಕ್ಯಾಮರಾವೇ ಈ ಮೊಬೈಲ್ನ ಹೈಲೈಟ್ ಆಗಿದ್ದು, ಇನ್ನಷ್ಟು ಮಾಹಿತಿ ಇಲ್ಲಿದೆ...
ರೆಡ್ಮಿ ನೋಟ್ 8 ಪ್ರೋ ಮೊಬೈಲ್ 64 ಮೆಗಾಪಿಕ್ಸೆಲ್ ಕ್ಯಾಮರಾವನ್ನು ಹೊಂದಿರಲಿದ್ದು, ಈ ಮೂಲಕ 64 ಮೆಗಾಪಿಕ್ಸೆಲ್ ಕ್ಯಾಮರಾ ಹೊಂದಿದ ಮೊದಲ ಷಿಯೋಮಿ ಮೊಬೈಲ್ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.
ರೆಡ್ಮಿ ನೋಟ್ 8 ಮೊಬೈಲ್ 4GB ರ‍್ಯಾಮ್ ಹಾಗೂ 64GB ಆಂತರಿಕ ಸಾಮರ್ಥ್ಯವನ್ನು ಹೊಂದಿರಲಿದ್ದು, 12 ಸಾವಿರ ರೂ.ಗೆ ಲಭ್ಯವಿರಲಿದೆ. ರೆಡ್ಮಿ ನೋಟ್ 8 ಪ್ರೋ 6GB ರ‍್ಯಾಮ್ ಹಾಗೂ 128GB ಆಂತರಿಕ ಸಾಮರ್ಥ್ಯದೊಂದಿಗೆ ದೊರೆಯಲಿದ್ದು, ಇದರ ಬೆಲೆ 18 ಸಾವಿರ ಆಗಿರಲಿದೆ. ಇದೇ ಮಾದರಿಯ ಮೊಬೈಲ್ನ 8GB ರ‍್ಯಾಮ್ ಹಾಗೂ 128GB ಆಂತರಿಕ ಸಾಮರ್ಥ್ಯಕ್ಕೆ 21 ಸಾವಿರ ಬೆಲೆ ನಿಗದಿಪಡಿಸಲಾಗಿದೆ.