ETV Bharat / business

ಮೇ ಅಂತ್ಯದಲ್ಲಿ ಮತ್ತೆ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ಸಾಧ್ಯತೆ

ಮೇ ಕೊನೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್​​​​​ನ ದೈನಂದಿನ ದರ ಪರಿಷ್ಕರಿಸಿ ಮತ್ತೆ ದರ ಏರಿಸುವ ಸಾಧ್ಯತೆ ಇದೆ ಎಂದು ತೈಲ ಮಾರುಕಟ್ಟೆ ಕಂಪನಿ (ಒಎಂಸಿ) ಮೂಲಗಳು ತಿಳಿಸಿವೆ.

Petrol, diesel prices may rise again after daily price revision restarts
ಪೆಟ್ರೋಲ್​, ಡೀಸೆಲ್
author img

By

Published : May 11, 2020, 3:03 PM IST

ನವದೆಹಲಿ: ಲಾಕ್​ಡೌನ್​​​​ನಿಂದ​ ತತ್ತರಿಸಿದ್ದ ತೈಲ ಮಾರುಕಟ್ಟೆಗೆ ಚೇತರಿಕೆ ನೀಡಲು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಈ ತಿಂಗಳ ಕೊನೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್​​​​​ನ ದೈನಂದಿನ ದರ ಪರಿಷ್ಕರಿಸಿ ಮತ್ತೆ ದರ ಏರಿಸುವ ಸಾಧ್ಯತೆ ಇದೆ. ಮಾರ್ಚ್ 16ರಿಂದ ಈವರೆಗೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸಿಲ್ಲ.

ಈಗಾಗಲೇ ತೈಲ ಬೆಲೆ ಏರಿಕೆ ಮಾಡಲಾಗಿದೆ. ಪರಿಷ್ಕರಣೆ ನಂತರ ಮತ್ತೊಮ್ಮೆ ಬೆಲೆ ಏರಿಸಿದರೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಲಾಕ್​ಡೌನ್​ ತೆರವುಗೊಳಿಸಿದ ಅಥವಾ ತಿಂಗಳ ನಂತರ ಇಂಧನಗಳ ದೈನಂದಿನ ದರ ಪರಿಷ್ಕರಣೆ ಪ್ರಾರಂಭಿಸಬಹುದು ಎಂದು ಒಎಂಸಿ ಮೂಲಗಳು ತಿಳಿಸಿವೆ. ಆದರೆ, ಈವರೆಗೂ ಇದರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.

ಒಂದು ವೇಳೆ ಪರಿಷ್ಕರಣೆ ಸಂಭವಿಸಿದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿದಿನ ಏರಿಸಲು ಸಾಧ್ಯತೆ ಇದೆ. ಪ್ರತಿ ಬ್ಯಾರೆಲ್​​​ಗೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಳೆದ ತಿಂಗಳಿದ್ದ ದರಕ್ಕಿಂತ ಶೇ.50ಕ್ಕಿಂತ ಹೆಚ್ಚು ಗಳಿಸುವ ಕುರಿತು ಅಧ್ಯಯನ ಮಾಡಿದೆ.

ದೈನಂದಿನ ಬೆಲೆ ಪರಿಷ್ಕರಣೆ ಪುನರಾರಂಭಗೊಂಡರೂ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ದರ ಒಂದು ಹಂತ ಮೀರಿ ಹೆಚ್ಚಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಮೂಲಗಳು ಸೂಚಿಸಿವೆ. ಪೆಟ್ರೋಲಿಯಂ ಉತ್ಪನ್ನಗಳು ಪ್ರತಿದಿನ 30-50 ಪೈಸೆಗಳಷ್ಟು ಹೆಚ್ಚಾಗಬಹುದು. ತೈಲ ಕಂಪನಿಗಳು ವೆಚ್ಚ ಮತ್ತು ಮಾರಾಟದ ನಡುವಿನ ಅಂತರವನ್ನು ನಿವಾರಿಸುವವರೆಗೆ ಕಡಿಮೆ ಮಾಡಲಾಗುವುದಿಲ್ಲ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ಲೀಟರ್‌ಗೆ ₹ 71.26, ಡೀಸೆಲ್ ಲೀಟರ್‌ಗೆ ₹ 69.39 ಇದೆ. ಇದಕ್ಕೂ ಮುನ್ನ ಮಾರ್ಚ್ 16 ಮತ್ತು ಮೇ 4 ರ ನಡುವೆ ಕ್ರಮವಾಗಿ ₹ 69.59 ಮತ್ತು ₹ 62.28 ಇತ್ತು. ಮೇ 5 ರಿಂದ ದೆಹಲಿಯಲ್ಲಿ ಪ್ರಸ್ತುತ ಮಟ್ಟಕ್ಕೆ ಬೆಲೆ ಏರಿಕೆಯಾಗಿದೆ. ಅಲ್ಲದೆ, ರಾಜ್ಯ ಸರ್ಕಾರವು ಉತ್ಪನ್ನಗಳ ಮೇಲೆ ವ್ಯಾಟ್ ಅನ್ನು ಹೆಚ್ಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.