ETV Bharat / business

ರಷ್ಯಾದ S-400 ಕ್ಷಿಪಣಿ ಖರೀದಿ ಯಾವ ದೇಶದ ವಿರುದ್ಧ: ಭಾರತಕ್ಕೆ ದೊಡ್ಡಣ್ಣನ ಪ್ರಶ್ನೆ -

ಕಳೆದ ಅಕ್ಟೋಬರ್‌ನಲ್ಲಿ ಭಾರತವು ರಷ್ಯಾದೊಂದಿಗೆ 40,000 ಕೋಟಿ ರೂ.ಗಳ ವೆಚ್ಚದಲ್ಲಿ ಎಸ್ -400 ಕ್ಷಿಪಣಿ ಖರೀದಿಯ ಒಪ್ಪಂದಕ್ಕೆ ಸಹಿ ಹಾಕಿತ್ತು. ಅಮೆರಿಕದ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನಕ್ಕೆ ಪ್ರತಿಯಾಗಿ ರಷ್ಯಾ ವಿನ್ಯಾಸಗೊಳಿಸಿದ ಐದನೇ ತಲೆಮಾರಿನ ಕ್ಷಿಪಣಿ ಇದಾಗಿದೆ. ಈ ಒಪ್ಪಂದದ ಆರಂಭಿಕ ದಿನಗಳಿಂದ ಅಮೆರಿಕ ಇದಕ್ಕೆ ವಿರೋಧ ವ್ಯಕ್ತಪಡಿಸಿಕೊಂಡು ಬರುತ್ತಿದೆ.

ಸಾಂದರ್ಭಿಕ ಚಿತ್ರ
author img

By

Published : Jul 18, 2019, 8:22 PM IST

ವಾಷಿಂಗ್ಟನ್​: ಭಾರತದೊಂದಿಗಿನ ತನ್ನ ರಕ್ಷಣಾ ಪಾಲುದಾರಿಕೆಯನ್ನು ಬಲಪಡಿಸಲು ಅಮೆರಿಕ ಉತ್ಸುಕವಾಗಿದೆ ಎಂದು ಅಮೆರಿಕ ಹೇಳಿದೆ. ಇದೇ ವೇಳೆ 'ರಷ್ಯಾದಿಂದ ಖರೀದಿಸುತ್ತಿರುವ ''ಎಸ್- 400 ಕ್ಷಿಪಣಿ'' ಯಾವ ದೇಶದ ವಿರುದ್ಧವಾಗಿದೆ ಎಂದು ಭಾರತಕ್ಕೆ ಪ್ರಶ್ನಿಸಿದೆ.

ಭಾರತ ತನ್ನ ರಕ್ಷಣಾ ವ್ಯವಸ್ಥೆ ಬಲಪಡಿಸಲು ರಷ್ಯಾ ನಿರ್ಮಿತ ಎಸ್-400 ಕ್ಷಿಪಣಿ ಖರೀದಿಸುವ ನಿರ್ಧಾರದ ಜೊತೆಗೆ ಅದು ಮುಂದೆ ಸಾಗುತ್ತಿದೆ ಎಂದು ಪೆಂಟಗನ್‌ನ ಉನ್ನತ ಅಧಿಕಾರಿವೋರ್ವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಭಾರತವು ರಷ್ಯಾದೊಂದಿಗೆ 40,000 ಕೋಟಿ ರೂ.ಗಳ ವೆಚ್ಚದಲ್ಲಿ ಎಸ್ -400 ಕ್ಷಿಪಣಿ ಖರೀದಿಯ ಒಪ್ಪಂದಕ್ಕೆ ಸಹಿ ಹಾಕಿತ್ತು. ಅಮೆರಿಕದ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನಕ್ಕೆ ಪ್ರತಿಯಾಗಿ ರಷ್ಯಾ ವಿನ್ಯಾಸಗೊಳಿಸಿದ ಐದನೇ ತಲೆಮಾರಿನ ಕ್ಷಿಪಣಿ ಇದಾಗಿದ್ದು, ಒಪ್ಪಂದದ ಆರಂಭಿಕ ದಿನಗಳಿಂದ ಅಮೆರಿಕ ಇದಕ್ಕೆ ವಿರೋಧ ವ್ಯಕ್ತಪಡಿಸಿಕೊಂಡು ಬರುತ್ತಿದೆ.

ಭಾರತದೊಂದಿಗಿನ ನಮ್ಮ ರಕ್ಷಣಾ ಸಹಭಾಗಿತ್ವವು ಪ್ರಬಲವಾಗಿದೆ. ಮುಂದೆಯೂ ನಾವು ಇದನ್ನು ಬಲಪಡಿಸಿಕೊಂಡು ಹೋಗಲು ಬಯಸುತ್ತೇವೆ ಎಂದು ರಕ್ಷಣಾ ಇಲಾಖೆಯ ನೀತಿ ವಿಭಾಗದ ಉಪ ಕಾರ್ಯದರ್ಶಿ ಡೇವಿಡ್ ಜೆ ಟ್ರಾಚ್ಟೆನ್‌ಬರ್ಗ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಈ ಮೇಲಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡೇವಿಡ್​, "ನಾವು ಕಳುಹಿಸುತ್ತಿರುವ ಸಂದೇಶವೆಂದರೆ ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾದ ಐದನೇ ತಲೆಮಾರಿನ ಕ್ಷಿಪಣಿ ಸಾಧನಗಳನ್ನು ಇತರ ದೇಶಗಳು ಖರೀದಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ'' ಪರೋಕ್ಷವಾಗಿ ಖರೀದಿಯಿಂದ ಹಿಂದೆ ಸರಿಯುವಂತೆ ಭಾರತಕ್ಕೆ ಒತ್ತಾಯಿಸಿದ್ದಾರೆ ಎನ್ನಲಾಗ್ತಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.