ನವದೆಹಲಿ: ಆನ್‌ಲೈನ್ ವಿಮಾ ವೇದಿಕೆ ಪಾಲಿಸಿ ಬಜಾರ್ ಮತ್ತು ಕ್ರೆಡಿಟ್ ಹೋಲಿಕೆ ಪೋರ್ಟಲ್ ಪೈಸಾ ಬಜಾರ್ ಅನ್ನು ನಿರ್ವಹಿಸುವ ಪಿಬಿ ಫಿನ್‌ಟೆಕ್, ಸಾರ್ವಜನಿಕರಿಗೆ ಮುಕ್ತವಾಗಿಸುವ (ಐಪಿಒ) ಮೂಲಕ ರೂ. 6,017.50 ಕೋಟಿ ಸಂಗ್ರಹಿಸಲು ಮಾರುಕಟ್ಟೆ ನಿಯಂತ್ರಕ ಸೆಬಿಗೆ ಕರಡು ದಾಖಲೆಪತ್ರ ಸಲ್ಲಿಸಿದೆ. ಐಪಿಒ ರೂ. 3,750 ಕೋಟಿ ಮೌಲ್ಯದ ಈಕ್ವಿಟಿ ಷೇರುಗಳು ಮತ್ತು ಪ್ರಸ್ತುತ ಷೇರುದಾರರಿಂದ ರೂ 2,267.50 ಕೋಟಿಗಳ ಆಫರ್ ಫಾರ್ ಸೇಲ್ (OFS) ಅನ್ನು ಒಳಗೊಂಡಿದೆ ಎಂದು ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (DRHP) ಹೇಳಿದೆ.
OFS ನ ಭಾಗವಾಗಿ, SVF ಪೈಥಾನ್ II (ಕೇಮನ್) 1,875 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡುತ್ತದೆ, ಯಶಿಶ್ ದಹಿಯಾ 250 ಕೋಟಿ ಮೌಲ್ಯದ ಷೇರುಗಳನ್ನು ಮತ್ತು ಕೆಲವು ಇತರ ಮಾರಾಟದ ಷೇರುದಾರರು ಸಹ ಷೇರುಗಳನ್ನು ನೀಡುತ್ತಾರೆ. ಐಪಿಒಗೆ ಮುಂಚಿತವಾಗಿ ಈಕ್ವಿಟಿ ಷೇರುಗಳ ಖಾಸಗಿ ನಿಯೋಜನೆಯ ಮೂಲಕ ಸುಮಾರು 750 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಸಂಸ್ಥೆಯು ಪರಿಗಣಿಸಬಹುದು.
ಐಪಿಒದಿಂದ ಬರುವ ಆದಾಯವನ್ನು ಕಾರ್ಯತಂತ್ರದ ಹೂಡಿಕೆಗಳು ಮತ್ತು ಸ್ವಾಧೀನಗಳಿಗೆ ಧನಸಹಾಯ ಮಾಡಲು ಬಳಸಲಾಗುತ್ತದೆ, ಭಾರತದ ಹೊರಗಿನ ವಿಸ್ತರಣೆ ಮತ್ತು ಸಾಮಾನ್ಯ ಕಾರ್ಪೊರೇಟ್ ಉದ್ದೇಶಕ್ಕಾಗಿಯೂ ಬಳಕೆ ಮಾಡಲಾಗುತ್ತದೆ.
ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ, ಮಾರ್ಗನ್ ಸ್ಟಾನ್ಲಿ ಇಂಡಿಯಾ ಕಂಪನಿ, ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ, ಐಸಿಐಸಿಐ ಸೆಕ್ಯುರಿಟೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್, ಐಐಎಫ್‌ಎಲ್ ಸೆಕ್ಯುರಿಟೀಸ್ ಮತ್ತು ಜೆಫರೀಸ್ ಇಂಡಿಯಾ ಇದರ ಪ್ರಮುಖ ಸಂಚಾಲಕರು. ಪಿಬಿ ಫಿನ್‌ಟೆಕ್ ತಂತ್ರಜ್ಞಾನ, ಡೇಟಾ ಮತ್ತು ನಾವೀನ್ಯತೆಯ ಶಕ್ತಿಯನ್ನು ಸದುಪಯೋಗಪಡಿಸಿಕೊಂಡು ವಿಮೆ ಮತ್ತು ಸಾಲ ನೀಡುವ ಪ್ರಮುಖ ಆನ್‌ಲೈನ್ ವೇದಿಕೆಯಾಗಿದೆ.
ಇದು ವಿಮೆ, ಕ್ರೆಡಿಟ್ ಮತ್ತು ಇತರ ಹಣಕಾಸು ಉತ್ಪನ್ನಗಳಿಗೆ ಅನುಕೂಲಕರ ಅವಕಾಶ ನೀಡುತ್ತದೆ ಮತ್ತು ಸಾವು, ರೋಗ ಮತ್ತು ಹಾನಿಗಳಿಂದಾದ ಆರ್ಥಿಕ ಪರಿಣಾಮದ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.